Tuesday, December 3, 2024

Rtc correction-RTC/ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ?ಎಲ್ಲಿ ಹಾಗೂ ಯಾರು ಮಾಡಕೊಡುತ್ತಾರೆ?ಇಲ್ಲಿದೆ ಮಾಹಿತಿ.

ರೈತರು ತಮ್ಮ ಜಮೀನಿನ RTC/ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? ಮತ್ತು ಅದಕ್ಕೆ ಯಾರಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅದರ ದಾಖಲೆಗಳು ಏನುಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಪಹಣಿಯಲ್ಲಿ ಹೆಸರು ತಪ್ಪಾಗಿ ನಮೂದಿಸಿದಲ್ಲಿ ಅದನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು? ಪಹಣಿಯಲ್ಲಿ ಹೆಸರು  ತಿದ್ದುಪಡೆ ಪ್ರಕ್ರಿಯ ಹೇಗಿರುತ್ತದೆ? ಈ ಕುರಿತು ಹಲವು ಜನರಿಗೆ ಮಾಹಿತಿ  ಸರಿಯಾಗಿ ಇರುವುದಿಲ್ಲ.

rtc name correction documents-ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು:

1)ಆಧಾರ ಕಾರ್ಡ ಪ್ರತಿ.

2) ಪ್ರಸ್ತುತ ಲಭ್ಯವಿರುವ ಪಹಣಿಯನ್ನು ತೆಗೆದುಕೊಳ್ಳಬೇಕು. ನೆಮ್ಮದಿ ಕೇಂದ್ರ/ತಹಶೀಲ್ದಾರ ಕಚೇರಿಯಲ್ಲಿ ಸಿಗುತ್ತದೆ.

3) 20 ರೂಪಾಯಿ ಬೆಲೆಯ ಇ-ಸ್ಟಾಂಪ್ ಪೇಪರ್ (ಬಾಂಡ್ ಪೇಪರ್): ಇ-ಸ್ಟಾಂಪ್ ಪೇಪರ್ ನಲ್ಲಿ ಹೆಸರು ತಿದ್ದುಪಡಿ ಮಾಡುತ್ತಿರುವ ಕುರಿತು ವಿವರವನ್ನು ಟೈಪಿಂಗ್ ಮಾಡಿಸಬೇಕು. ನಂತರ ಅದರ ಮೇಲೆ ವಕೀಲರಿಂದ ತಪ್ಪದೇ ನೋಟರಿ ಮಾಡಿಸಬೇಕಾಗುತ್ತದೆ.

4) ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಕುರಿತು ಮಾದರಿ ಅರ್ಜಿ ಸಿದ್ದಪಡಿಸಬೇಕು.

ಇದನ್ನೂ ಓದಿ:ರೈತರ ನೋಂದಣಿ ಆಗಿದೆಯೇ ಇಲ್ಲವೇ ತಿಳಿಯಲು ಇಲ್ಲಿದೆ ಮಾಹಿತಿ!

rtc name correction process-ಪಹಣಿ ತಿದ್ದುಪಡಿ ಪ್ರಕ್ರಿಯೆ ಹೇಗಿರುತ್ತದೆ?

ಈ ಮೇಲಿನ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನಲ್ಲಿರುವ ಭೂಮಿ(ಶಾಖೆ) ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ನಂತರ ಭೂಮಿ(ಶಾಖೆ) ಕೇಂದ್ರದವರು ನಿಮ್ಮ ಗ್ರಾಮಕ್ಕೆ ಸಂಬಂಧಪಡುವ ಗ್ರಾಮ ಆಡಳಿತ ಅಧಿಕಾರಿ ಬಳಿ ನೀವು ಸಲ್ಲಿಸಿದ ಅರ್ಜಿ ಕಳಿಸುತ್ತಾರೆ. ತದನಂತರ ಗ್ರಾಮ ಆಡಳಿತ ಅಧಿಕಾರಿ ತಮಗೆ ಬಂದಿರುವ ಅರ್ಜಿ ಸಹಿತ  ದಾಖಲೆಗಳನ್ನು ಪರಿಶೀಲಿಸಿ. ದಾಖಲೆಗಳು ತಪ್ಪಾಗಿದ್ದಲ್ಲಿ ತಿರಸ್ಕರಿಸುವ ಹಕ್ಕನ್ನು ಸಹ ಅವರು ಹೊಂದಿರುತ್ತಾರೆ. ಒಂದು ವೇಳೆ ದಾಖಲೆಗಳು ಸರಿಯಾಗಿದ್ದ ಪಕ್ಷದಲ್ಲಿ ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರ ಸೂಚನೆಯ ಅನುಗುಣವಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡಲಾಗುತ್ತದೆ. ಕೆಲವು ದಿನಗಳ ನಂತರ ತಿದ್ದುಪಡಿಯಾದ ಪಹಣಿ ನಿಮ್ಮ ಕೈ ಸೇರುತ್ತದೆ. ಈ ರೀತಿಯಾಗಿ ಪಹಣಿಯಲ್ಲಿರುವ ಹೆಸರು ತಿದ್ದುಪಡಿ ಮಾಡಬಹುದು.

Pahani corrections benifits- ಪಹಣಿ ತಿದ್ದುಪಡಿಯ ಲಾಭಗಳೇನು?

ಜಮೀನು ಮಾರುವಾಗ/ಕೊಂಡುಕೊಳ್ಳುವಾಗ/ವಿಭಾಗ/ದಾನ ಮಾಡುವಾಗ್ ಹೆಸರು ಸರಿಯಾಗಿರುವುದು ಕಡ್ಡಾಯವಾಗಿದೆ.

ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಳ್ಳಲು ಆಧಾರ ಪ್ರತಿಯಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿ ಇರುವ ಹೆಸರು ಒಂದೇ ಇದ್ದಲ್ಲಿ ಯಾವುದೇ ಅಡಚಣೆ ಇಲ್ಲದೆ ಕೃಷಿ ಸಾಲ ಸಿಗುತ್ತದೆ.

ಸರ್ಕಾರದಿಂದ ಸಿಗುವ ಸರಕಾರಿ ಸವಲತ್ತು ಅಥವಾ ಸಹಾಯಧನ,ಪರಿಹಾರ ಧನ ಪಡೆಯುವುದಕ್ಕೆ ಪಹಣಿಯಲ್ಲಿ ಹೆಸರು ಸರಿಯಾಗಿ ಇರುವುದು ಕಡ್ಡಾಯವಾಗಿದೆ.

ಸರ್ಕಾರದ ಯಾವುದೇ ಯೋಜನೆಯಿಂದ ಹಣ ನೇರವಾಗಿ ಅಥವಾ ಡಿಬಿಟಿ ಮುಖಾಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಗೆ ಸಹಕಾರಿಯಾಗುತ್ತದೆ.

ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿದ ಮೇಲೆ ಆಕ್ಷೇಪಣೆ ಸಲ್ಲಿಸಲು ಮೊಬೈಲ್ ಗಳಿಗೆ ಸಂದೇಶ ಬಂದರೆ ಹೀಗೆ ಮಾಡಿ.

ಸೂಚನೆ: ಇದರ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ.  

ಇತ್ತೀಚಿನ ಸುದ್ದಿಗಳು

Related Articles