Friday, September 20, 2024

Gruhajyothi Scheme : ಗೃಹಜ್ಯೋತಿ ಯೋಜನೆ ಸಂಬಂದ ಪಟ್ಟಂತೆ ಇಂಧನ ಇಲಾಖೆಯಿಂದ ನೂತನ ಪ್ರಕಟಣೆ:

ರಾಜ್ಯ ಸರ್ಕಾರ (State Goverment )ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ (Good News) ನೀಡಿರುತ್ತದೆ. ಮೂರು ವಿದ್ಯುತ್ ಸಂಬಂಧಿಸಿದ ಯೋಜನೆಗಳಾದ ಭಾಗ್ಯ ಜ್ಯೋತಿ,( Bhagya joyti) ಕುಟೀರ ಜ್ಯೋತಿ,(Kutira jyoti ) ಅಮೃತ ಜ್ಯೋತಿ (Amrut jyoti) ಯೋಜನೆಗಳನ್ನು ಗೃಹಜ್ಯೋತಿಯಲ್ಲಿ ವಿಲೀನ ಮಾಡಲು ಆದೇಶ ಹೊರಡಿಸಿದೆ. ಈ ಮೂಲಕ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ನೇರ ಲಾಭ ದೊರೆಯುವುದು. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿಯಡಿ ವಿಲೀನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಮೂರು ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ಈ ಯೋಜನೆಯ ಲಾಭ ದೊರೆಯಲಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಫ್ರೀ ನೀಡಲಾಗುತ್ತಿದೆ. ಜುಲೈ 1ರಿಂದಲೇ ಈ ಯೋಜನೆ ಜಾರಿಗೆ ಬಂದಿದೆ. ಆದರೆ ಈಗಾಗಲೇ ಜಾರಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳ ಪರಿಸ್ಥಿತಿ ಏನು ?ಇದರ ಫಲಾನುಭವಿಗಳಿಗೆ ತೊಂದರೆಯೇ? ಎನ್ನುವ ಗೊಂದಲ ಕಾಡುತ್ತಿತ್ತು ಇದೀಗ ಇಂಧನ ಸಚಿವ ಕೆಜೆ ಜಾರ್ಜ್ ವಿಶೇಷ ಕಾಳಜಿ ವಹಿಸಿ ಹೊಸ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಈ ಎಲ್ಲಾ ಫಲಾನುಭವಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ.


ಹೌದು ಇಂಧನ ಇಲಾಖೆಯಿಂದ ಗೃಹಜ್ಯೋತಿ ಯೋಜನೆ ಸಂಬಂದ ಪಟ್ಟಂತೆ ಇಂಧನ ಇಲಾಖೆಯಿಂದ ನೂತನ ಪ್ರಕಟಣೆ ಕೆಳಗಿನಂತೆ ಇದೆ.

ಈ ಮೂರು ಜ್ಯೋತಿಗಳ ಫಲಾನುಭವಿಗಳಲ್ಲಿ ಇದ್ದಂತಹ ಗೊಂದಲವನ್ನು ಇಂಧನ ಸಚಿವ ಕೆಜೆ ಜಾರ್ಜ್ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ನ. ಅಷ್ಟೇ ಅಲ್ಲ ಇವರಿಗೂ ಹೆಚ್ಚುವರಿ ಫ್ರೀ ಕರೆಂಟ್ ನೀಡುವ ಮೂಲಕ ರಾಜ್ಯ ಸರ್ಕಾರ ಬಡ ಕುಟುಂಬಗಳ ನೆರವಿಗೆ ನಿಂತಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಇದರಿಂದ ನೇರ ಲಾಭ ದೊರೆಯಲಿದೆ.

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಇದುವರೆಗೆ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿ ಕುಟುಂಬಗಳಿಗೆ 40 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈಗ ಈ ಎರಡು ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಡಿ ವಿಲೀನ ಮಾಡಲಾಗಿದ್ದು , 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ.

