Monday, January 20, 2025

ಸಾವಯವ ಕೃಷಿಯ ಉದ್ಧೇಶ ಮತ್ತು ಪ್ರಯೋಜನದ ಬಗ್ಗೆ ನಿಮಗೆ ಎಷ್ಟು ಗೊತ್ತು?

ಆಧುನಿಕ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಕೀಟನಾಶ ಮತ್ತು ಕಳೆನಾಶಕಗಳ ಬಳಕೆ ಹೆಚ್ಚುತಾ ಸಾಗಿ ಭೂ ಫಲವತ್ತತೆಯನ್ನು ಕಾಪಾಡುವಲ್ಲಿ ಸಾವಯವ ಗೊಬ್ಬರಗಳ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ವಿವೇಚನೆಯಿಲ್ಲದೆ ಬಳಸಿದ ರಾಸಾಯನಿಕ ಗೊಬ್ಬರ ಮತ್ತ ಕೀಟನಾಶಕಗಳು ಮಣ್ಣಿನ ಆರೋಗ್ಯವನ್ನು ಕ್ಷೀಣಿಸಿ ಫಲವತ್ತತೆ ಕಡಿಮೆ ಮಾಡಿ ಉತ್ಪಾದನೆಯನ್ನು ಕುಂಠಿತಗೊಳಿಸಿವೆ. ನೀರು ಹಾಗೂ ಪರಿಸರದ ಮೇಲೆ ಅಹಿತಕರ ವಾತಾವರಣವನ್ನು ಉಂಟುಮಾಡಿದೆ.

ಈ ದಿಸೆಯಲ್ಲಿ ಪ್ರಕೃತಿದತ್ತವಾದ ಸಾವಯವ ಮೂಲದ ಗೊಬ್ಬರಗಳಾದ ಕೃಷಿ ಹಾಗೂ ಪ್ರಾಣಿಗಳ ತ್ಯಾಜ್ಯಗಳು, ಹಸಿರೆಲೆ ಗೊಬ್ಬರಗಳು ಮತ್ತು ಖನಿಜಯುಕ್ತ ಶೀಲೆಗಳನ್ನು  ಕೃಷಿಯಲ್ಲಿ ಬಳಸುವುದರ ಮೂಲಕ ಪ್ರಕೃತಿಗೆ ರಾಸಾಯನಿಕ ಗೊಬ್ಬರಗಳಿಂದ ಆಗುವ ಹಾನಿಯನ್ನು ತಡೆಗಟ್ಟಬಹುದು.

ಸಾವಯವ ಕೃಷಿಯ ಮೂಲ ಉದ್ಧೇಶ :

* ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಧೀರ್ಘಾವಧಿಯಲ್ಲಿ ಮಣ್ಣಿನ ಫಲವಯತ್ತತೆಯನ್ನು ಕಾಪಾಡುವುದು ಮತ್ತು ಬೆಳೆ ಉತ್ಪಾದನೆಯನ್ನು ಅಭಿವೃದ್ದಿಪಡಿಸುವುದು.

* ಅವಶ್ಯಕತೆಗೆ ಅನುಗುಣವಾಗಿ ಬೆಳೆಗೆ ತಗಲುವ ಪೀಡೆ ಅಥವಾ ಕಳೆಗಳ ನಿರ್ವಹಣೆ ಮೂಲಕ ಸುಸ್ಥಿರ ಕೃಷಿಯನ್ನು ಕಾಯ್ದುಕೊಳ್ಳುವುದು.

* ರಾಸಾಯನಿಕ ಗೊಬ್ಬರಗಳ ಬಳಕೆಗೆ ಬದಲಾಗಿ ಸಾವಯವ ಗೊಬ್ಬರ ಬಳಸುವುದು ಹಾಗೂ ಬೆಳೆ ಪೀಡೆಗಳಾದ ಕೀಟ ಅಥವಾ ರೋಗಗಳನ್ನು ನಿರ್ವಹಿಸುವುದಕ್ಕಾಗಿ ರಾಸಾಯನಿಕ ಪೀಡೆನಾಶಕಗಳ ಬದಲಾಗಿ ನೈಸರ್ಗಿಕ ಇಲ್ಲವೇ ಜೈವಿಕ ಅಥವಾ ಸಸ್ಯಜನ್ಯ ಪೀಡೆನಾಶಕಗಳನ್ನು ಯಶಸ್ವಿಯಾಗಿ ಬಳಸುವುದು.

ಸಾವಯವ ಕೃಷಿಯಿಂದಾಗುವ ಪ್ರಯೋಜನಗಳು :

1. ಮಣ್ಣಿನ ಆರೋಗ್ಯವನ್ನು ಉತ್ತಮಗೊಳಿಸಲು ಹಾಗೂ ಕೃಷಿ ಉತ್ಪಾದನೆಯನ್ನು ಅಧಿಕಗೊಳಿಸಲು ಸಹಕಾರಿಯಾಗುವುದು.

2. ಪರಿಸರ ಆರೋಗ್ಯ ರಕ್ಷಣೆ ಮಾಡುವುದಲ್ಲದೆ, ಪರಿಸರದ ಮಲೀನತೆಯನ್ನು ಹಾಗೂ ಅಂತರ್ಜಲ ಮಾಲಿನ್ಯವನ್ನು ತಡೆಗಟ್ಟಿ ಮಾನವಕುಲ ಹಾಗೂ ಪ್ರಾಣಿವರ್ಗಕ್ಕೆ ಆಗಬಹುದಾದ ಅನಾಹುತವನ್ನು ತಡೆಗಟ್ಟಬಹುದು.

3. ಕೃಷಿ ಉತ್ಪಾದನಾ ಖರ್ಚನ್ನು ಕಡಿಮೆಗೊಳೊಸಬಹುದು.

4. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗೆ ಆಹಾರವು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದ್ದು ಉತ್ತಮ ಗುಣಮಟ್ಟದ್ದಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles