Thursday, September 19, 2024

Tractor,tiller subsidy-ಪವರ್ ಟಿಲ್ಲರ್, ಮಿನಿಟ್ರ್ಯಾಕ್ಟರ್, ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿಆಹ್ವಾನ!

Machines Subsidy : ಕೃಷಿ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತರಿಗೆ ಬಿತ್ತನೆಯಿಂದ ಹಿಡಿದು ಬೆಳೆ ಕಟಾವು ಮಾಡುವವರಿಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ. 50 ರಿಂದ 90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಅವುಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ರೈತ ಭಾಂದವರೇ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ನೀಡಲು ಅರ್ಹ ರೈತರು ಅರ್ಜಿ ಸಲ್ಲಿಸಬಹುದು. ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳುಬೇಕು? ಎಂಬುದರ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗುವುದು.

ನಮ್ಮಲ್ಲಿ ಚಿಕ್ಕ ಚಿಕ್ಕ ಭೂ ಹಿಡುವಳಿ ಹೊಂದಿದ ರೈತರೇ ಹೆಚ್ಚಾಗಿ ಇರುವುದರಿಂದ ಅವರಿಗೆ ದೊಡ್ಡ ಯಂತ್ರಗಳನ್ನು ಖರೀದಿ ಮಾಡುವಷ್ಟು ಆರ್ಥಿಕ ಪರಿಸ್ಥಿತಿ ಇರುವುದಿಲ್ಲ ಅಂತಹ ರೈತರಿಗೆ ಅನುಕೂಲವಾಗಲು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರಗಳ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ:ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ ರೈತರಿಗೆ ಬಂದಿದೆ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್! ಇಲ್ಲಿದೆ ಲಿಂಕ್.

ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಸೌಲಭ್ಯ ಕಲ್ಪಿಸಲು ಭೂ ಸಿದ್ಧತೆ ಉಪಕರಣಗಳಾದ ಲೆವಲರ್, ರೋಟೋವೇಟರ್, ಕಲ್ಟಿವೇಟರ್, ಎಂ.ಬಿ.ನೇಗಿಲು, ಪವರ್ ಟಿಲ್ಲರ್, ಮಿನಿ ಟ್ರ್ಯಾಕ್ಟರ್ ಹಾಗೂ ಅಂತರ ಬೇಸಾಯ ಉಪಕರಣಗಳಾದ ಪವರ್ ವೀಡರ್, ಬ್ರಷ್ ಕಟರ್, ಬ್ಯಾಕ್ ಪ್ಯಾಕ್ ಸ್ಪ್ರೇಯರ್ ಮತ್ತಿತರ ಉಪಕರಣಗಳಿಗೆ ಶೇ. 50 ರಷ್ಟು ಸಾಮಾನ್ಯ ಜನರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನದಲ್ಲಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಯಂತ್ರೋಪಕರಣಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಬೇಕು.

ಇದನ್ನೂ ಓದಿ: 2024-25ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1)ಇಲಾಖೆಯ ಅರ್ಜಿ ಫಾರ್ಮ್

2)ಪಹಣಿ/ಆರ್ ಟಿ ಸಿ

3) ಆಧಾರ್ ಪ್ರತಿ

4) ಬ್ಯಾಂಕ್ ಪಾಸ್ ಪುಸ್ತಕ

5) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರು ಜಾತಿ ಪ್ರಮಾಣ ಪತ್ರ

6) 2 ಪಾಸ್ ಪೋರ್ಟ್ ಭಾವಚಿತ್ರ

7) 100 ರೂಪಾಯಿ ಸ್ಟ್ಯಾಂಪ್ ಪೇಪರ್(ಅಗತ್ಯತೆ ಇದ್ದರೆ ಮಾತ್ರ)

8)ಕೃಷಿ ಇಲಾಖೆಯ ಅಧಿಕಾರಿಗಳು ಹೇಳುವ ಇತರೆ ದಾಖಲೆಗಳು

ಸೂಚನೆ: ಕೃಷಿ ಮತ್ತು ತೋಟಗಾರಿಕೆಯ ಯಾವುದೇ ಸೌಲಭ್ಯಗಳನ್ನು ಪಡೆಯಲು ರೈತರ ನೋಂದಣಿ (FID)
ಮಾಡಿಸಿರಬೇಕು.

ಇತ್ತೀಚಿನ ಸುದ್ದಿಗಳು

Related Articles