Thursday, September 19, 2024

ಸಮಗ್ರ ಕೃಷಿಯಿಂದ ವಾರ್ಷಿಕ 12 ರಿಂದ 15 ಲಕ್ಷ ಆದಾಯ ಪಡೆಯುವ ಕಡಲತೀರದ ಸಾಧಕ ರೈತ.

ಕೃಷಿ ಪ್ರಧಾನ ದೇಶ ಭಾರತ, ಇಲ್ಲಿ 70% ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ ಇಂದು ಕೃಷಿಯಿಂದ ಯಾವುದೇ ಲಾಭವಿಲ್ಲವೆಂದು ಇತರ ಚಟುವಟಿಕೆಯಲ್ಲಿ ತೊಡಗುತಿದ್ದಾರೆ. ಇಂದು ಕೃಷಿ ಬೂಮಿ 30% ರಷ್ಟು ಕೃಷಿಯೇತರ ಬೂಮಿಯಾಗಿ ಪರಿವರ್ತನೆಯಾಗುತ್ತಿದೆ. ಇಂತಹ ಕಾಲಗಟ್ಟದಲ್ಲಿಯೂ ಪಾರಂಪರಿಕವಾಗಿ ತಮ್ಮ ತಲೆ ತಲೆಮಾರಿನಿಂದ ಬಳುವಳಿಯಾಗಿ ಬಂದ ಭೂಮಿಯ ಸಾಗುವಳಿಯ ಜೊತೆಗೆ ಆಯಾಕಾಲಗಟ್ಟದಲ್ಲಿ ಅದಕ್ಕೆ ತಕ್ಕಂತೆ ಕೃಷಿಯಲ್ಲಿ ತಾಂತ್ರಿಕತೆ, ಯಂತ್ರೋಪಕರಣ ಮಾರ್ಪಾಡು ಮಾಡಿಕೊಳ್ಳುತ್ತ ಕೃಷಿಯಲ್ಲಿ ಲಾಭದ ಜೋತೆ ಖುಷಿ ಕಾಣುವವರು ಇದ್ದಾರೆ. ಅಂತಹವರಲೊಬ್ಬರು ಉತ್ತರ ಕನ್ನಡ ಜಿಲ್ಲೆಯ, ಅಂಕೋಲಾ ತಾಲೂಕಿನ ಹಿಲ್ಲೂರಿನ ಶ್ರೀ ತಿಮ್ಮಣ್ಣ ವಿಠೋಬ ನಾಯಕರವರು.. ಅವರ ಕೃಷಿ ಜೀವನ ನಡೆದು ಬಂದ ಇತ್ತಿಚಿನ ಐದಾರು ವರ್ಷಗಳ ಪಯಣದತ್ತ ಒಂದು ನೋಟ..

ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ

60ರ ಆಸುಪಾಸಿನ ತಿಮ್ಮಣ್ಣ ನಾಯಕರು ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ಇತರ ರೈತರ ಮನೋಬಾವದಂತೆ ಕೃಷಿ ಲಾಭದಾಯಕ ವಲ್ಲವೆಂದು ತಮ್ಮ 3 ಗಂಡು ಮಕ್ಕಳಿಗು ಉನ್ನತ ಶಿಕ್ಷಣ ಕೊಡಿಸಿ ನಗರದತ್ತ ಮೂಖಮಾಡಿಸಿದರು.. ಆದರೆ ಕೃಷಿಯ ಕಡೆಯಿರುವ ಅವರ ಒಲವು ಬಳುವಳಿಯಾಗಿ ಬಂದ ಭೂಮಿಯ ಸಾಗುವಳಿ ಬಿಡಲು ಮನಸಿಲ್ಲದ ಅವರು ಇಲ್ಲಿಯೆ ಉಳಿದರು. ಕುಟುಬಂದವರ ಸಹಕಾರವು ಇವರ ಆಸಕ್ತಿಗೆ ಕೈಜೊಡಿಸಿತು.. ಒಬ್ಬ ಮಗ ಇವರ ಜೊತೆ ಉಳಿದು ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.. ಸುಮಾರು 12ಎಕರೆ ಭೂಮಿಯಲ್ಲಿ 10ಎಕರೆ ಭತ್ತದ ಗದ್ದೆ ಹಾಗೂ 2 ಎಕರೆ ಬೆಣ ಹೊಂದಿರುವ ಇವರು ಸಂಪೂರ್ಣವಾಗಿ 10 ಎಕರೆ ಗದ್ದೆಯಲ್ಲಿ ಭತ್ತದ ನಾಟಿ ಮಾಡುತಿದ್ದರು. 2015-16ರ ಹೊತ್ತಿಗೆ ಕೃಷಿ ಇಲಾಖೆಗೆ ಬೇಟಿ ನೀಡಿದಾಗ ಇವರಿಗೆ ಇಲಾಖೆಯ ಯೋಜನೆಯಡಿ ಭತ್ತದ ನಾಟಿ ಮಾಡಿಸಲಾಗಿತ್ತು.

