ನಮಸ್ಕಾರ ರೈತರೇ, ಇತ್ತೀಚಿನ ದಿನಗಳಲ್ಲಿ ತಮಗೆಲ್ಲ ಗೊತ್ತಿರುವ ಹಾಗೆ ಸುಮಾರು ಜನ ರೈತರ ಜಮೀನು ವಕ್ಫ್ ಆಸ್ತಿ ಎಂದು ಬರುತ್ತಿದೆ. ಹಾಗಾಗಿ ಎಲ್ಲರೂ ಮನೆಯಲ್ಲೆ ಕುಳಿತು ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ/ RTC ಚೆಕ್ ಮಾಡಿಕೊಳ್ಳುವ ವಿಧಾನ ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಕಳೆದೆರೆಡು ವಾರಗಳಿಂದ ಸದ್ದು ಮಾಡುತ್ತಿರುವ ರೈತರ ಜಮೀನಿನ ವಿಚಾರದ ವಕ್ಫ್ ಕಾಯ್ದೆಯು ಸುಮಾರು ಜನ ರೈತರಿಗೆ ಶಾಕ್ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ತಮ್ಮ ತಾತ ಮುತ್ತಾತರ ಕಾಲದಿಂದ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿರುವಂತಹ ರೈತರಿಗೆ ವಕ್ಫ್ ಕಾಯ್ದೆ ಶಾಕ್ ನೀಡಿದೆ.
ಎಷ್ಟೋ ಜನ ರೈತರಿಗೆ ಅವರಿಗೆ ತಿಳಿಯದೆ ಅವರ ಪಹಣಿ/ RTC ಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿರುತ್ತದೆ. ಹಾಗಾಗಿ ಎಲ್ಲಾ ರೈತರು ತಪ್ಪದೇ ನಿಮ್ಮ ಜಮೀನಿನ ಪಹಣಿಗಳನ್ನು (ಪರಿಶೀಲನೆ) ನೋಡಿಕೊಳ್ಳುವುದು ಸೂಕ್ತ.
ತಮ್ಮ ಪಹಣಿಯ ಸದ್ಯದ ಸ್ಥಿತಿ ಹೇಗೆ ತಿಳಿದುಕೊಳ್ಳಬೇಕು ಹಾಗೂ ಹೇಗೆ ಪರಿಶೀಲನೆ ಮಾಡಬೇಕು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ.
RTC name checking-ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ/ RTC ಚೆಕ್ ಮಾಡಿಕೊಳ್ಳುವ ವಿಧಾನ!
ಇಲ್ಲಿ ನೀಡಲಾದ ಲಿಂಕ್ ಮೂಲಕ (bhoomi RTC) ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನೋಡಬಹುದು.
1)bhoomi online land records ಈ ಒಂದು ಅದಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು.
2)ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್ ಹಾಕಿ GO ಮೇಲೆ ಒತ್ತಬೇಕು ಮತ್ತು ನಂತರ ಹಿಸ್ಸಾ ನಮೂದು ಮಾಡಬೇಕು.fech details ಮೇಲೆ ಕ್ಲಿಕ್ ಮಾಡಿ view ಒತ್ತಿ ಸದ್ಯದ ಪಹಣಿ ಸ್ಥಿತಿ ನೋಡಬಹುದು.
3) ಪಹಣಿಯಲ್ಲಿ 11 ನಂಬರ್ ಹಕ್ಕುಗಳು ಅದರಲ್ಲಿ ಪರಿಶೀಲನೆ ಮಾಡಬೇಕು.
ರೈತರ ಗಮನಕ್ಕೆ ಒಂದು ವೇಳೆ ನಿಮಗೆ ಈ ವೆಬ್ಸೈಟ್ ಮೂಲಕ ನೋಡಲು ಆಗದೆ ಇದ್ದಲ್ಲಿ ನೇರವಾಗಿ ನಾಡ ಕಛೇರಿ ಅಥವಾ ಸೈಬರ್ ಗಳಲ್ಲಿ ಪಹಣಿ/ RTC ಪ್ರಿಂಟ್ ತೆಗೆದು ನೋಡಬಹುದು.