Sunday, November 10, 2024

ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಕೊರೆಸಲು ಸಹಾಯಧನಕ್ಕೆ ಅರ್ಜಿ :

ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಕೊರೆಸಲು ಸಹಾಯಧನಕ್ಕೆ ಅರ್ಜಿ :
ಉಚಿತ ಕೊಳವೆಬಾವಿ ಸರ್ಕಾರದ ಸಹಾಯಧನ ಏಷ್ಟು? ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ? ಯಾವ ನಿಗಮದಿಂದ ಅರ್ಜಿ ಆಹ್ವಾನ? ಸಂಪೂರ್ಣ ಮಾಹಿತಿ.


ಅತ್ಮೀಯ ರೈತ ಬಾಂದವರೇ ಕೃಷಿ ಮಾಡಿ ಅದರಲ್ಲಿ ಹೆಚ್ಚು ಲಾಭ ಗಳಿಸಬೇಕಾದರೆ ಇತ್ತಿಚೀನ ದಿನಮಾನಗಳಲ್ಲಿ ಅತೀ ದೊಡ್ಡ ಸಮಸ್ಯೆಯೆಂದರೆ ಹವಮಾನ ಪರಿಸ್ಥಿತಿ , ಸರಿಯಾಗಿ ಕಾಲ ಕಾಲಕ್ಕೆ ಮಳೆಯಾಗದೇ ರೈತ ಸಾಲದ ಸಮಸ್ಯೆಯಂತಹ ಪರಿಸ್ಥಿತಿಗೆ ಒಳಪಡುವುದು.

ನೀರಿನ ಸಮಸ್ಯೆಗೆ ಸರ್ಕಾರ ಪ್ರತಿ ವರ್ಷ ಕೆಲವು ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಿಂದ ಆಯ್ದ ಅಭಿವೃದ್ದಿ ನಿಗಮಗಳಿಂದ ಕೊಳವೆ ಬಾವಿಗೆ ಸಂಪೂರ್ಣ ಸಹಾಯಧನವನ್ನು ನೀಡುತ್ತಿರುತ್ತದೆ. ಇಲ್ಲಿ ನಾವು ತಿಳಿಸುತ್ತಿರುವ ನಿಗಮ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ) ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ(Ganga kalyana yojane) ಯೋಜನೆಯಡಿ ಕೊಳವೆ ಬಾವಿ(borewell) ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿರುತ್ತದೆ.

ಕೃಷಿ ಮಾಡಲು ಬಹಳ ಮುಖ್ಯವಾಗಿ ರೈತರಿಗೆ ಅಗತ್ಯವಾಗಿ ಬೇಕಾಗುವುದು “ನೀರು” ಇದಕ್ಕಾಗಿ ರೈತರು ಕೊಳವೆ ಬಾವಿ, ನಾಲೆ, ನದಿ, ತೆರೆದ ಬಾವಿ ಅವಲಂಬಿಸಿರುತ್ತಾರೆ. ಅರ್ಥಿಕವಾಗಿ ಹಿಂದುಳಿದ ವಿವಿಧ ವರ್ಗದ ಜನರಿಗೆ ಕೊಳವೆ ಬಾವಿಯನ್ನು ಹೊಂದಲು ಸಹಾಯಧನ ನೀಡುವ ದೆಸೆಯಲ್ಲಿ ನಮ್ಮ ರಾಜ್ಯದಲ್ಲಿ ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ.

ಇತ್ತಿಚೀಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ) ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಿಂದ ಸಹಾಯಧನ ಪಡೆಯಲು ಅರ್ಜಿ ಅಹ್ವಾನ ಮಾಡಲಾಗಿರುತ್ತದೆ. ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬವುದು? ಅಗತ್ಯ ದಾಖಲೆಗಳೇನು? ಅನೈನ್ ಅರ್ಜಿ ಸಲ್ಲಿಕೆ ಹೇಗೆ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬವುದು?

1) ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.

2) ಪ್ರತಿ ಫಲಾನುಭವಿಗೆ 1 ಎಕರೆ 20 ಗುಂಟೆ (1 ಎಕರೆ 50 ಸೆಂಟ್ಸ್) ಎಕರೆಯಿಂದ 5 ಎಕರೆಯವರೆಗೆ ಖುಷಿ ಜಮೀನಿರಬೇಕು,ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಕನಿಷ್ಠ 1 ಎಕರೆ ಜಮೀನನ್ನು ಹೋದಿರತಕ್ಕದ್ದು.
3) ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
4) ಅರ್ಜಿದಾರರು ಸಣ್ಣ /ಅತಿ ಸಣ್ಣ ಹಿಡುವಳಿದಾರ ರೈತರಾಗಿರಬೇಕು.
5) ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ
ವಾರ್ಷಿಕ ಆದಾಯ ರೂ. 96,000/- ಗಳನ್ನು ಮೀರಬಾರದು.
6) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
ಇತ್ತೀಚಿನ ಆರ್‌ಟಿಸಿ ಪ್ರತಿ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ/ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
ಬ್ಯಾಂಕ್ ಪಾಸ್ ಬುಕ್ ಪ್ರತಿ. ಭೂ-ಕಂದಾಯ ಪಾವತಿಸಿದ ರಸೀದಿ.
ಸ್ವಯಂ ಘೋಷಣೆ ಪತ್ರ.
ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ.

ನಿಗಮ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/09/2023 ಕೊನೆಯ ದಿನಾಂಕವಾಗಿರುತ್ತದೆ.
ಜಾಲತಾಣದ ಲಿಂಕ್: https://kmdconline.karnataka.gov.in/Portal/login
ಸರ್ಕಾರದ ಸಹಾಯಧನ: ಮೂರು ಲಕ್ಷ ದಿಂದ ರೂ ನಾಲ್ಕು ಲಕ್ಷದವರೆಗೆ.