2016-17ರಲ್ಲಿ ಸಾಲು ನಾಟಿ ಮಾಡಿಸಲಾಯಿತು. 2016-17 ನೇ ಸಾಲಿನಲ್ಲಿ ಕೃಷಿಯಲ್ಲಿ ಯಾಂತ್ರಿಕೃರಣ ಬಳಕೆ ಕುರಿತು ಹಿಲ್ಲೂರಿನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿದ್ದ ಇವರು ಇಲಾಖೆಯ ಜೊತೆ ಸಂಪರ್ಕ ಹೊಂದಲಾರಂಬಿಸಿದರು.. , ಪ್ರಗತಿಪರ ರೈತರ ತಾಕುಗಳಿಗೆ ಪ್ರವಾಸ, ತರಬೇತಿಯಲ್ಲಿ ಭಾಗವಹಿಸುವುದರ ಜೊತೆಗೆ ತಮ್ಮ ಕೃಷಿ ಭೂಮಿಯಲ್ಲಿ ಹಲವು ರೀತಿಯಲ್ಲಿ ಮಾರ್ಪಾಡುಮಾಡಿದರು. ಇಲಾಖೆಯ ಸಹಾಯಧನದಡಿ ಸ್ವತಃ ಟಿಲ್ಲರ್, ಕೋನೋವಿಡರ್, ಕಳಯತೆಗೆಯುವ ಯಂತ್ರ, ತುಂತುರು ನೀರಾವರಿ ಘಟಕ, ಕಬ್ಬಿನ ಗಾಣ ಇನ್ನೂ ಹೆಚ್ಚಿನ ಯಂತ್ರೋಪಕರಣ ಪಡೆದು ಕೃಷಿ ಕೆಲಸವನ್ನು ಸುಲಭಗೊಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಉತ್ತಮ ಅವಕಾಶ :10 ಲಕ್ಷ,15 ಲಕ್ಷ, ಸಹಾಯಧನ ಮತ್ತು 2 ಕೋಟಿ ಬ್ಯಾಂಕ್ ಸಾಲದ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ:

2017-18ರ ಆಚೆಗೆ ಕೃಷಿ ಬೂಮಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿದ ಇವರು ಸಮಗ್ರ ಕೃಷಿಯತ್ತ ಒಲವು ಮೂಡಿಸಿಕೊಂಡರು. ಬರಿ ಭತ್ತ ಒಂದೆ ಬೆಳೆಯುತಿದ್ದವರ ಜಮೀನಿನಲ್ಲಿ ಇಂದು ಕೃಷಿ, ತೊಟಗಾರಿಕೆ , ಹೈನುಗಾರಿಕೆ, ಕೋಳಿಸಾಕಾಣಿಕೆ, ಜೇನು ಸಾಕಾಣಿಕೆ,ಅರಣ್ಯಕೃಷಿ, ಸಮಗ್ರವಾಗದ ಕೃಷಿ ಪದ್ದತಿಯನ್ನು ಕಾಣಬಹುದಾಗಿದೆ.. ಈ ಬದಲಾವಣೆಗೆ ತನ್ನ ಹಾಗೂ ಇಲಾಖೆಯ ಸಹಕಾರ ತಮಗೆ ಸಿಕ್ಕ ತರಬೇತಿ, ತಾಂತ್ರಿಕ ಮಾಹಿತಿ ಪ್ರೋತ್ಸಾಹವನ್ನು ಹಿರಿಯರು ಮೇಲುಕು ಹಾಕುತ್ತಿರುವುದು ಹೆಮ್ಮೆಯ ವಿಷಯವಾಗಿದೆ..

ತಿಮ್ಮಣ್ಣ ನಾಯಕವರು ತಮ್ಮ ಕೃಷಿ ಭತ್ತದ ಗದ್ದೆಯಲ್ಲಿ ಇಂದು 4 ಎಕರೆ ಭತ್ತದ ಗದ್ದೆಯನ್ನು ಹೊಂದಿದ್ದು ಮುಂಗಾರಿನಲ್ಲಿ ಭತ್ತ ಬೆಳೆಯುತ್ತಾರೆ.. ಭತ್ತದ ಗದ್ದೆಯಲ್ಲಿಯು ಕೂಡಾ ಹೈಬ್ರೀಡ್ ತಳಿಗಳ ಬಳಕೆ, ಆಧಿಕ ಇಳುವರಿ ಭತ್ತದ ತಳಿಗಳ ಸಾಂಪ್ರದಾಯಿಕ ತಳಿಗಳ ನಾಟಿ ಮಾಡುತಿದ್ದಾರೆ.. ಒಮ್ಮೆ ಇವರ ಗದ್ದೆಗೆ ಬೇಟಿ ನೀಡಿದರೆ 4-5 ತಳಿಗಳ ಭತ್ತವನ್ನು ಒಟ್ಟಿಗೆ ಕಾಣಬಹುದಾಗಿದೆ. ಭತ್ತದ ಗದ್ದೆಯ ಬದುವಿನ ಮೇಲೆ ಮನೆ ನಿರ್ವಹಣೆಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ.. ಹಿಂಗಾರಿನಲ್ಲಿ ಉದ್ದು, ಹೆಸರು, ಬವಡೆ, ತರಕಾರಿ, ಮೇವಿನ ಬೆಳೆಗಳನ್ನು ಬೆಳೆಯುತ್ತಾರೆ..

ಜೊತೆಗೆ 2017-18 ರಲ್ಲಿ 2 ಗುಂಟೆ ಜಾಗದಲ್ಲಿ ಅರಂಭವಾದ ಇವರ ಕಬ್ಬಿನ ಬೆಳೆಯುವ ಕ್ಷೇತ್ರ 2022-23ರ ಹೊತ್ತಿಗೆ 1 ಎಕರೆವರೆಗೆ ಹೆಚ್ಚಾಗಿದೆ..
ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಜಾಯಿಕಾಯಿ ಮಾವು ಗೇರಿನ ಜೊತೆಗೆ ಮನೆ ನಿರ್ವಹನೇಗೆ ಬೇಕಾದ ಹಲಸು, ಬಾಳೆ, ಕಾಳುಮೆಣಸು ಹಣ್ಣಿನ ಮರಗಳನ್ನು ಹೂವಿನ ಗಿಡಗಳನ್ನು ಬೆಳೆದಿರುತ್ತಾರೆ. ಗಿಡಗಳಿಗೆ ಸ್ವತಃ ಕಸಿ ಕಟ್ಟುವ ಹವ್ಯಾಸ ಹೊಂದಿರುವ ಇವರು ಮಾವು, ಲಿಂಬು ಗಿಡಗಳಿಗೆ ಕಸಿ ಕಟ್ಟುತ್ತಾರೆ..

ಇದನ್ನೂ ಓದಿ: ಗುಡ್ ನ್ಯೂಸ್ :2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ತಮ್ಮ ಜಮೀನಿಗೆ ಬೇಕಾದ ಗೊಬ್ಬರ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಒಳಗೊಂಡಿದ್ದಾರೆ,, ಎಮ್ಮೆ ಹಸು, ಕರುಗಳನ್ನು ಪ್ರತ್ಯೆಕವಾದ ಕೊಟ್ಟಿಗೆ ಯಲ್ಲಿ ನಿರ್ವಹಣೆ ಮಾಡುತ್ತಾ ಬಂದಿರುತ್ತಾರೆ.. ಹಸುಗಳಿಂದ ಸಿಗುವ ಹಾಲನ್ನು ಹತ್ತಿರದ ಹಾಲಿನ ಡೈರಿಗೆ ಮಾರಾಟ ಮಾಡುತ್ತಾರೆ.. ಅಡುಗೆಗೆ ಗೊಬ್ಬರ ಗ್ಯಾಸ, ಜಮೀನಿಗೆ ಸಗಣಿ ಗೊಬ್ಬರ ಬಳಸುವುದರಿಂದ ಇವರಿಗೆ ಕರ್ಚು ಕಡಿಮೆ ಆದಂತಾಗಿದೆ.. ಇದರ ಜೊತೆಗೆ ನಾಟಿಕೊಳಿ ಸಾಕಾಣಿಕೆಗೆ ಪ್ರತ್ಯೇಕ ಮನೆ. ಹಾಗೂ ಮಾಂಸದ ಕೋಳಿ ಸಾಕಾಣಿಕೆಗೆ ಪ್ರತ್ಯೇಕ ಮನೆ ಮಾಡಿ ಮಾರುಕಟ್ಟೆ ಬೇಡಿಕೆಗನುಗುಣವಾಗಿ ಅವುಗಳ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.

