2024-25 ನೇ ಸಾಲಿನ ಶಾಲಾ ಕಾಲೇಜುಗಳ ಆರಂಭ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜು ಓಡಾಟಕ್ಕೆ ಅನುಕೂಲವಾಗಲು ಕರ್ನಾಟಕ ರಾಜ್ಯ ಸರಕಾರವು ರಿಯಾಯಿತಿ ಬಸ್ ಪಾಸ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ರಾಜ್ಯ 4 ನಾಲ್ಕು ನಿಗಮಗಳಾದ ಈಶಾನ್ಯ ಕರ್ನಾಟಕ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ, ಕರ್ನಾಟಕ ರಾಜ್ಯ ಸಾರಿಗೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಕರ್ನಾಟಕ ರಾಜ್ಯದ 4 ನಿಗಮಗಳಲ್ಲಿ ವಿದ್ಯಾರ್ಥಿಗಳ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ಹೋಗಿ ಬರಲು ಅನುಕೂಲವಾಗಲು ರಿಯಾಯಿತಿ ದರಗಳಲ್ಲಿ ಬಸ್ ಪಾಸ್ ಗಳನ್ನು ನೀಡುತ್ತಾ ಬರುತ್ತಿವೆ, ಅದೇ ರೀತಿ ಈ ಬಾರಿಯು ವಿದ್ಯಾರ್ಥಿಗಳ ಅನುಕೂಲಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಹಳ್ಳಿಗಳೇ ತುಂಬಾ ಇರುವುದರಿಂದ ಹಳ್ಳಿಯ ವಿದ್ಯಾರ್ಥಿಗಳು ನಗರ/ಪಟ್ಟಣ ಪ್ರದೇಶದ ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ಹೋಗಿ ಬರಲು ಅವರಲ್ಲಿ ಹಣ ಇರುವುದಿಲ್ಲ ಹಾಗಾಗಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನಗರ ಮತ್ತು ಪಟ್ಟಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕೆ ಕರ್ನಾಟಕ ರಾಜ್ಯ 4 ನಾಲ್ಕು ನಿಗಮಗಳಿಂದ ಪ್ರತಿ ವರ್ಷ ರಿಯಾಯಿತಿ ಬಸ್ ಪಾಸ್ ಗಳನ್ನು ವಿತರಣೆ ಮಾಡಲಾಗುತ್ತಿವೆ.
ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ 10 ಸಾವಿರ ರೂ. ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.
ಈ ಮೊದಲು ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ತಮ್ಮ ಊರುಗಳ ಹತ್ತಿರದ ಬಸ್ ಸ್ಟಾಂಡ್ ಗಳಲ್ಲಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಬೇಕಿತ್ತು, ಆದರೆ ಈಗ ಅದನ್ನೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
2024-25ನೇ ಸಾಲಿನ 4 ನಿಗಮಗಳಲ್ಲಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಸಲ್ಲಿಸಬೇಕಿರುತ್ತದೆ. ಪ್ರಸಕ್ತ ವರ್ಷದಲ್ಲಿ ಸರಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಪಾಸ್ ಗಳನ್ನು ವಿತರಿಸಲಾಗುವುದು. ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾ ಸಿಂಧು, ಗ್ರಾಮ ಒನ್, ಹಾಗೂ ಸೈಬರ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
1)ಮುಖ್ಯೋಪಾದ್ಯಾಯರು/ಪ್ರಾಂಶುಪಾಲರು ಸಹಿ ಮಾಡಿದ ಘೋಷಣೆಯ ನಮೂನೆ.
2)ಶಾಲಾ/ಕಾಲೇಜು ಶುಲ್ಕಪಾವತಿಸಿದ ರಶೀದಿ(ಪ್ರಸ್ತುತ ವರ್ಷದ್ದು)
3)ವಸತಿ ಪ್ರಮಾಣ ಪತ್ರದ ಪುರಾವೆ
ಇದನ್ನೂ ಓದಿ:ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿ ಪಾಸ್ ದರಗಳು:
1)ಪ್ರಾಥಮಿಕ-150/-
2)ಪ್ರೌಢಶಾಲೆ-750/-
3)ಪ್ರೌಢಶಾಲೆ ಬಾಲಕಿಯರು-550/-
4)ಕಾಲೇಜು/ಡಿಪ್ಲೋಮ-1050/-
5)ಐ.ಟಿ.ಐ-1310/-
6)ವೃತ್ತಿಪರ ಕೋರ್ಸುಗಳು-1550/-
7)ಸಂಜೆ ಕಾಲೇಜು/ಪಿಹೆಚ್‌ಡಿ-1350/-
ಅರ್ಜಿ ಸಲ್ಲಿಸಲು ಹತ್ತಿರದ ಸೇವಾ ಸಿಂಧು ಸೈಬರ್, ಗ್ರಾಮ ಒನ್ ಸೈಬರ್, ಕಂಪ್ಯೂಟರ್ ಸೈಬರ್ ಗಳಿಗೆ ಭೇಟಿ ಮಾಡಿ.