ಹೌದು ರೈತ ಭಾಂದವರೇ ಕರ್ನಾಟಕ ರಾಜ್ಯ ಸರಕಾರದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೆಗೌಡ ಇವರು RTC/ಪಹಣಿ ಗೆ ಆಧಾರ್ ಲಿಂಕ್ ಮಾಡಲು ಜುಲೈ ತಿಂಗಳ ಗಡವು ನೀಡಿದ್ದಾರೆ. ಅಷ್ಟರೋಳಗೆ ಎಲ್ಲಾ ರೈತರು ಮತ್ತು ಸಾರ್ವಜನಿಕರು ತಮ್ಮ ತಮ್ಮ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಿಸಿ ಕೊಳ್ಳಿ ಇಲ್ಲವಾದಲ್ಲಿ ನಿಮಗೆ ಸರಕಾರಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ.
ಆತ್ಮೀಯ ರೈತ ಭಾಂದವರೇ ಕರ್ನಾಟಕ ಸರಕಾರದ ಕಂದಾಯ ಇಲಾಖೆಯವತಿಯಿಂದ ನಡೆಯುತ್ತಿರುವ RTC/ಪಹಣಿ ಗೆ ಆಧಾರ್ ಲಿಂಕ್ ಕಾರ್ಯಕ್ಕೆ ಕಂದಾಯ ಸಚಿವರು ಇದೇ ತಿಂಗಳು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ವಾಯ್ದೆ ನೀಡಲಾಗಿದೆ. ಹಾಗಾಗಿ ಯಾರು ಇನ್ನೂ RTC/ಪಹಣಿ ಗೆ ಆಧಾರ್ ಲಿಂಕ್ ಆಗಿಲ್ಲ ಮತ್ತು ಯಾರು RTC/ಪಹಣಿ ಗೆ ಆಧಾರ್ ಲಿಂಕ್ ಆಗಿದೆ ಎಂದು ನೋಡಿಕೊಳ್ಳಲು ಈ ಲೇಖನದಲ್ಲಿ ತಿಳಿಸಲಾಗಿದೆ.
ಇನ್ನೂ ಎಷ್ಟು ಜನರ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಲು ಬಾಕಿ ಇದೆ ಎಂಬ ಪಟ್ಟಿಯನ್ನು ಗ್ರಾಮ ಪಂಚಾಯತ್ ಅಥವಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಸಿ ಕೊಳ್ಳಿ ಇಲ್ಲವಾದಲ್ಲಿ ಇಲಾಖೆಯ ಸೌಲಭ್ಯಗಳಿಂದ ವಂಚಿತರಾಗುತ್ತಿರಾ.
HOW TO LINK RTC TO AADHAR-ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
ಸಾರ್ವಜನಿಕರು ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ನ್ನು ಪ್ರವೇಶ ಮಾಡಿ ನಂತರ ಈ ಕೆಳಗೆ ವಿವರಿಸಿರುವ ವಿಧಾನಗಳನ್ನು ಅನುಸರಿಸಿ ನಿಮ್ಮ ಪಹಣಿ/ RTC ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದು.
ವಿಧಾನ-1:ಮೊದಲಿಗೆ ಈ RTC Aadhar link ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಪ್ರವೇಶ ಮಾಡಬೇಕು. ತದನಂತರ ನಿಮ್ಮ ಮೊಬೈಲ್ ನಂಬರ್ ನ್ನು ಹಾಕಿ “Send otp” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-2:ಇದಾದ ಬಳಿಕ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ, ಅದನ್ನು ಹಾಕಿ “Login”ಮೇಲೆ ಕ್ಲಿಕ್ ಮಾಡಿ.
ವಿಧಾನ-3:ತದನಂತರ ಇಲ್ಲಿ ಜಮೀನು ಯಾರ ಹೆಸರಿಗೆ ಇದಯೋ ಅವರ ಆಧಾರ್ ಸಂಖ್ಯೆಯನ್ನು ಮತ್ತು ಆಧಾರ್ ನಲ್ಲಿರುವಂತೆಯೇ ಹೆಸರನ್ನು ಹಾಕಿ “Verify”ಮೇಲೆ ಕ್ಲಿಕ್ ಮಾಡಿದರೆ ಆಧಾರ್ ನ್ನು ಯಶಸ್ವಿಯಾಗಿ ಪರಶೀಲಿಸಲಾಗಿದೆ(Aadhar Verified Succesfully)ಎಂದು ತೋರಿಸುತ್ತದೆ. ನಂತರ “OK” ಎಂದು ಕ್ಲಿಕ್ ಮಾಡಬೇಕು.
ವಿಧಾನ-4: ಮೇಲಿನ ವಿಧಾನ ಮುಗಿಸಿದ ಬಳಿಕ ಕೆಳಗೆ ಕಾಣುವ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿಮಾಡಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡನಂಬರನ್ನು ಹಾಕಿ OTP ಪಡೆಯಿರಿ/Generate OTP ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಯನ್ನು ಹಾಕಿ”ಸಲ್ಲಿಸು/Submit” ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-5:ಎಡಬದಿಯಲ್ಲಿ ಕಾಣುವ “ಲಿಂಕ್ ಆಧಾರ್/link aadhar” ಮೇಲೆ ಕ್ಲಿಕ್ ಮಾಡಿ ಕೆಳಗೆ ಕಾಣುವ ನಿಮ್ಮ ಸರ್ವೆ ನಂಬರ್ ಒಂದೊಂದೆ ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ “link”ಮೇಲೆ ಕ್ಲಿಕ್ ಮಾಡಬೇಕು. ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಯನ್ನು ನಮೂದಿಸಿ “Verify OTP” ಮೇಲೆ ಕ್ಲಿಕ್ ಮಾಡಬೇಕು ಆಗ “ಪಹಣಿಯೊಂದಿಗೆ ನಿಮ್ಮ ಆಧಾರ್ ನ್ನು ಲಿಂಕ್ ಮಾಡಲು ನೀವು ಬಯಸುವಿರಾ?/DO you want to link your aadhar with the RTC?” ಎಂದು ತೋರಿಸುತ್ತದೆ. ಅದಕ್ಕೆ ಹೌದು/YES ಎಂದು ಕ್ಲಿಕ್ ಮಾಡಿದರೆ ನಿಮ್ಮ RTCಯನ್ನು ಆಧಾರನೊಂದಿಗೆ ಲಿಂಕ್ ಮಾಡಲಾಗಿದೆ/your RTC is linked with the aadhar ಎನ್ನುವ ಸಂದೇಶ ಬರುತ್ತದೆ.
ಇದೇ ರೀತಿ ಒಂದೊಂದು ಸರ್ವೆ ನಂಬರನ್ನು ಟಿಕ್ ಮಾಡಿಕೊಂಡು OTP ಪಡೆದು RTC ಗೆ ಆಧಾರ್ ಲಿಂಕ್ ಮಾಡಬೇಕು.