ಅದೇ ರೀತಿ ಅಮೃತ ಜ್ಯೋತಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವಿದ್ಯುತ್ ದರವನ್ನು ಡಿಬಿಟಿ ಮೂಲಕ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಈಗ ಈ ಯೋಜನೆಯನ್ನು ಕೂಡ ಗೃಹಜ್ಯೋತಿಗೆ ಸೇರಿಸಲಾಗಿದ್ದು, ಈ ಮೂಲಕ ಫಲಾನುಭವಿಗಳಿಗೆ 75 ಯೂನಿಟ್ ಮತ್ತು ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಮೂಲಕ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ನೇರ ಲಾಭ ಸಿಗಲಿದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿಯಡಿ ವಿಲೀನಗೊಳಿಸಿ ಸರ್ಕಾರ ಇಲ್ಲಾ ಯೋಜನೆಗಳ ಫಲಾನುಭವಿಗಳಿಗೂ ಅವಕಾಶ ಒದಗಿಸಿ ಅವರಿಗೂ ಯಾವುದೇ ನೋವುಂಟು ಮಾಡದೆ ಸಿಹಿ ಸುದ್ದಿ ನೀಡಿ ಜನಪರ ಎಂದು ತೋರಿಸಿದೆ.

How to check gruha jyothi application status : ಗೃಹ ಜ್ಯೋತಿ ಯೋಜನೆ ಅರ್ಜಿ ಸರಿಯಾಗಿದೆಯೇ? ಅರ್ಜಿ ಪರಿಸ್ಥಿತಿ ಹೇಗಿದೆ?

ಇಲ್ಲಿ ಕಾಣಿಸಿರುವ ವೆಬ್ ಸೈಟ್ ಭೇಟಿ ನೀಡಿ ನಂತರ ಗೃಜ್ಯೋತಿ ಯೋಜನೆಗೆ ನೋಂದಣಿ ಮಾಡುವ ಪೇಜ್ ದೊರೆಯುವುದು, ನಂತರ ಅರ್ಜಿಯ ಮೇಲೆ ಓತ್ತಿ .https:/sevasindhugs.karnataka.gov.in/
ಇದಾದ ನಂತರ ನಿಮ್ಮ ಇಂಧನ ಇಲಾಖೆ ಘಟಕವನ್ನು ಆಯ್ಕೆ ಮಾಡಿಕೊಳ್ಳಿ.

mescom/cesc/Hescom/Bescom/Gescom/ ಇಲ್ಲಿ ಕಾಣಿಸಿದ ಒಂದನ್ನು ಸೆಲೆಕ್ಟ ಮಾಡಿಕೊಳ್ಳಿ.
ನಂತರ ನಿಮ್ಮ ಖಾತೆಯ ಐಡಿ ನಮೂದಿಸಬೇಕು “Enter Your Account ID” ನಲ್ಲಿ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ಗ್ರಾಹಕರ ಸಂಖ್ಯೆ/ ಹಾಕಿ ಸ್ಟೆಟಸ್ ಚೆಕ್ ಆಯ್ಕೆ ಮಾಡಬೇಕು.

ನಂತರ ಇಲ್ಲಿ ಅರ್ಜಿದಾರರ, ಅರ್ಜಿ ಸಂಪೂರ್ಣ ವಿವರ ಅಂದರೆ, ದಿನಾಂಕ, ರೆಪ್ರೆಸ್ಸ್ ನಂಬರ್‍, ಅರ್ಜಿ ಸ್ಥಿತಿ ಕಾಣಿಸಿವುದು ,/ “Our application for GruhaJhoythi Scheme is received and sent to ESCOM for processing” ಈ ರೀತಿ ಅಲ್ಲಿ ಕಾಣಿಸಿದರೆ ನೀವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿದೆ. ಅರ್ಜಿ ಪರಿಶೀಲನೆಯಲ್ಲಿ ಇದೆ ಅಂತ ಅರ್ಥ.

ಒಂದು ವೇಳೆ ಅರ್ಜಿ ಸಲ್ಲಿಕೆಯಾಗದಿದ್ದಲಿ ಈ ರೀತಿ ಗ್ರಾಹಕರ ಸಂಖ್ಯೆ ಹಾಕಿದ ನಂತರ Data Not Found. Please Register to Gruhajyothi Scheme! ಅಂತ ಕಾಣಿಸಿದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯ ಗೊಂದಲ ಇದೆಯೇ? ಅರ್ಹರು ಯಾರು? ಯಾವಾಗ ಅರ್ಜಿ ಸಲ್ಲಿಕೆ? ಸರ್ಕಾರದ ನಿಯಮಗಳೇನು ? ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ …

ಒಂದು ವೇಳೆ ಅರ್ಜಿ ಸಲ್ಲಿಕೆಯಲ್ಲಿ ನ್ಯೂನತೆಗಳು ( Problems ) ಕಂಡು ಬಂದರೆ:

ಗೃಹಜ್ಯೋತಿ : Gruhajyothi helpline Number: 08022279954/8792662814/8792662816.ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗಿಹರಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles