Sunday, April 20, 2025

Rudset free training-ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ಜೇನು ಸಾಕಾಣಿಕೆ ಮತ್ತು ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

ನಿರುದ್ಯೋಗ ಗ್ರಾಮೀಣ ಮತ್ತು ನಗರ ಪ್ರದೇಶದ ಆಸಕ್ತ ಯುವಜನರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವವರಿಗೆ ಒಂದು ಅವಕಾಶ ಜೇನು ಸಾಕಾಣಿಕೆ, ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನಿಸಿದೆ.

ಉಡುಪಿ ಜಿಲ್ಲೆ ಬ್ರಹ್ಮಾವರದ ಸಮೀಪದ ಹೇರೂರು ರುಡ್ ಸೆಟ್ ಸಂಸ್ಥೆ ವತಿಯಿಂದ ಉಚಿತ ಊಟ-ವಸತಿ ಸಹಿತ ಆಸಕ್ತ ಯುವಜನರಿಗೆ ಉಚಿತ ಜೇನು ಸಾಕಾಣಿಕೆ, ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ  ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಬಂಡವಾಳಕ್ಕೆ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ.

ನಮ್ಮ ಸಂಸ್ಥೆಯಲ್ಲಿ ದಿನಾಂಕ ದಿನಾಂಕ 26/12/2024 ರಿಂದ 04/01/2025 (10 ದಿನಗಳ) ವರೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ ಹಾಗೂ ಎರೆಹುಳ ಗೊಬ್ಬರ ತಯಾರಿಕೆ ಕುರಿತು ಉಚಿತ  ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಆದ ಕಾರಣ ಈ ತರಭೇತಿಯನ್ನು  ಕಲಿಯಲು ಆಸಕ್ತ ಇರುವವರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯನ್ನು ಹೊರಡಿಸಲಾಗಿದೆ.

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2. ಬೇಕರಿ ಆಹಾರ ತಯಾರಿಕೆ (1 ತಿಂಗಳು)

3.ಅಣಬೆ ಬೇಸಾಯ (10 ದಿನಗಳು)

4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)

How to join training- ತರಬೇತಿಯನ್ನು ಯಾರೆಲ್ಲ ಪಡೆಯಬಹುದು?

ವಯೋಮಿತಿ 18 ರಿಂದ 45 ವಯಸ್ಸಿನ ಒಳಗಿರಬೇಕು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ವಿವರ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಬ್ರಹ್ಮಾವರ,(ಹೇರೂರು)

ಉಡುಪಿ ಜಿಲ್ಲೆ576213.

7022560492, 9844086383, 9591233748, 9900889234,8861325564

Whatspp ಮೂಲಕ ಅರ್ಜಿ ಸಲ್ಲಿಸಲು:9844086383, 7022560492.

ಈ ತರಬೇತಿಗೆ ಭಾಗವಹಿಸಲು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು  brahmavara rudset udupi

ಇತ್ತೀಚಿನ ಸುದ್ದಿಗಳು

Related Articles