ಪರಿಶಿಷ್ಠ ಜಾತಿ , ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದ ನಿರುದ್ಯೋಗಿಗಳು ತಳ್ಳುಗಾಡಿ ಅಥವಾ ಕೈಗಾಡಿಗಳನ್ನು ಖರೀದಿಸಿ ಮತ್ತು ರೈತರಿಂದ ತರಕಾರಿ, ಹಣ್ಣು, ಹೂ ಗಳನ್ನು ಖರೀದಿ ಮಾಡಿ ತಳ್ಳುವ ಗಾಡಿ ಮೂಲಕ ಮಾರಾಟ ಮಾಡಿ ಸ್ವಯಂ ಉದ್ಯೋಗ ಕೈಗೊಂಡು ಆದಾಯಗಳಿಸಲು ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುತ್ತದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.
ಘಟಕ ವೆಚ್ಚ:ರೂ.1ಲಕ್ಷ
ಸಹಾಯಧನ:ರೂ.50,000
ಸಾಲ:ರೂ,50,000(ಶೇ.4ರ ಬಡ್ಡಿದರ)
ಇದನ್ನೂ ಓದಿ:ಬೋರ್ವೆಲ್ ರೀಚಾರ್ಜ್ ಮಾಡುವ ವಿಧಾನ! ಹಾಗೂ ಸಹಾಯಧನ ಪಡೆಯುವ ಮಾಹಿತಿ.
ಸ್ವಯಂ ಉದ್ಯೋಗ ಯೋಜನೆಯ ವೈಶಿಷ್ಟ್ಯಗಳು:
1)ಈ ಯೋಜನೆಯಡಿ ಪರಿಶಿಷ್ಠ ಜಾತಿಯ ಮಾದಿಗ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುವುದು.
2)ಯೋಜನೆಯ ಘಟಕ ವೆಚ್ಚ ರೂ.1.00 ಲಕ್ಷಗಳಾಗಿದ್ದು, ರೂ.50000 ಸಾವಿರ ಸಹಾಯಧನ ಮತ್ತು ರೂ.50000 ಸಾವಿರ ಸಾಲವಾಗಿರುತ್ತದೆ.
3)ಸಾಲದ ಮೊತ್ತವನ್ನು ಶೇ.4ರ ಬಡ್ಡಿದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕಾಗುತ್ತದೆ.
ಸ್ವಯಂ ಉದ್ಯೋಗ ಯೋಜನೆಯ ಅರ್ಹತೆಗಳು:
1)ಅರ್ಜಿದಾರರು ಪರಿಶಿಷ್ಠ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.
2)ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
3)ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
4)ಈಗಾಗಲೇ ಈ ನಿಗಮದಿಂದ ಸೌಲಭ್ಯವನ್ನು ಪಡೆದುಕೊಂಡಿರಬಾರದು.
5)ಅರ್ಜಿದಾರರು/ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
6)ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯಕವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.
7)ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.1.50 ಲಕ್ಷ ಮತ್ತು ನಗರ ಪ್ರದೇಶದವರಿಗೆ ರೂ.2.00 ಲಕ್ಷಗಳ ಮಿತಿಯೊಳಗಿರಬೇಕು.
8)ಅರ್ಜಿದಾರರು 21 ರಿಂದ 50 ವರ್ಷದೊಳಗಿರಬೇಕು.
9)ಉದ್ದೇಶಿತ ವ್ಯಾಪಾರ/ಚಟುವಟಿಕೆ ಆಧಾರದ ಮೇಲೆ ಸಹಾಯಧನ/ಸಾಲ ಮಂಜೂರು ಮಾಡಲಾಗುತ್ತದೆ.
10)ಒಂದುವೇಳೆ ಫಲಾನುಭವಿ ಅನರ್ಹನೆಂದು ಕಂಡು ಬಂದರೆ ದಂಡ ಕಟ್ಟಲು ಸಿದ್ದನಿರಬೇಕು.
ಇದನ್ನೂ ಓದಿ:ಈ ನಿಯಮಗಳನ್ನು ಮೀರಿ ಬಿಪಿಎಲ್ ಕಾರ್ಡ ಹೊಂದಿದ್ದರೆ ನಿಮ್ಮ ಕಾರ್ಡನ್ನು ರದ್ದು ಮಾಡಲಾಗುತ್ತದೆ!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1)ಅರ್ಜಿ ಫಾರಂ
2)ಭಾವಚಿತ್ರ
3)ಜಾತಿ ಪ್ರಮಾಣ ಪತ್ರ
4)ಆದಾಯ ಪ್ರಮಾಣ ಪತ್ರ
5)ಆಧಾರ ಕಾರ್ಡ್
6)ಬ್ಯಾಂಕ್ ಪಾಸಬುಕ್
ಸೂಚನೆ: ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ನಾಗರಿಕ ಸೇವಾ ಸಿಂಧು ಸೈಬರ್ ಗಳನ್ನು ಬೇಟಿ ಮಾಡಿ.