Monday, September 16, 2024

SSP SCHOLARSHIP-ಎಲ್ಲಾ ವಿಧ್ಯಾರ್ಥಿಗಳಿಗೆ 2024-25-ನೇ ಸಾಲಿನ ವಿದ್ಯಾರ್ಥಿ ವೇತನ ನೀಡಲು ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ!

2024-25ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಎಲ್ಲಾ ಬಗೆಯ ಪದವಿ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ನೆರವು ನೀಡಲು ವಿದ್ಯಾರ್ಥಿ ವೇತನ ಪಡೆಯಲು (SSP Scholarship-2024) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಯಾರು ಎಲ್ಲಾ ವಿದ್ಯಾರ್ಥಿಗಳು 2024-25ನೇ ಸಾಲಿನ ಮೇಟ್ರಿಕ್ ಪೂರ್ವ ಎಂದರೆ ಎಸ್.ಎಸ್.ಎಲ್.ಸಿ, 9ನೇ, 8ನೇ ತರಗತಿಯ ಮತ್ತು ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಎಲ್ಲಾ ಬಗೆಯ ಪದವಿ ಓದುತ್ತಿರುವವರು ಮತ್ತು ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುದರೊಳಗೆ ಆನ್ಲೈನ್ ಮೂಲಕ ಅರ್ಜಿ ಹಾಕಬಹುದು.

ಈ ವಿದ್ಯಾರ್ಥಿ ವೇತನಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಹಾಗೂ ಇನ್ನಿತರ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.

ಇದನ್ನೂ ಓದಿ:ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಮೂಲಕ ಮಾಡಲಾಗುತ್ತಿದ್ದು, ನಿಮ್ಮ ಜಮೀನಿನ ಸಮೀಕ್ಷೆ ಆಗಿದೆಯೇ? ಹೀಗೆ ತಿಳಿದುಕೊಳ್ಳಿ.

Apply documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

2024-25-ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅಗತ್ಯ ಅದರ ವಿವರ ಹೀಗಿದೆ.

1)SSLC MARKS CARD/ಎಸ್.ಎಸ್.ಎಲ್.ಸಿ ಅಂಕ ಪಟ್ಟಿ.

2)ಶಾಲಾ ದಾಖಲಾತಿ ರಶೀದಿ ಅಥವಾ ಮುಖ್ಯ ಗುರುಗಳ ದಾಖಲಾತಿ ಪತ್ರ.

3)PUC MARKS CARD/ಪಿ.ಯು.ಸಿ ಅಂಕಪಟ್ಟಿ.

4)CASTE AND INCOME CERTIFICATE/ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

5)AADHAR CARD XEROX/ಆಧಾರ್ ಕಾರ್ಡ್ ಪ್ರತಿ.

6)PARENTES AADHAR CARD/ತಂದೆ/ತಾಯಿ ಆಧಾರ್ ಕಾರ್ಡ ಪ್ರತಿ.

7)MOBILE WITH OTP/ಮೊಬೈಲ್ ನಂಬರ್.

How can apply SSP Scholarship-ಹೇಗೆ ಸಲ್ಲಿಸಬೇಕು?

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಡೆ ವಿಧಾನಗಳನ್ನು ಅನುಸರಿಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬಹುದು.

ವಿಧಾನ-1:ಮೊದಲಿಗೆ ಈ ಲಿಂಕ್ SSP Scholarship ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕಾಗುತ್ತದೆ. ಇದಾದ ನಂತರ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತದೆ. ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿರುವವರು ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದೆವರೆಯಬೇಕು. ಒಂದು ವೇಳೆ ಈಗಾಗಲೇ ಖಾತೆಯನ್ನು ಸೃಜನೆ ಮಾಡಿಕೊಂಡಿದ್ದರೆ ವಿದ್ಯಾರ್ಥಿಗಳು 2024-25ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು ನೀವು ಮೇಟ್ರಿಕ್ ಪೂರ್ವ ವಾಗಿದ್ದರೆ ಆ ಆಯ್ಕೆಯನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.

ವಿಧಾನ-2:ನಂತರ ಪೇಜ್ ನಲ್ಲಿ ವಿದ್ಯಾರ್ಥಿಗಳ ಲಾಗಿನ್ ಐಡಿ/USER ID, ಪಾಸ್ವರ್ಡ್/Password, ಕ್ಯಾಪ್ಚ್/Captcha, ಕೋಡನ್ನು ನಮೂದಿಸಿ “student login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ:ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?

ವಿಧಾನ-3: student login” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿಗಳ ವೈಯಕ್ತಿಕ ವಿವರ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “ಸಲ್ಲಿಸಿ/Submit” ಮೇಲೆ ಕ್ಲಿಕ್ ಮಾಡಬೇಕು.

SSP Scholarship-2024-25-ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು?

ಪ್ರಸ್ತುತ 2024-25 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್: Click here…

ಇತ್ತೀಚಿನ ಸುದ್ದಿಗಳು

Related Articles