ರೈತ ಭಾಂದವರೇ, ಕಂದಾಯ ಇಲಾಖೆಯು ಕಳೆದ ಎರಡು ತಿಂಗಳಿಂದ ಪಹಣಿ/ RTC ಗೆ ಜೋಡಣೆ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೂ ಹಲವಾರು ರೈತರು ತಮ್ಮ ತಮ್ಮ ಜಮೀನಿನ್ನು ಪಹಣಿ/ RTC ಗೆ ಜೋಡಣೆ ಮಾಡಿಲ್ಲ. ನಿಮ್ಮ ಆಧಾರಗೆ RTC ಲಿಂಕ್ ಆಗಿದೆಯೇ? ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.
ರೈತರ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದು ರೈತರಿಗೆ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಎಲ್ಲಾ ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಆಗಿರುವುದನ್ನು ಈಗಲೇ ಚೆಕ್ ಮಾಡಿ ನೋಡಿಕೊಳ್ಳಿ. ಲಿಂಕ್ ಆಗದೇ ಇದ್ದಲ್ಲಿ ಲಿಂಕ್ ಮಾಡಿಸಿ.
ಇನ್ನೂ ಯಾರು RTC/ಪಹಣಿ ಗೆ ಆಧಾರ್ ಲಿಂಕ್ ಮಾಡಲು ಬಾಕಿ ಇದೆ ಎಂಬ ಪಟ್ಟಿಯನ್ನು ಗ್ರಾಮ ಪಂಚಾಯತ್ ಅಥವಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಸಿ ಕೊಳ್ಳಿ ಇಲ್ಲವಾದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳು ಸಿಗುವುದಿಲ್ಲ.
ನಮ್ಮ ರಾಜ್ಯದ ಸಚಿವರಾದ ಕಂದಾಯ ಇಲಾಖೆಯ ಕೃಷ್ಣ ಬೈರೆಗೌಡ ಇವರು RTC/ಪಹಣಿ ಗೆ ಆಧಾರ್ ಲಿಂಕ್ ಮಾಡಲು ಜುಲೈ ತಿಂಗಳ ಗಡವು ನೀಡಿದ್ದರು. ಅಷ್ಟರೋಳಗೆ ಎಲ್ಲಾ ರೈತರು ಮತ್ತು ಸಾರ್ವಜನಿಕರು ತಮ್ಮ ತಮ್ಮ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಿಸಿ ಕೊಳ್ಳಲು ತಿಳಿಸಿದ್ದರೂ ಇನ್ನೂ ತುಂಬಾ ಜನರ ಪಹಣಿ ಜೋಡಣೆ ಬಾಕಿ ಇರುವುದರಿಂದ ಈ ಕಾರ್ಯ ಈಗಲೂ ಚಾಲನೆಯಲ್ಲಿದ್ದು ಬಾಕಿ ಇರುವ ರೈತರು ಬೇಗನೆ ಲಿಂಕ್ ಮಾಡಿಸಿ.
ಇದನ್ನೂ ಓದಿ:ಬೊರ್ವೆಲ್ ಕೊರೆಸಲು ಡಿ.ದೇವರಾಜ ಅರಸು ನಿಗಮದಿಂದ 4.75 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
RTC/ಪಹಣಿ ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು?
ನಿಮ್ಮ ಗ್ರಾಮಗಳಲ್ಲಿರುವ ಗ್ರಾಮ ಲೆಕ್ಕಾಧಿಕಾರಿ/ಗ್ರಾಮ ಆಡಳಿತ ಅಧಿಕಾರಿ ಕಛೇರಿ ಭೇಟಿ ಮಾಡಿ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಿಸಬಹುದು.
How to check rtc link to Aadhar-ಪಹಣಿಗೆ ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂದು ಚೆಕ್ ಮಾಡುವುದು ಹೇಗೆ?
ರೈತರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿ ಪಹಣಿಗೆ ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂದು ಚೆಕ್ ಮಾಡಲು ಈ ಲಿಂಕ್ check rtc link to Aadhar ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-1:ನಿಮ್ಮ ಆಧಾರ್ ಕಾರ್ಡ್ ಗೆ ಜೋಡಣೆ/ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಬೇಕು. ಆ ನಂಬರ್ ಗೆ ಒಟಿಪಿ ಬರುತ್ತದೆ. ಆಗ ನೀವು ಆ ಒಟಿಪಿ ಯನ್ನು ನಮೂದಿಸಿ submit ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-2: ನಂತರ ಭೂಮಿ ನಾಗರಿಕ ಸೇವೆಗಳ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ ಮತ್ತು ನಿಮ್ಮ ಹೆಸರು ನಮೂದಿಸಬೇಕು.
ವಿಧಾನ-3:ನಂತರ ಅಲ್ಲಿ ನಾನು ನನ್ನ ಸ್ವ ಇಚ್ಛೆ ಯಿಂದ ಆಧಾರ್ ಗೆ ನನ್ನ ಒಪ್ಫಿಗೆಯನ್ನು ನೀಡುತ್ತೇನೆ ಎಂಬ ಬಾಕ್ಸ್ ಆಯ್ಕೆ ಮಾಡಿ ಅಲ್ಲಿ ಕಾಣುವ Verify ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ:ನಿಮ್ಮ ಪಹಣಿ/RTC ಮೇಲೆ ಯಾವ ಬ್ಯಾಂಕ್ ಎಷ್ಟು ಕೃಷಿ ಸಾಲ/ಬೆಳೆ ಸಾಲ ಇದೆ ಎಂದು ನೋಡುವ ಮಾಹಿತಿ.
ವಿಧಾನ-4:ಆಗ ನಿಮಗೆ ಆಧಾರನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿ ಒಕೆ ಮೇಲೆ ಕ್ಲಿಕ್ ಮಾಡಿದ ನಂತರ ಆರ್ಜಿಧಾರರ ವಿವರಗಳನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ವಿಧಾನ-5:ಅಲ್ಲಿ ನಿಮ್ಮ ಸಂಪೂರ್ಣ ವಿವರ ತೋರಿಸುತ್ತದೆ. ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಆಧಾರ್ ಕಾರ್ಡಿಗೆ ಯಾವ ಯಾವ ಸರ್ವೇ ನಂಬರ್ ಗಳು ಲಿಂಕ್ ಆಗಿದೆ ಲಿಸ್ಟ ತೋರಿಸುತ್ತದೆ.
RTC ಗೆ ಆಧಾರ್ ಲಿಂಕ್ ಮಾಡುವ ಲಿಂಕ್…..click here