ಇದರ ಜೊತೆಗೆ ಜೇನು ಸಾಕಾಣಿಕೆ , ಬಾತುಕೋಳಿಗಳ ಸಾಕಾಣಿಕೆ ಕೂಡ ಅವರು ಮಾಡುತಿದ್ದಾರೆ. ಸುಮಾರು 1 ಎಕರೆ ಅರಣ್ಯ ಅಕೇಸಿಯಾ ಕೃಷಿಯನ್ನು ಮಾಡಿದ್ದಾರೆ..

.ಇದರ ಜೊತೆಗೆ 2022-23 ರಲ್ಲಿ ಹುಲ್ಲಿನ ಬೆಳೆಯನ್ನು 20 ಗುಂಟೆ ಜಾಗದಲ್ಲಿ ಬೆಳೆದಿರುತ್ತಾರೆ..
ಇವರ ವಾರ್ಷಿಕ ಆದಾಯ : ಕೃಷಿ,ತೋಟಗಾರಿಕೆ,ಮತ್ತು ಕೃಷಿ ಜೊತೆಗೆ ಉಪಕಸಬುಗಳಿಂದ ಆದಾಯ 12-15 ಲಕ್ಷ ಎಂದು ತಿಳಿಸಿರುತ್ತಾರೆ.
ಈ ಎಲ್ಲಾ ಕೃಷಿ ಕೆಲಸಕ್ಕೆ ಇವರಿಗೆ ಪ್ರಶಸ್ತಿಗಳು ಕೂಡಾ ದೊರೆತ್ತಿರುತ್ತವೆ.
ಇವರಿಗೆ ದೊರೆತ ಪ್ರಶಸ್ತಿಗಳು:
*ತಾಲೂಕುಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
*ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..

ಮುಂದೆ ಇದರಿಂದ ಇನ್ನು ಹೆಚ್ಚಿನದಾಗಿ ತಮ್ಮನ್ನು ಕೃಷಿಯಲ್ಲಿ ತೊಡಗಿಸಿ ಕೊಂಡ ಇವರು ಹಲವು ಕೃಷಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸುವಂತಾಗಿದೆ..
2021-22ರಲ್ಲಿ 1 ಎಕರೆ ಹೊಸ ಭೂಮಿ ಖರೀದಿಸಿ ಅಲ್ಲಿ ಅಡಿಕೆ ಕೃಷಿ ಮಾಡೆಲು ಮುಂದಾಗಿದ್ದಾರೆ..
ಇಂದು ಇವರ ಈ ಕೃಷಿಯಲ್ಲಿ ಬದಲಾವಣೆ ಊರಿನ ಎಲ್ಲರಿಗೂ ಮಾರ್ಗದರ್ಶನವಾಗಿದೆ,, ಮತ್ತು ಕೃಷಿ ಮಾಡಲು ಆಸ್ತಕರಿಗೆ ಸ್ಪೂರ್ತಿ ಆಗಿದ್ದಾರೆ.
ಒಂದು ಕಾಲದಲ್ಲಿಕೃಷಿ ಲಾಭದಾಯಕವಲ್ಲ ವೆಂದು ಹೇಳುತಿದ್ದವರು ಇಂದು ಕೃಷಿ ಯಿಂದ ಖುಷಿ, ನೆಮ್ಮದಿ.. ರೈತರಿಗೆ ಎಲ್ಲಾ ಸಮಯದಲ್ಲು ಉದ್ಯೂಗ , ಆದಾಯ ತಂದುಕೊಡುವ ಹಾಗೆ ಸಮಗ್ರ ಕೃಷಿ ಮಾಡಿದರೆ ಕೃಷಿ ಕಂಡಿತವಾಗಿಯು ಲಾಭ ದಾಯಕ ವೆಂದು ಹೇಳುವುದ ಜೊತೆಗೆ ಮಾಡಿ ತೊರಿಸಿರುವುದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ
ಮಾಹಿತಿ ಕೃಪೆ: ಕವಿತಾ ಗೌಡ ( ಕೃಷಿ ಇಲಾಖೆ)

ಇತ್ತೀಚಿನ ಸುದ್ದಿಗಳು

Related Articles