Friday, September 20, 2024

Revenue Department RTC to Aadhar link-ಕಂದಾಯ ಇಲಾಖೆಯಿಂದ ಪಹಣಿ/ RTC ಗೆ ಆಧಾರ್ ಲಿಂಕ್ ಆಂದೋಲನ! ಮನೆಯಲ್ಲೇ ಕುಳಿತು ಲಿಂಕ್ ಮಾಡಲು ಇಲ್ಲಿದೆ ಮಾಹಿತಿ.

ಕಂದಾಯ ಇಲಾಖೆಯಿಂದ ರೈತರ ಜಮೀನಿನ RTC/ಪಹಣಿ/ಉತಾರಿಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಎಲ್ಲಾ ಕೃಷಿ ಜಮೀನು ಹೊಂದಿದ ಮತ್ತು ಉತಾರ/ಪಹಣಿ/ RTC ಗಳಿಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯ. ಈ ಆಧಾರ್ ಜೋಡಣೆ ಕೆಲಸವನ್ನು ಕಂದಾಯ ಇಲಾಖೆಯ ಗ್ರಾಮ ಮಟ್ಟದ ಅಧಿಕಾರಿಗಳಾದ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಆಂದೋಲನದ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೆಗೌಡ ಇವರು ಕಂದಾಯ ಇಲಾಖೆಯಲ್ಲಿ ಪಾರರ್ದಶಕತೆ ತರಲು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಿಸಲು ಕರೆ ನೀಡಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾರೈತರು ತಪ್ಪದೇ ನಿಮ್ಮ ನಿಮ್ಮ RTC/ಉತಾರ/ಪಹಣಿ ಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಕಂದಾಯ ಇಲಾಖೆಯಲ್ಲಿ ಕೆಲಸಗಳು ಪಾರರ್ದಶಕತೆ ಮತ್ತು ರೈತರು ಜಮೀನಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಅನುಕೂಲವಾಗಲಿ ಎಂದು ಕರ್ನಾಟಕ ಸರಕಾರದ ಕಂದಾಯ ಸಚಿವರು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ರೈತರು ಪದೇ ಪದೇ ಕಂದಾಯ ಇಲಾಖೆಗೆ ಅಲೆಯುವುದು ತಪ್ಪುತ್ತದೆ.

ಇದನ್ನೂ ಓದಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ.

ಏಕೆ RTC/ಪಹಣಿ ಗೆ ಆಧಾರ್ ಲಿಂಕ್ ಮಾಡಬೇಕು ನಿಮಗೆ ಗೊತ್ತೆ?

1)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು.

2)ಕಂದಾಯ ಇಲಾಖೆಗೆ ರೈತರ ಜಮೀನಿನ ದಾಖಲೆಗಳನ್ನು digital ಮಾದರಿಯಲ್ಲಿ ಸಂಗ್ರಹಣೆ ಮಾಡಿಡಲು ಸಹಕಾರಿಯಾಗಿದೆ.

3)ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಳೆ ಪರಿಹಾರ ಸೌಲಭ್ಯ ಸಿಗಲು ಸಹಾಯವಾಗುತ್ತದೆ.

4)ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಡಿಯಲ್ಲಿ ಸೌಲಭ್ಯ ಸಿಗಲು ಸಹಾಯವಾಗುತ್ತದೆ.

5)ಕೃಷಿ  ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಹಾಯವಾಗುತ್ತದೆ.

HOW TO LINK RTC TO AADHAR-ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಸಾರ್ವಜನಿಕರು ಕಂದಾಯ ಇಲಾಖೆಯ ಅಧಿಕೃತ ಭೂಮಿ ವೆಬ್ಸೈಟ್ ನ್ನು ಪ್ರವೇಶ ಮಾಡಿ ನಂತರ ಈ ಕೆಳಗೆ ವಿವರಿಸಿರುವ ವಿಧಾನಗಳನ್ನು ಅನುಸರಿಸಿ ನಿಮ್ಮ ಪಹಣಿ/ RTC ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದು.

ವಿಧಾನ-1:ಮೊದಲಿಗೆ ಈ RTC Aadhar link ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಪ್ರವೇಶ ಮಾಡಬೇಕು. ತದನಂತರ ನಿಮ್ಮ ಮೊಬೈಲ್ ನಂಬರ್ ನ್ನು ಹಾಕಿ “Send otp” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-2:ಇದಾದ ಬಳಿಕ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ, ಅದನ್ನು ಹಾಕಿ “Login”ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಅಡಿಕೆ ಬೆಳೆ ಬೆಳೆಯುವ ರೈತರು ಮುಂಗಾರು ಹಂಗಾಮಿನಲ್ಲಿ ಮಾಡಬೇಕಾದ ಕ್ರಮಗಳು.

ವಿಧಾನ-3:ತದನಂತರ ಇಲ್ಲಿ ಜಮೀನು ಯಾರ ಹೆಸರಿಗೆ ಇದಯೋ ಅವರ ಆಧಾರ್ ಸಂಖ್ಯೆಯನ್ನು ಮತ್ತು ಆಧಾರ್ ನಲ್ಲಿರುವಂತೆಯೇ ಹೆಸರನ್ನು ಹಾಕಿ “Verify”ಮೇಲೆ ಕ್ಲಿಕ್ ಮಾಡಿದರೆ ಆಧಾರ್ ನ್ನು ಯಶಸ್ವಿಯಾಗಿ ಪರಶೀಲಿಸಲಾಗಿದೆ(Aadhar Verified Succesfully)ಎಂದು ತೋರಿಸುತ್ತದೆ. ನಂತರ “OK” ಎಂದು ಕ್ಲಿಕ್ ಮಾಡಬೇಕು.

ವಿಧಾನ-4: ಮೇಲಿನ ವಿಧಾನ ಮುಗಿಸಿದ ಬಳಿಕ ಕೆಳಗೆ ಕಾಣುವ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿಮಾಡಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮತ್ತೊಮ್ಮೆ ಅರ್ಜಿದಾರರ ಆಧಾರ್ ಕಾರ್ಡನಂಬರನ್ನು ಹಾಕಿ OTP ಪಡೆಯಿರಿ/Generate OTP ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಯನ್ನು ಹಾಕಿ”ಸಲ್ಲಿಸು/Submit” ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-5:ಎಡಬದಿಯಲ್ಲಿ ಕಾಣುವ “ಲಿಂಕ್ ಆಧಾರ್/link aadhar” ಮೇಲೆ ಕ್ಲಿಕ್ ಮಾಡಿ ಕೆಳಗೆ ಕಾಣುವ ನಿಮ್ಮ ಸರ್ವೆ ನಂಬರ್ ಒಂದೊಂದೆ ಟಿಕ್ ಮಾಡಿಕೊಂಡು ಅದರ ಮುಂದೆ ಕಾಣುವ “link”ಮೇಲೆ ಕ್ಲಿಕ್ ಮಾಡಬೇಕು. ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಯನ್ನು ನಮೂದಿಸಿ “Verify OTP” ಮೇಲೆ ಕ್ಲಿಕ್ ಮಾಡಬೇಕು ಆಗ “ಪಹಣಿಯೊಂದಿಗೆ ನಿಮ್ಮ ಆಧಾರ್ ನ್ನು ಲಿಂಕ್ ಮಾಡಲು ನೀವು ಬಯಸುವಿರಾ?/DO you want to link your aadhar with the RTC?” ಎಂದು ತೋರಿಸುತ್ತದೆ. ಅದಕ್ಕೆ ಹೌದು/YES ಎಂದು ಕ್ಲಿಕ್ ಮಾಡಿದರೆ ನಿಮ್ಮ RTCಯನ್ನು ಆಧಾರನೊಂದಿಗೆ ಲಿಂಕ್ ಮಾಡಲಾಗಿದೆ/your RTC is linked with the aadhar ಎನ್ನುವ ಸಂದೇಶ ಬರುತ್ತದೆ.

ಇದೇ ರೀತಿ ಒಂದೊಂದು ಸರ್ವೆ ನಂಬರನ್ನು ಟಿಕ್ ಮಾಡಿಕೊಂಡು OTP ಪಡೆದು RTC ಗೆ ಆಧಾರ್ ಲಿಂಕ್ ಮಾಡಬೇಕು.

ಪಹಣಿ/RTC ಗೆ ಆಧಾರ ಜೋಡಣೆ ಲಿಂಕ್ Click here….

ಇತ್ತೀಚಿನ ಸುದ್ದಿಗಳು

Related Articles