Thursday, September 19, 2024

Self employe loan-ಸ್ವ-ಉದ್ಯೋಗ ಮಾಡಲು ಕಡಿಮೆ ಬಡ್ಡಿದರದಲ್ಲಿ ಅಂದರೆ ಶೇ.4 ರಂತೆ 2.0 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

ಸ್ವ-ಉದ್ಯೋಗ ಮಾಡಲು ಸಾಲ ಮತ್ತು ಸಹಾಯಧನ(business loan application) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಜಾಲ್ತಿಯಲ್ಲಿರುವ ವಿವಿಧ ನಿಗಮಗಳಿಂದ “ಸ್ವಯಂ ಉದ್ಯೋಗ ನೇರ ಸಾಲ “ ಯೋಜನೆಯಡಿ ಶೇ.4 ರ ಬಡ್ಡಿದರಲ್ಲಿ 2.0 ಲಕ್ಷದವರೆಗೆ ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು! ಅರ್ಜಿ ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಅದರ ಮಾಹಿತಿ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೇಗಳೆನು? ಈ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಮಾಹಿತಿ ಇತ್ಯಾದಿ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಏನಿದು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ?

ಈ ಯೋಜನೆಯಡಿ ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ಆ ಸಾಲಕ್ಕೆ ಸಬ್ಸಿಡಿಯನ್ನು ರಾಜ್ಯದ ವಿವಿಧ ನಿಗಮಗಳಿಂದ ನೀಡಲಾಗುತ್ತದೆ.

ಇದನ್ನೂ ಓದಿ: ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಕೃಷಿಕರಿಗೆ ಲಕ್ಷದವರೆಗೂ ಸಹಾಯಧನ.

Business loan subsidy-ಎಷ್ಟು ಸಾಲ ಸಿಗುತ್ತೆ ಮತ್ತು ಸಹಾಯಧನ?

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಒಟ್ಟು ಘಟಕದ ವೆಚ್ಚ 2.0 ಲಕ್ಷಕ್ಕೆ 30,000 ಸಾವಿರ ಸಹಾಯಧನ ಉಳಿಕೆ 1.70 ಲಕ್ಷಕ್ಕೆ ಶೇ.4 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಅದೇ ರೀತಿ ಘಟಕ ವೆಚ್ಚ 1.0 ಲಕ್ಷಕ್ಕೆ 20,000 ಸಾವಿರ ಸಹಾಯಧನ ಉಳಿಕೆ 80,000/- ಹಣಕ್ಕೆ ಶೇ.4 ಬಡ್ಡಿದರಲ್ಲಿ ಸಾಲ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

1)ಅರ್ಜಿದಾರನ ಆಧಾರ್ ಕಾರ್ಡ್ ಪ್ರತಿ.

2)ಬ್ಯಾಂಕ್ ಪಾಸ್ ಬುಕ್ ಪ್ರತಿ.

3)2ಪೋಟೋ

4)ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

5)ರೇಶನ್ ಕಾರ್ಡ್ ಪ್ರತಿ.

6)ಶೈಕ್ಷಣಿಕ ಅಂಕಪಟ್ಟಿ.

ಈ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ:

ಈ ಯೋಜನೆಯ ಸೌಲಭ್ಯ ಪಡೆಯಲು ನಿಮ್ಮ ಹತ್ತಿರದ ಗ್ರಾಮ ಒನ್/ ಕರ್ನಾಟಕ ಒನ್ ಕೇಂದ್ರವನ್ನು ಅಗತ್ಯ ದಾಖಲೆಗಳೋಂದಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ 31/08/2024 ರೊಳಗೆ ಅರ್ಜಿ ಸಲ್ಲಿಸಿ.

ಇದನ್ನೂ ಓದಿ:ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು APP ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೇ ಮಾಡಿಕೊಳ್ಳಿ.

ಈ ಯೋಜನೆಯ ಲಾಭ ಪಡೆಯಲು ಅರ್ಹತೆಗಳು:

1)ಕುಟುಂಬದ ವಾರ್ಷಿಕ ವರಮಾನ ನಗರದವರಿಗೆ ರೂ.1,20,000/- ಹಾಗೂ ಗ್ರಾಮೀಣದವರಿಗೆ ರೂ.98,000/- ಗಳನ್ನು ಮೀರಿರಬಾರದು.

2)ಅರ್ಜಿದಾರ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3)ಅರ್ಜಿದಾರನ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 55 ರ ಒಳಗಿರಬೇಕು.

4)ಈಗಾಗಲೇ ಈ ಯೋಜನೆಯಿಂದ ಹಿಂದಿನ ಅಥವಾ ಮುಂಚಿತವಾಗಿ ಸೌಲಭ್ಯವನ್ನು ಪಡೆದುಕೊಂಡಿರಬಾರದು.

5) ಹತ್ತಿರದ ರಾಷ್ಟೀಕೃತ ಬ್ಯಾಂಕ್ ಖಾತೆಗೆ ಆಧಾರ್ ಸಂಯೋಜಿತ ಖಾತೆ ಹೊಂದಿರಬೇಕು.

6)ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಸೌಲಭ್ಯ  ನೀಡಲಾಗುತ್ತದೆ.

7)ಅಭ್ಯರ್ಥಿಯು ಕೈಗೊಳ್ಳುವ ಉದ್ದಿಮೆ/ಆರ್ಥಿಕ ಚಟುವಟಿಕೆ ಬಗ್ಗೆ ತರಬೇತಿ/ ಅನುಭವ ಹೊಂದಿರಬೇಕು.

8)ಅರ್ಜಿದಾರರು ನಿರುದ್ಯೋಗಿಯಾಗಿರಬೇಕು (ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಸುವುದು).

ಇತ್ತೀಚಿನ ಸುದ್ದಿಗಳು

Related Articles