Friday, November 22, 2024

RTC adhar link- ಪಹಣಿಗೆ ಆಧಾರ್ ಲಿಂಕ್ ಮಾಡಲು ಈ ಎರಡು ವಿಧಾನ ಅನುಸರಿಸಿ!

ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್(RTC adhar card link) ಮಾಡಲು ಸರಕಾರದಿಂದ ಅನುಮತಿಯನ್ನು ನೀಡಲಾಗಿದೆ.

ಅಂದರೆ ಸರಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಥವಾ ಆ ಯೋಜನೆಯ ಸೌಲಭ್ಯವನ್ನು ತ್ವರಿತವಾಗಿ ಸಾರ್ವಜನಿಕರು ತಲುಪಿಸಲು ಮತ್ತು ನೈಜ ಅರ್ಹ ಫಲಾನುಭವಿಗಳಿಗೆಯೇ ವಿವಿಧ ಯೋಜನೆಯ ಪ್ರಯೋಜನ ಪಡೆಯಲು ಪರಿಣಾಮಕಾರಿಯಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲು ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಂದಾಯ ಇಲಾಖೆಯಿಂದ ಕಡ್ಡಾಯ ಮಾಡಲಾಗಿದೆ.

ಅದ್ದರಿಂದ ನಾಗರಿಕರು ಈ ಕೆಳಗೆ ವಿವರಿಸಿರುವ ಎರಡು ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಮತ್ತು ಖುದ್ದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ಪಹಣಿಗಳಿಗೆ ಆಧಾರ್ ಕಾರ್ಡ ಅನ್ನು ಜೋಡಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವ ರೈತರ ಪಟ್ಟಿ ಮತ್ತು ಕಾರಣ :

1) RTC aadhar card link- ನಿಮ್ಮ ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ:

ಜಮೀನು ಹೊಂದಿರುವ ನಾಗರಿಕರು ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಒಂದೆರಡು ಕ್ಲಿಕ್ ನಲ್ಲಿ ಪಹಣಿ/ಉತಾರ್/RTC ಗೆ ಆಧಾರ್ ಲಿಂಕ್ ಮಾಡಬಹುದಾಗಿದೆ.

Step-1: ಪ್ರಥಮದಲ್ಲಿ RTC aadhar card link ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ತದನಂತರ ಈ ಪುಟದಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಬೇಕು.

ಇದನ್ನೂ ಓದಿ: Panchamitra Whatsapp Number: ಗ್ರಾಮ ಪಂಚಾಯಿತಿ ಸೇವೆ ಮತ್ತು ಸಮಸ್ಯೆಗಳಿಗೆ ಈ ವಾಟ್ಸಪ್ ನಂಬರ್‍ ಕಳುಹಿಸಿ :

Step-2: ಕ್ಯಾಪ್ಚ್ ಕೋಡ್ ನಮೂದಿಸಿದ ಬಳಿಕ ಇದೇ ಪೇಜ್ ನಲ್ಲಿ ಕೆಳಗೆ ಕಾಣುವ “Send OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ನಮೂದಿಸಿರುವ ಮೊಬೈಲ್ ನಂಬರ್ ಗೆ 4 ಅಂಕಿಯ OTP ಬರುತ್ತದೆ ಅದನ್ನು ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ “ನಿಮ್ಮ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಮಾಡಿ” ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಅಲ್ಲಿ ಕೇಳುವ ಅಗತ್ಯ ಅಧಾರ್ ಕಾರ್ಡ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ವಿಧಾನ-2: ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಕೊಳ್ಳುವುದು:

ಸಾರ್ವಜನಿಕರು ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ನಿಮ್ಮ ಹಳ್ಳಿಯ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಲಾದ ಆಧಾರ್ ಕಾರ್ಡ ಪ್ರತಿ ಮತ್ತು ಖುದ್ದು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು ಎಂದು ಕಂದಾಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳು

Related Articles