ಶ್ರೀ ಚಾಮರಾಜೇಂದ್ರ ಮೃಗಾಲಯವು(Summer camp) 12 ರಿಂದ 18 ವರ್ಷದ ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲು ಉದ್ದೇಶಿಸಿದ್ದು, ಏಪ್ರಿಲ್ 15 ರಿಂದ 24, 2024 ರವರೆಗೆ ಮೊದಲ ಬ್ಯಾಚ್ ಮತ್ತು ಮೇ 6 ರಿಂದ 15, 2024 ರವರೆಗೆ ಎರಡನೇ ಬ್ಯಾಚ್ ಪ್ರಾರಂಭವಾಗುತ್ತದೆ.
ಮೃಗಾಲಯದಲ್ಲಿ ಪ್ರಾಣಿಗಳ ನಿರ್ವಹಣೆ, ಪ್ರಾಣಿಗಳ ನಡವಳಿಕೆಯ ಅಧ್ಯಯನ, ಕಾಡು ಪ್ರಾಣಿಗಳ ಸಂರಕ್ಷಣೆ, ಈ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಬೇಸಿಗೆ ಶಿಬಿರದ ಮೂಲ ಉದ್ದೇಶವಾಗಿದೆ. ಮೃಗಾಲಯದ ಅಧಿಕಾರಿಗಳು ಮತ್ತು ಇತರೆ ವಿಷಯ ತಜ್ಞರು ಭಾಗವಹಿಸುವವರೊಂದಿಗೆ ಸಂವಾದ ನಡೆಸಲಿದ್ದಾರೆ.
ಆಸಕ್ತಿಯುಳ್ಳವರು ಮಾರ್ಚ್ 11, 2024 ರಿಂದ ಮಾರ್ಚ್ 16 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು ಮಾರ್ಚ್ 18 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಕಛೇರಿಯ ಸಮಯದಲ್ಲಿ ಸಲ್ಲಿಸುವುದು. ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Summer camp application- ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಒಂದು ಇತ್ತೀಚಿನ ಸ್ಟ್ಯಾಂಪ್ ಅಳತೆಯ ಬಣ್ಣದ ಛಾಯಾಚಿತ್ರ, ವಯಸ್ಸಿನ ಪುರಾವೆ (ಆಧಾರ್ ಕಾರ್ಡ್ ಅಥವ ಜನನ ಪ್ರಮಾಣ ಪತ್ರದ ಪ್ರತಿ), ಶಿಬಿರದ ಶುಲ್ಕ, ರೂ. 1500/- ಅರ್ಜಿಯೊಂದಿಗೆ ಪಾವತಿಸತಕ್ಕದ್ದು. ಶಿಬಿರಕ್ಕೆ, ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು ಹೆಚ್ಚಿನ ವಿವರಗಳನ್ನು ಕಳುಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ: 9686668099 ಕರೆ ಮಾಡಬಹದು ಅಥವಾ ಇ-ಮೇಲ್ edumysore99@gmail.com ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: RTC adhar Status- ಪಹಣಿಗೆ ಆಧಾರ್ ಲಿಂಕ್ ಅಗಿದಿಯಾ ಎಂದು ಹೇಗೆ ತಿಳಿಯುವುದು? ಇಲ್ಲಿದೆ ವೆಬ್ಸೈಟ್ ಲಿಂಕ್
ಶ್ರೀ ಚಾಮರಾಜೇಂದ್ರ ಮೃಗಾಲಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click here