Thursday, September 19, 2024

SEEDS DISTRIBUTION-ರೈತ ಸಂಪರ್ಕ ಕೇಂದ್ರಗಳಲ್ಲಿ(ಕೃಷಿ ಇಲಾಖೆ) ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ ಪಡೆದುಕೊಳ್ಳಲು ರೈತರ ನೋಂದಣಿ ಮಾಡುವುದು ಕಡ್ಡಾಯ!

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭವಾಗಿದ್ದು, ರೈತರು ತಮ್ಮ ಹೊಲ, ಗದ್ದೆಗಳನ್ನು ಉಳಮೆ ಮಾಡಲು ಅನುಕೂಲಕರವಾಗಿದೆ. ಹವಮಾನ ಇಲಾಖೆಯ ಪ್ರಕಾರ ಮುಂಗಾರು ಮಳೆಯು ಜೂನ್‌ 4 ತಾರೀಕಿನಿಂದ ಆರಂಭವಾಗಲಿದೆ ಎಂದು ತಿಳಿಸಿರುತ್ತಾರೆ.

ಕೃಷಿ ಇಲಾಖೆಯಲ್ಲಿ ಮುಂಗಾರು ಹಂಗಾಮಿನಿ  ಬಿತ್ತನೆ ಬೀಜಗಳಾದ ಭತ್ತ, ಸೂರ್ಯಕಾಂತಿ, ಸಜ್ಜೆ, ಹತ್ತಿ, ಮೆಕ್ಕೆಜೋಳ, ರಾಗಿ, ಅಲಸಂದೆ, ಸೋಯಾ ಅವರೆ, ಗೋಧಿ ಹೀಗೆ ವಿವಿಧ ಬಿತ್ತನೆ ಬೀಜಗಳ ವಿತರಣೆ ಆಗುತ್ತಿದ್ದು ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಪಡೆಯಬೇಕಾದರೆ RTC/ಪಹಣಿ/ಉತಾರ್ ಗೆ ರೈತರು ಆಧಾರ್ ಕಾರ್ಡ್ ನ್ನು ಜೋಡಣೆ  ಮಾಡಬೇಕು ಇಲ್ಲವಾದಲ್ಲಿ ಬೀಜ ಸಿಗುವುದಿಲ್ಲ, ಹಾಗಾಗಿ ಎಲ್ಲಾ ರೈತರು RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ (ರೈತರ ನೋಂದಣಿ)ಆಗಿದೆಯಾ ಇಲ್ಲವೋ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ಪಡೆಯಲು ಬೇಕಾಗುವ ದಾಖಲೆಗಳು:

1)ಆಧಾರ್‌ ಕಾರ್ಡ ಜೆರಾಕ್ಸ ಪ್ರತಿ

2) RTC ಪ್ರತಿ

3)ಬ್ಯಾಂಕ ಪಾಸ ಬುಕ್‌ ಜೆರಾಕ್ಸ ಪ್ರತಿ

4)ಪಾಸ್ ಪೋರ್ಟ ಸೈಜ್‌ 1 ಪೋಟೋ

ಇದನ್ನೂ ಓದಿ: ಉತ್ತಮ ಹಸುಗಳ ಆಯ್ಕೆಯಲ್ಲಿ ಗಮನಿಸಬೇಕಾದ ಅಂಶಗಳು ಮತ್ತು ಶುದ್ಧ ಹಾಲನ್ನು ಉತ್ಪಾದಿಸುವ ವಿಧಾನ.

ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳ RTC/ಪಹಣಿ/ಉತಾರ್ ವನ್ನು ತೆಗೆದುಕೊಂಡು ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಭೇಟಿ ಮಾಡಿದರೆ, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ನಿಮ್ಮ RTC ಗೆ ಆಧಾರ್ ಜೋಡಣೆ ಮಾಡಿಕೊಡುತ್ತಾರೆ. RTC ಗೆ ಆಧಾರ್ ಜೋಡಣೆ ಕೆಲಸ ಆದ ಮೇಲೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ಪಡೆಯಬಹುದು.

RTC ಗೆ ಆಧಾರ್ ಜೋಡಣೆಗೆ ಬೇಕಾಗುವ ದಾಖಲೆಗಳು:

1)RTC ಅಥವಾ ಎಲ್ಲಾ ಸರ್ವೇ ನಂಬರ್ ಖಾತೆ ಪ್ರತಿ

2)ಆಧಾರ್‌ ಕಾರ್ಡ ಜೆರಾಕ್ಸ ಪ್ರತಿ

3)ಬ್ಯಾಂಕ ಪಾಸ ಬುಕ್‌ ಜೆರಾಕ್ಸ ಪ್ರತಿ

4)ಪಾಸ್ ಪೋರ್ಟ ಸೈಜ್‌ 1 ಪೋಟೋ

ಅನೇಕ ರೈತರಲ್ಲಿ ಈ ಪ್ರಶ್ನೆ ಸಹಜವಾಗಿ ಬಂದಿರುತ್ತದೆ. ನಾವು ಏಕೆ ನಮ್ಮ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಏಕೆ ಮಾಡಿಸಬೇಕು ಎಂದು ಅದರ ಮಾಹಿತಿ ಇದರ ಕೆಳಗಿನ ಲೇಖನದಲ್ಲಿದೆ

1)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು.

2)ಕಂದಾಯ ಇಲಾಖೆಗೆ ರೈತರ ಜಮೀನಿನ ದಾಖಲೆಗಳನ್ನು digital ಮಾದರಿಯಲ್ಲಿ ಸಂಗ್ರಹಣೆ ಮಾಡಿಡಲು ಸಹಕಾರಿಯಾಗಿದೆ.

3)ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಳೆ ಪರಿಹಾರ ಸೌಲಭ್ಯ ಸಿಗಲು ಸಹಾಯವಾಗುತ್ತದೆ.

4)ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಡಿಯಲ್ಲಿ ಸೌಲಭ್ಯ ಸಿಗಲು ಸಹಾಯವಾಗುತ್ತದೆ.

5)ಕೃಷಿಕರಿಗೆ ಕೃಷಿ ಸಹಕಾರಿ ಸಂಘಗಳಿಂದ ಕೃಷಿ ಸಾಲ ಪಡೆಯಲು ಸಹಾಯವಾಗುತ್ತದೆ.

6)ಕೃಷಿ  ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: ಕೃಷಿ ಸಾಲ ಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷದವರೆಗೆ ಸಹಾಯಧನ ಪಡೆದುಕೊಳ್ಳಬಹುದು!

ಕೃಷಿ ಇಲಾಖೆಯ ಸೌಲಭ್ಯಗಳು

A)ಬಿತ್ತನೆ ಬೀಜಗಳನ್ನು ಪಡೆಯಲು

B)ಕೃಷಿ ಪರಿಕರಗಳನ್ನು ಪಡೆಯಲು

C)ಕೃಷಿ ಯಂತ್ರೋಪಕರಣಗಳನ್ನು ಪಡೆಯಲು

D)ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಪಡೆಯಲು

E)ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕದ ಪೈಪಗಳನ್ನು ಪಡೆಯಲು

ಇತ್ತೀಚಿನ ಸುದ್ದಿಗಳು

Related Articles