Thursday, November 21, 2024

ಗೃಹಜ್ಯೋತಿ ಯೋಜನೆ: ( Gruhajhyoti Yojane ) ಗ್ರಾಹಕರು ಸೆಪ್ಟಂಬರ್‍ ತಿಂಗಳ ಉಚಿತ ಬಿಲ್ ಪಡೆಯಲು ‌ಆಗಸ್ಟ ಈ ತಾರೀಖುನೊಳಗೆ ಈ ಕೆಲಸ ಮಾಡಿ:

ಗೃಹಜ್ಯೋತಿ ನೋಂದಣಿ ಮಾಡಲು ಮರೆತ್ತಿದ್ದಿರಾ ಹಾಗಾದರೇ ತಪ್ಪದೇ ಇವಾಗಲೇ ಈ ಕೆಲಸ ಮಾಡಿ.

ಆತ್ಮೀಯ ಗ್ರಾಹಕರೇ ಅತೀ ಮುಖ್ಯವಾದ ಮಾಹಿತಿಯನ್ನು ಬೆಸ್ಕಾಂ ವಿದ್ಯುತ್ ಕೇಂದ್ರ ಪ್ರಕಟಿಸಿದೆ, ಗೃಹ ಜ್ಯೋತಿ ಯೋಜನೆಯ ಆಗಸ್ಟ್ ತಿಂಗಳ ಉಚಿತ ಬಿಲ್ ಸೆಪ್ಟೆಂಬರ್‍ ನಲ್ಲಿ ಪಡೆಯಲು ಈ ಕೆಳಗೆ ತಿಳಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು ತಡವಾದಲ್ಲಿ ಆಗಸ್ಟ್ ತಿಂಗಳ ವಿದುತ್ ಬಿಲ್ ಅನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಗೃಹಜ್ಯೋತಿ ಯೋಜನೆಯ ನೋಂದಣಿಗೆ ಕೊನೆಯ ದಿನಾಂಕ ಯಾವಾಗ? (Gruhajoyti application last date)ಸೆಪ್ಟೆಂಬರ್‍ ತಿಂಗಳಲ್ಲಿ ಉಚಿತ ಬಿಲ್ ಪಡೆಯಲು ಈ ಕೆಲಸ ತಪ್ಪದೇ ಮಾಡಬೇಕಾಗಿದೆ.

ಜೂನ್ 18 ರಿಂದ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದ್ದು, ಅರ್ಜಿ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ಇಲ್ಲ. ಅದರೆ ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ಪಡೆಯಲಿದ್ದಿರಿ.

ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ) ಅದರಿಂದ ಆಗಸ್ಟ್ ತಿಂಗಳಲ್ಲಿ ಉಚಿತ ಬಿಲ್ ಪಡೆಯಲು ಜುಲೈ 25ರ ಒಳಗೆ ಅರ್ಜಿ ಸಲ್ಲಿಸುವುದು ಈ ಯೋಜನೆ ಮಾರ್ಗಸೂಚಿಯ ಪ್ರಕಾರ ಕಡ್ಡಾಯವಾಗಿದೆ ಅದರಿಂದ ಕೂಡಲೇ ಅರ್ಜಿ ಸಲ್ಲಿಸದವರು ಅರ್ಜಿ ಸಲ್ಲಿಸಿ ಮಾಡಿಕೊಳ್ಳಿ.

ಇದನ್ನೂ ಓದಿ: ತೋಟಗಾರಿಕೆಯಲ್ಲಿ ಹೊಸ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸಲು” ಸಸ್ಯಸಂತೆ”

ಗೃಹಜ್ಯೋತಿ -ಕೊನೆಯ ತಿಂಗಳ ( ಹಿಂದಿನ ಬಾಕಿ) ಇದ್ದರೂ ಈ ಯೋಜನೆಯ ಪ್ರಯೋಜನ ಸಿಗುವುದು.

ಗ್ರಾಹಕರು ವಿದ್ಯುತ್ ಬಿಲ್ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆಪ್ಟೆಂಬರ್ 30 ರೊಳಗೆ ಪಾವತಿಸಬೇಕು (ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.)

ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ,

ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್‌’ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ).

ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಗಿಂತ ಹೆಚ್ಚಿರಬಾರದು.

ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್’ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ.

ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಣಿ ಮಾಡಿಕೊಳ್ಳಿ.

https://sevasindhugs.karnataka.gov.in/

Gruhajoyti website link- ಯೋಜನೆಗೆ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ನೋಂದಾಯಿಸಿಕೊಳ್ಳುವುದು ಹೇಗೆ?

ಹಂತ 1: https://sevasindhugs.karnataka.gov.in ಭೇಟಿ ನೀಡಿ, ನಂತರ Acknowledgement ಓದಿ ಮತ್ತು ಪರಿಶೀಲನೆಗಾಗಿ Captcha ನಮೂದಿಸಿ Submit ಮಾಡಿ

ಹಂತ -2: ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಹೆಸರು ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಹಂತ-3: ಎಸ್ಕಾಂ ಹೆಸರನ್ನು ಆಯ್ಕೆಮಾಡಿ ಬೇಕಾಗುತ್ತದೆ. ನಂತರ

ಹಂತ-4: ನಿಮ್ಮ ವಿದ್ಯುತ್ ಬಿಲ್‌ನಲ್ಲಿ ಕಾಣುವ ಖಾತೆ ಸಂಖ್ಯೆಯನ್ನು ನಮೂದಿಸಿ. ಖಾತೆದಾರರ ಹೆಸರು ಮತ್ತು ವಿಳಾಸವನ್ನು ಪರೀಕ್ಷಿಸಿಕೊಳ್ಳಿ.ನಂತರ

ಹಂತ-5: ನಿಮ್ಮ ನಿವಾಸಿ ವಿಧವನ್ನು ಆಯ್ಕೆಮಾಡಿ ಮಾಡಬೇಕಾಗುತ್ತದೆ. ನಂತರ,

ಹಂತ-6: ಸಂವಹನಕ್ಕಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಹಾಗೇ ಮುಂದೆ

ಹಂತ-7 ನಿಮ್ಮ ವಿವರಗಳನ್ನು ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ. ನಂತರ,

ಹಂತ-8: ನಮೂದಿಸಲಾದ ದೂರವಾಣಿ ಸಂಖ್ಯೆಗೆ ಬಂದ

OTP ಅನ್ನು ನಮೂದಿಸಿ ನಂತರ Submit ಕೊಟ್ಟರೆ ಸಾಕು ನಿಮ್ಮ ಅರ್ಜಿ ಸಲ್ಲಿಕೆಯಾಗಿ ಸ್ವೀಕೃತಿ ಸಿಗುವುದು.

(Bescome helpline number) ವ್ಯಾಪ್ತಿಯ ಜಿಲ್ಲೆಗಳ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು:

ವಿದ್ಯುತ್ ಸಂಬಂಧಿತ ಕುರಿತಾದ ದೂರುಗಳನ್ನು ಸಂದೇಶ, ಫೋಟೋ/ ವೀಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ ಪರಿಹಾರ ಪಡೆಯಿರಿ.

ಇದನ್ನೂ ಓದಿ: Aadhaar Card: ಗಮನಿಸಿ, ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೊನೆಯ ಅವಕಾಶ!

ಬೆಂಗಳೂರು ನಗರ- 82778 84011, 82778 8401 82778 84013, 82778 84014, ಕೋಲಾರ -82770 84015, ಚಿಕ್ಕಬಳ್ಳಾಪುರ -82778 84016, ಬೆಂಗಳೂರು ಗ್ರಾಮಾಂತರ- 8277884017 , ರಾಮನಗರ- 827

78 84015, ಚಿಕ್ಕಬಳ್ಳಾಪುರ -82778 84016, – , ರಾಮನಗರ- 82778 84018,ತುಮಕೂರು -82778 84019,ಚಿತ್ರದುರ್ಗ- 82778 84020, ದಾವಣಗೆರೆ-82778 84021,

ಇತ್ತೀಚಿನ ಸುದ್ದಿಗಳು

Related Articles