Sunday, November 10, 2024

ಪೀಡೆ ನಾಶಕಗಳ ಬಳಕೆಗಾಗಿ ಸುರಕ್ಷಿತ ಕ್ರಮಗಳು

• ಪೀಡೆ ನಾಶಕಗಳನ್ನು ಸುರಕ್ಷಿತ ಸ್ಥಳದಲ್ಲಿಇಟ್ಟು ಸುರಕ್ಷಿತವಾಗಿ ಉಪಯೋಗಿಸುವುದು ಹಾಗೂ ತಯಾರಕರು ಔಷದಿಗಳ ಪೊಟ್ಟಣ, ಡಬ್ಬದ ಮೇಲೆ ನೀಡಿರುವ ಸೂಚನೆ ಮುನ್ನೆಚ್ಚರಿಕೆ ಕ್ರಮಗಳನ್ನುಅನುಸರಿಸುವುದು ಮತ್ತು ಮಕ್ಕಳ ಕೈಗೆಸಿಗದಂತೆ ದೂರ ವಿರಿಸುವುದು.


• ಶಿಫಾರಸ್ಸು ಮಾಡಿದ ಹಾಗೂ ಶಿಫಾರಿತ ಪ್ರಮಾಣದಲ್ಲಿ ಮಾತ್ರ ಪೀಡೆ ನಾಶಕಗಳನ್ನು ಉಪಯೋಗಿಸುವುದು ಹಾಗೂ ಸುಸ್ಥಿತಿಯಲ್ಲಿರುವ ಸಿಂಪರಣಾ ಉಪಕರಣಗಳನ್ನು ಬಳಸುವುದು.


• ಪೀಡೆ ನಾಶಕಗಳನ್ನು ಬಳಸುವಾಗ ಕಡ್ಡಾಯವಾಗಿ ಶರೀರ ಹಾಗೂ ಮುಖವನ್ನು ಬಟ್ಟೆಯಿಂದ ರಕ್ಷಿಸಿಕೊಳ್ಳುವುದು ಹಾಗೂ ನಿರೋದಕ ಕವಚಗಳನ್ನು (ಮುಕವಾಡ) ಧರಿಸುವುದು.


• ಪೀಡೆ ನಾಶಕಗಳನ್ನು ಹೆಚ್ಚು ಗಾಳಿ, ಉಷ್ಣತೆ, ಮಳೆ ಬೀಳುವಾಗ ಸಿಂಪಡಿಸಬಾರದು.


• ಪೀಡೆ ನಾಶಕಗಳನ್ನುಸಿಂಪರಣೆ ಮಾಡುವವರು ನುರಿತ, ಆರೋಗ್ಯವಂತ, ಸದೃಢವಂತರಾಗಿರ ಬೇಕು ಹಾಗೂ ದೆಹದ ಮೇಲೆ ಯಾವುದೇ ಗಾಯಗಳಾಗಿರಬಾರದು. ಔಷದ ಸಿಂಪರಣೆ ಮಾಡುವಾಗ ಅನಾರೋಗ್ಯ ಉಂಟಾದರೆ ತಕ್ಷಣ ಪ್ರಥಮ ಉಪಚಾರ ಪಡೆಯಬೇಕು.


• ಯಾವುದೇ ಸಂದರ್ಭಗಳಲ್ಲೂ ಮುಚ್ಚಿರು ನಾಜಲ್ ಪೈಪುಗಳನ್ನು ಬಾಯಿಯಿಂದ ಊದಿ ತೆಗೆಯಬಾರದು.


• ಔಷಧ ಸಿಂಪರಣೆ ಮಾಡುವಾಗ ಇಲ್ಲವೇ ದ್ರಾವಣವನ್ನುತಯಾರಿಸುವಾಗ ತಿನ್ನುವುದು ಕುಡಿಯುವುದು ಧೂಮಪಾನ ಮಾಡಬಾರದು.


• ಪೀಡೆ ನಾಶಕಗಳನ್ನು ಸಿಂಪರಣೆ ಮಾಡಿದ ನಂತರ ಉಪಕರಣಗಳನ್ನು ಸಾರ್ವಜನಿಕ ಸ್ಥಳ, ಕೆರೆಹೊಂಡಗಳಲ್ಲಿ ಹರಿಯುವ ಕಾಲುವೆಗಳಲ್ಲಿ ತೊಳೆಯಬಾರದು, ಯಾವೂದೇ ಸಂದರ್ಬದಲ್ಲೂ ಖಾಲಿ ಡಬ್ಬಅಥವಾ ಚೀಲವನ್ನು ಬೇರೆ ಕೆಲಸಕ್ಕೆ ಬಳಸಬಾರದು. ಸಾದ್ಯವಾದಷ್ಟು ಮಟ್ಟಿಗೆ ಪುಡಿ ಮಾಡಿ ಭೂಮಿಯಲ್ಲಿ ಹೂಳಬೇಕು. ಸಿಂಪರಣೆ ಮಾಡಿದ ನಂತರ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಬೇಕು.

ಇತ್ತೀಚಿನ ಸುದ್ದಿಗಳು

Related Articles