ಕೃಷಿಗೆ ಸಂಬಂಧಿಸಿದ ಇತರೆ ಯೋಜನೆಗಳು:


ಇದನ್ನೂ ಓದಿ: ಹೊಲ/ ಗದ್ದೆ / ಜಾಗ ಖರಿದೀಸುವ ಮುನ್ನ ಅವಶ್ಯಕವಾಗಿ ಇದರ ಗಮನವಿರಲಿ.


ಇದನ್ನೂ ಓದಿ: ಹದ್ದಬಸ್ತು, ತತ್ಕಾಲ್ ಪೋಡಿ ಈ ಎಲ್ಲಾ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆ ಇನ್ನೂ ಸುಲಭ:


ಇದನ್ನೂ ಓದಿ: Chaff cutter subsidy: ಮೇವು ಕತ್ತರಿಸುವ ಯಂತ್ರ ವಿತರಣೆಗೆ ಸಹಾಯಧನ:

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ) ವಾಸವಿ ಜಲಶಕ್ತಿ ಯೋಜನೆಯ ವಿವರ ಹೀಗಿದೆ:

ಈ ಯೋಜನೆಯ ಕುರಿತು ರಾಜ್ಯ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿ ಮತ್ತು ಇತರೆ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಯೋಜನೆಯ ಉದ್ದೇಶ:

ಈ ಯೋಜನೆಯಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪ್ ಸೆಟ್ ಅಳವಡಿಸುವುದು ಮತ್ತು ವಿದ್ಯುದ್ದೀಕರಣವನ್ನು ಮಾಡಿಸಲು ಅತೀ ಕಡಿಮೆ ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ.2.00 ಲಕ್ಷ ಸಾಲ ಹಾಗೂ ವಿದ್ಯುದ್ದೀಕರಣಕ್ಕೆ ರೂ.50,000/- ಸಹಾಯಧನ ನೀಡಿ ಕೃಷಿಗೆ ಅನುವಾಗುವಂತೆ ನೆರವು ನೀಡಲಾಗುವುದು
ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು, ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
2) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ
ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/- ಗಳ ಮಿತಿ ಒಳಗಿರಬೇಕು.
3) ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರಾಗಿರಬೇಕು.
4) ಅರ್ಜಿದಾರರು ಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಮತ್ತು ಗರಿಷ್ಠ 5 ಕರೆ ಜಮೀನು ಹೊಂದಿರಬೇಕು.
5) ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
6) ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶೇ.33 ರಷ್ಟು ಮಹಿಳಾ ಫಲಾನುಭವಿಗಳನ್ನು, ಶೇ.5 ರಷ್ಟು ವಿಶೇಷಚೇತನರಿಗೆ ಮತ್ತು ಶೇ.5 ರಷ್ಟು ತೃತೀಯ ಲಿಂಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
7) ಈ ಯೋಜನೆಯಡಿಯಲ್ಲಿ ಸಾಲವನ್ನು ಭದ್ರತೆ ರಹಿತವಾಗಿ ನೀಡಲಾಗುವುದು.
8) ಅರ್ಜಿದಾರರು ಸಣ್ಣ ರೈತರಾಗಿರುವ ಬಗ್ಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವ ಬಗ್ಗೆ ಕಂಡ ಅಧಿಕಾರಿಗಳಿಂದ ಪಡೆದ ಧೃಢೀಕರಣ ಪತ್ರ.
ಹೆಚ್ಚದ್ದಲ್ಲಿ ಫಲಾನುಭವಿಯು ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡತಕ್ಕದ್ದು.


ನಿಗಮ: ಕರ್ನಾಟಕ ಆರ್ಯ ವೈಶ್ಯ ಸಮುವಾಸವಿ ಜಲಶಕ್ತಿ ಯೋಜನೆ

ಸಹಾಯಧನ :ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ, ಎರಡು ಲಕ್ಷ ಸಾಲ ಹಾಗೂ ವಿದ್ಯುದ್ದೀಕರಣಕ್ಕೆ ರೂ.50,000/ ನೀಡಲಾಗುತ್ತದೆ.

ಅರ್ಜಿಸಲ್ಲಿಸುವ ಜಾಲತಾಣದ ಲಿಂಕ್ https://aryavysya.karnataka.gov.in/Vasavijalashakthi

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳ 18-09-2023 ಕೊನೆದಾಗಿರುತ್ತದೆ.

ಅರ್ಜಿ ಸಲ್ಲಿಸುವಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಮತ್ತು ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ಕಾಣಿಸುವ ಸಹಾಯವಾಣಿ ಸಂಖ್ಯೆಗೆ 9448451111 ಕರೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬಹುದಾಗಿರುತ್ತದೆ.


ಸರ್ಕಾರದ ಇತರೆ ಯೋಜನೆಗಳ ಮಾಹಿತಿ:


ಇದನ್ನೂ ಓದಿ : ಬಿ.ಎಡ್ ಮತ್ತು ಡಿ.ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ:


ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮ:


ಇದನ್ನೂ ಓದಿ : Crop insurance: ಬೆಳೆವಿಮೆ ಹಣ ದೊರೆಯಲು ಎಲ್ಲಾ ರೈತರು ಈ ಕೆಲಸ ಮಾಡುವುದು ಕಡ್ಡಾಯ:

ಇತ್ತೀಚಿನ ಸುದ್ದಿಗಳು

Related Articles