Thursday, September 19, 2024

RTC adhar Status- ಪಹಣಿಗೆ ಆಧಾರ್ ಲಿಂಕ್ ಅಗಿದಿಯಾ ಎಂದು ಹೇಗೆ ತಿಳಿಯುವುದು? ಇಲ್ಲಿದೆ ವೆಬ್ಸೈಟ್ ಲಿಂಕ್

ಕಂದಾಯ ಇಲಾಖೆಯ ನೂತನ ಪ್ರಕಟಣೆ ಪ್ರಕಾರ ಜಮೀನಿನ ಎಲ್ಲಾ ಸರ್ವೆ ನಂಬರ್ ಪಹಣಿಗಳಿಗೆ ಆಧಾರ್ ಕಾರ್ಡ ಜೋಡಣೆ(RTC adhar Status) ಮಾಡುವುದನ್ನು ಕಡ್ಡಾಯ ಮಾಡಲಾಗಿದ್ದು ಸಾರ್ವಜನಿಕರು ತಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಆಂದೋಲನ ಮಾದರಿಯಲ್ಲಿ ಆರ್.ಟಿ.ಸಿ ಗಳಿಗೆ ಆಧಾರ್ ಲಿಂಕ್ ಮಾಡುವ ಕೆಲಸದಲ್ಲಿ ತೊಡಗಿದ್ದು, ಈ ಕೆಳಗೆ ಜಮೀನು ಹೊಂದಿರುವವರು ತಮ್ಮ ಪಹಣಿಗೆ ಆಧಾರ್ ಲಿಂಕ್(RTC adhar link) ಅಗಿದಿಯೋ? ಇಲ್ಲವೋ? ಎಂದು ತಮ್ಮ ಮೊಬೈಲ್ ನಲ್ಲೇ ಮೂಲಕವೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ

ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಪಹಣಿ(RTC) ಗೆ ಆಧಾರ್ ಕಾರ್ಡ ಜೋಡಣೆ ಅಗಿದಿಯೋ? ಇಲ್ಲವೋ? ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: PM Kisan Scheme 2024: PM kisan ಹೊಸದಾಗಿ ಅರ್ಜಿ ಸಲ್ಲಿಸಲು ಮಾನದಂಡಗಳೇನು??? ಕೇಂದ್ರ ಸರ್ಕಾರದ ವಾರ್ಷಿಕ 6000/-ರೂ ಪಡೆಯಲು ಅರ್ಹತೆ ಮತ್ತು ಅನರ್ಹತೆಗಳೇನು?

RTC adhar link status- ಪಹಣಿ/RTC/ಊತಾರ್ ಗೆ ಆಧಾರ್ ಜೋಡಣೆ ಅಗಿರುವುದನ್ನು ಖಚಿತಪಡಿಸಿಕೊಳ್ಳುವ ವಿಧಾನ:

Step-1: ಮೊದಲಿಗೆ ಈ RTC adhar link status ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಭೂಮಿ ಜಾಲತಾಣವನ್ನು ಭೇಟಿ ಮಾಡಬೇಕು. ಬಳಿಕ ಜಮೀನು ಯಾರ ಹೆಸರಿಗೆ ಇರುತ್ತದೆಯೋ ಅವರ ಮೊಬೈಲ್ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ “SEND OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ತದನಂತರ ನೀವು ಹಾಕಿರುವ ಮೊಬೈಲ್ ನಂಬರ್ ಗೆ ಬಂದಿರುವ 6 ಅಂಕಿಯ ಒಟಿಪಿ ಅನ್ನು ನಮೂದಿಸಿ “LOGIN” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: First installment drought payment message: ಮೊದಲ ಕಂತಿನ ಬೆಳೆಹಾನಿ ಪರಿಹಾರ ಸಂದೇಶ ಬಂದರೂ ಹಣ ಜಮಾ ಆಗಿರದಿದ್ದರೇ ತಕ್ಷಣ ಈ ಕೆಲಸ ಮಾಡಿ!!

Step-2: ಮೇಲಿನ ವಿಧಾನವನ್ನು ಅನುಸರಿಸಿ ಲಾಗಿನ್ ಅದ ಬಳಿಕ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ಮತ್ತು ಆಧಾರ್ ಕಾರ್ಡನಲ್ಲಿರುವಂತೆ ಹೆಸರನ್ನು ಭರ್ತಿ ಮಾಡಿ “Verify” ಎಂದು ಕಾಣುಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ “ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ” ಎಂದು ಗೋಚರಿಸುತ್ತದೆ ಇದಕ್ಕೆ “OK” ಎಂದು ಕ್ಲಿಕ್ ಮಾಡಿಬೇಕು.

Step-3: ಈ ಮೇಲಿನ ಹಂತವನ್ನು ಮುಗಿಸಿದ ಬಳಿಕ ಅಲ್ಲೇ ಕೆಳಗೆ ಗೋಚರಿಸುವ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ OTP ಬಟನ್ ಮೇಲೆ ಟಿಕ್ ಮಾಡಿ ಒಟಿಪಿ ಪಡೆಯಿರಿ/Generate OTP ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ “ಸಲ್ಲಿಸು/Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Agriculture Department machinery: ಯಾವ ಉಪಕರಣಕ್ಕೆ ಯಾವ ದಾಖಲೆಗಳು ಬೇಕು:

Step-4: ಈ ಪೇಜ್ ನ ಮುಖಪುಟದ ಎಡಬದಿಯಲ್ಲಿ ಕಾಣುವ “ಲಿಂಕ್ ಆಧಾರ್/Link Aadhar” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಕಾಣುವ ನಿಮ್ಮ ಸರ್ವೆ ನಂಬರ್ ಒಂದೊಂದನ್ನು ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ “Link” ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ “Verify OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಗ “ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?/ Do you want to link your Aadhaar with the RTC?” ಎಂದು ಪ್ರಶ್ನೆ ತೋರಿಸುತ್ತದೆ ಅದಕ್ಕೆ ಹೌದು/Yes ಎಂದು ಕ್ಲಿಕ್ ಮಾಡಿದರೆ ಈ ಸರ್ವೆ ನಂಬರ್ ಈಗಾಗಲೇ ಲಿಂಕ್ ಆಗಿದೆ/Survey No. already linked” ಎನ್ನುವ ಸಂದೇಶ ತೋರಿಸಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಅಗಿದೆ ಎಂದು ನೀವು ತಿಳಿದುಕೊಳ್ಳಬೇಕು.

ಇದನ್ನೂ ಓದಿ: Mgnreg Scheme-2024: ವೈಯಕ್ತಿಕ ಕಾಮಗಾರಿಗಳು ಮತ್ತು ದೊರೆಯುವ ಅನುದಾನ ವಿವರ:

ಇತ್ತೀಚಿನ ಸುದ್ದಿಗಳು

Related Articles