Wednesday, November 13, 2024

10 ಲಕ್ಷ ಮೊತ್ತದ ಅಪಘಾತ ವಿಮೆ ಜಾರಿಗೊಳಿಸಿದ ಅಂಚೆ ಇಲಾಖೆ

ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.
ಆಕಸ್ಮಿತ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ.

ಖಾತೆ ತೆಗೆಯಲು ವಯೋಮಿತಿ:


ಕನಿಷ್ಠ 18 ಗರಿಷ್ಠ 65 ವರ್ಷದ ಒಳಗಿನವರು ಕೂಡಲೇ ಖಾತೆ ತರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.

ಖಾತೆ ತೆರೆಯುವುದು ಎಲ್ಲಿ??


ನಿಮ್ಮ ಹತ್ತಿರದ ಅಂಚೆ ಇಲಾಖೆ( post office) ವಾರ್ಷಿಕವಾಗಿ 399.00 ರೂ ಹಣ ಕಟ್ಟಿದರೆ ಈ ಯೋಜನೆಯಡಿ 10.ಲಕ್ಷ ರೂ . ಅಪಘಾತ ವಿಮೆಗೆ ಅರ್ಹರಾಗುತ್ತಿರಿ.

ಯಾವ ಯಾವ ಅವಘಡ ಸನ್ನಿವೇಶಕ್ಕೆ ಮೊತ್ತ ಪಾವತಿಸಿಸುತ್ತೆ:


ವಿಮಾ ಯೋಜನೆ ಫಲಾನುಭವಿಗಳು ಆಕಸ್ಮಿಕ ಸಾವನ್ನಪ್ಪಿದರೆ ಅವರು ಕುಟುಂಬಸ್ಥರಿಗೆ ಹತ್ತು ಲಕ್ಷ ರೂ.ನೀಡಲಾಗುತ್ತದೆ. ಅಂದರೆ ಬಸ್,ಕಾರು ಇನ್ನಿತರ ಅಪಘಾತಗಳು,ಹಾವು ಕಡಿತ,ವಿದ್ಯುತ್ ಆಘಾತ,ಮಹಡಿಯಿಂದ ಆಕಸ್ಮಿವಾಗಿ ಬಿದ್ದು ಸಾವು ಸೇರಿದಂತೆ ವಿವಿಧ ಆಕಸ್ಮಿವಾಗಿ ಸಾವು ಸಂಭವಿಸಿದರೆ ಪರಿಹಾರ ಪಡೆಯಬಹುದು.

ಯಾವ ಯಾವ ರೂಪದಲ್ಲಿ ಎಷ್ಟು ಹಣ ಸಂದಾಯ:


1.ಶಾಶ್ವತವಾಗಿ ಅಂಗವೈಕಲ್ಯವಾದರೆ 10 ಲಕ್ಷ ರೂ.ಆರ್ಥಿಕ ಸಹಾಯ.
2.ಆಸ್ಪತ್ರೆ ವೆಚ್ಚಕ್ಕಾಗಿ 60 ಸಾವಿರ ರೂ.ಹಣಕ್ಕೆ ಅರ್ಹತೆ.
3.ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ 1.ಲಕ್ಷ ರೂ ವರೆಗೆ ಸಹಾಯ (ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2 ಲಕ್ಷ ರೂ)
4.ಓಪಿಡಿ ವೆಚ್ಚಕ್ಕೆಂದು 30,000/- ಸಾವಿರ ರೂ ಹಣ .
5.ಅಪಘಾತದಲ್ಲಿ ಪಾಶ್ಚವಾಯು ಉಂಟಾದರೆ 10.ಲಕ್ಷ ರೂ ಅರ್ಹತೆ.
6.ಕುಟುಂಬದ ಆಸ್ಪತ್ರೆ ವೆಚ್ಚಕ್ಕೆ 25.000/- ಸಾವಿರ ರೂ. ಸಹಾಯ.

ಈಗಾಗಲೇ ನೀವು ಅಂಚೆ ಇಲಾಖೆಯಲ್ಲಿ”ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’” ಖಾತೆ ಹೊಂದಿದ್ದರೆ ನೀವು ಅಪಘಾತ ವಿಮೆ ಮಾಡಿಸಲು ಅರ್ಹರಾಗುತ್ತಿರಿ.ಒಂದು ವೇಳೆ ಈ ಖಾತೆ ಹೊಂದಿದ್ದರೆ ಕೂಡಲೇ 100./-ರೂ ಕಟ್ಟಿ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದೇ ದಿನದಲ್ಲಿ ”ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’” ಖಾತೆ ತೆರೆಯಬಹುದು.
ವಿಶೇಷ ಸೂಚನೆ :
ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಅಂಚೆ ಇಲಾಖೆ ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿ ಪಡೆದು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles