Friday, September 20, 2024

ಸುಜ್ಞಾನನಿಧಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ , ಯಾರಿಗೆ, ಯಾವ ಸಂಸ್ಥೆಯಿಂದ ತಿಳಿಯೋಣ??

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 2022-23 ನೇ ಸಾಲಿನ ಸುಜ಼ಾನನಿಧಿ ಶಿಷ್ಯವೇತನಕ್ಕೆ ಹೊಸ ಹಾಗೂ ನವೀಕರಣ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೋಜನೆಯಡಿ ವೆಬ್ ಸೈಟ್ ಮೂಲಕ ಆನ್ ಲೈನ್
ರಜಿಸ್ಟೆಶೇನ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನು ಹೊರತುಪಡಿಸಿ ಬೇರೆಡೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.


ಹೊಸ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ :


*ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು SSLC ಅಂಕಪಟ್ಟಿ, ವ್ಯಾಸಂಗ ದೃಡೀಕರಣ ಮತ್ತು ಶುಲ್ಕಪಾವತಿಸಿದ ರಶೀದಿ, ಹಿಂದಿನ ವರ್ಷಅಧ್ಯಯನ ನಡೆಸಿದ ವಿದ್ಯಾಭ್ಯಾಸದ ಅಂಕಪಟ್ಟಿ,ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪ್ರತಿ, ಯೋಜನಾ ಕಛೇರಿಯ ಶಿಫಾರಸ್ಸು ಪತ್ರ ಹಾಗೂ ವಿದ್ಯಾರ್ಥಿಮತ್ತು ತಂದೆಯ ಆಧಾರ್‍ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸುವುದು.
*ವಿದ್ಯಾರ್ಥಿಯ ಪೋಷಕರು ಯೋಜನೆಯ ಸಂಘಕ್ಕೆ ಸೇರಿ ಒಂದು ವರ್ಷ ಪೂರೈಸಿರಬೇಕು.(ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗೆ)
*ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ.
*Lateral Entry ಮೂಲಕ ಎರಡೆನೇ ವರ್ಷದ ಕೋರ್ಸಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಡೆಯಲು ಅರ್ಹರಿರುವುದಿಲ್ಲ.

ನವೀಕರಣ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ :


*ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ವರ್ಷದ ಅಂಕಪಟ್ಟಿ, 2022-23 ನೇ ಸಾಲಿನ ವ್ಯಾಸಂಗ ದೃಡೀಕರಣ ಮತ್ತು ಶುಲ್ಕಪಾವತಿಸಿದ ರಶೀದಿ, ಹಿಂದಿನ ವರ್ಷಅಧ್ಯಯನ ನಡೆಸಿದ ವಿದ್ಯಾಭ್ಯಾಸದ ಅಂಕಪಟ್ಟಿ,ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪ್ರತಿ, ಯೋಜನಾ ಕಛೇರಿಯ ಶಿಫಾರಸ್ಸು ಪತ್ರ ಹಾಗೂ ವಿದ್ಯಾರ್ಥಿಮತ್ತು ತಂದೆಯ ಆಧಾರ್‍ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸುವುದು.
*ವಿದ್ಯಾರ್ಥಿಯ ಪೋಷಕರು ಯೋಜನೆಯ ಸಂಘವನ್ನು ಬಿಟ್ಟಿದ್ದರೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
*ನವೀಕರಿಸಲು ವಿದ್ಯಾರ್ಥಿ/ನಿಯು 2022-23 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ತೇರ್ಗಡೆ ಹೊಂದಿರಬೇಕು.
*ಬ್ಯಾಂಕ್ ಖಾತೆ ಸಂಖ್ಯೆ IFSC ಕೋಡ್ನನಲ್ಲಿ ಬದಲಾವಣೆ ಇದ್ದಲ್ಲಿ ಸರಿಪಡಿಸಿ ಬ್ಯಾಂಕ್ ವ್ಯವಸ್ಥಾಪರ ಸಹಿ ಹಾಕಿಸಬೇಕು ಮತ್ತು ಸದ್ರಿ ಖಾತೆಯಲ್ಲಿ ಪ್ರಸ್ತುತ ವ್ಯವಹಾರಗಳು ಚಾಲ್ತಿಯಲ್ಲಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2023 ಆಗಿರುತ್ತದೆ.

ವಿಶೇಷ ಸೂಚನೆ: ವಿದ್ಯಾರ್ಥಿಗಳು ಷರತ್ತು ಮತ್ತು ನಿಯಮಗಳ ಅನುಸಾರ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಿದ್ದಲ್ಲಿ ಶಿಷ್ಯವೇತನ ವನ್ನು ಶೀಘ್ರಗತಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles