ಕರ್ನಾಟಕ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಕಲಿ-ಅಕ್ರಮ ದಾಖಲೆಗಳಿಂದ ಬಿಪಿಎಲ್ ಕಾರ್ಡ್ (BPL card cancelled) ಪಡೆದುಕೊಂಡವರನ್ನು ಗುರುತಿಸಿ ಕಾರ್ಡಗಳನ್ನು ರದ್ದು ಪಡಿಸುವ ಕಾರ್ಯ ಚುರುಕುಗೊಳಿಸಲಾಗಿದೆ. ರಾಜ್ಯದಲ್ಲಿ 14 ಲಕ್ಷ ಅಕ್ರಮ ಕಾರ್ಡ್ ದಾರರನ್ನು ಪತ್ತೆ ಹಚ್ಚಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಕಲಿ-ಅಕ್ರಮ ಬಿಪಿಎಲ್ ಕಾರ್ಡ್ (BPL card cancelled) ಹೊಂದಿರುವವರು ಹೆಚ್ಚಾಗಿದ್ದಾರೆ. ಇನ್ನೂ ಯಾವೆಲ್ಲ ನಿಯಮಗಳನ್ನು ಮೀರಿದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ? ಆಹಾರ ಇಲಾಖೆಯಿಂದ ತಿಳಿಸಲಾದ ನಿಯಮಗಳು ಏನು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಒಟ್ಟು 14 ಲಕ್ಷ ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದ್ದು ಸರಕಾರಿ ನೌಕರಿಯಲ್ಲಿರುವವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು ಸಹ ಬಿಪಿಎಲ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.
ಇದನ್ನೂ ಓದಿ:ಹಸು ಸಾಕಾಣಿಕೆ ರೈತರಿಗೆ ಸಿಹಿ ಶುದ್ಧಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
BPL card suspension reasons- ಈ ನಿಯಮ ಮೀರಿದ ಬಿಪಿಎಲ್ ಕಾರ್ಡ್ ಹೊಂದಿದ್ದರೆ ರದ್ದಾಗಲಿದೆ.
1)ಹಿಂದಿನ ವರ್ಷ ಆದಾಯ ತೆರಿಗೆ ಪಾವತಿ ಮಾಡಿದ್ದರೆ ಅಂತಹ ಕಾರ್ಡುಗಳನ್ನು ಅಮಾನತು ಮಾಡಲಾಗುತ್ತದೆ.
2)ಕಾರ್ಡ ಹೊಂದಿರುವ ಸದಸ್ಯರು ಸರಕಾರಿ ಉದ್ಯೋಗದಲ್ಲಿದ್ದರೆ ಅಂತಹ ಕಾರ್ಡುಗಳನ್ನು ಅಮಾನತು ಮಾಡಲಾಗುತ್ತದೆ.
3)ಕಳೆದ ಆರು ತಿಂಗಳಿಂದ ನ್ಯಾಯ ಬೆಲೆ ಅಂಗಡಿಯನ್ನು ಭೇಟಿ ಮಾಡದೆ ಪ್ರತಿ ತಿಂಗಳು ಈ ಕಾರ್ಡುದಾರರಿಗೆ ನೀಡುವ ಆಹಾರ ಧಾನ್ಯಗಳನ್ನು ಪಡೆಯದೇ ಇದ್ದಲ್ಲಿ ಅಂತಹ ಬಿಪಿಎಲ್ ಕಾರ್ಡಗಳನ್ನು ಸಹ ಅಮಾನತಿನಲ್ಲಿಡುವ ಕ್ರಮವನ್ನು ಇಲಾಖೆಯಿಂದ ಕೈಗೊಳ್ಳಲಿದ್ದು ಅರ್ಹ ಗ್ರಾಹಕರು ಅಗತ್ಯ ದಾಖಲೆಗಳನ್ನು ಪುನಃ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಅಮಾನತನ್ನು ರದ್ದುಪಡಿಸಿಕೊಳ್ಳುವ ವ್ಯವಸ್ಥೆ ಇಲಾಖೆಯಲ್ಲಿ ಮಾಡಲಾಗಿದೆ.
4)ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವ ಮಾಹಿತಿಯ ಪ್ರಕಾರ ಪರೀಶಿಲನಾ ಪಟ್ಟಿಯಲ್ಲಿ ಸೇರಿರುವ ಬಿಪಿಎಲ್ ಕಾರ್ಡದಾರರು ನಿಮ್ಮ ತಾಲೂಕಿನ ಆಹಾರ ಇಲಾಖೆಯನ್ನು ಭೇಟಿ ಮಾಡಿ ಪುನಃ ಆದಾಯ ದೃಡೀಕರಣ ಪ್ರಮಾಣ ಪತ್ರವನ್ನು ನೀಡಿ ಪಟ್ಟಿಯಿಂದ ಹೆಸರನ್ನು ತೆಗೆಸಿಕೊಳ್ಳಬಹುದು.
BPL card suspension-ಬಿಪಿಎಲ್ ಕಾರ್ಡ ಪಡೆದ ಅನರ್ಹರು ಯಾರು?
1)ಆದಾಯ ತೆರಿಗೆ ಪಾವತಿಸುವವರು.
2)ಸರಕಾರಿ ಮತ್ತು ಅರೆ ಸರಕಾರಿ ಕಛೇರಿಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಕಾರ್ಡ ಪಡೆಯಲು ಅನರ್ಹರು.
3)ಸ್ವಂತ ಮನೆಯನ್ನು ಕಟ್ಟಿಸಿ ಆ ಮನೆಗಳನ್ನು ಬಾಡಿಗೆಗೆ ನೀಡಿರುವವರು.
4)7.5 ಹೆಕ್ಟೇರ್ ಗಿಂತ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ ಪಡೆಯಲು ಅರ್ಹರಲ್ಲ ಎಂದು ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
BPL card suspension list- ರೇಷನ್ ಕಾರ್ಡ್ ರದ್ದಾದ ಪಟ್ಟಿ ನೋಡುವ ವಿಧಾನ.
ಆಹಾರ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಹುಡುಕಿ ರದ್ದು ಪಡಿಸುವ ಕಾರ್ಯ ನಡೆದಿದ್ದು ಅಂತಹ ಅನರ್ಹ ಪಟ್ಟಿಯನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದು.
ವಿಧಾನ-1:ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಲಿಂಕ್ (Ration card cancelled list) ಮೂಲಕ ಪ್ರವೇಶ ಮಾಡಬೇಕು.
ವಿಧಾನ-2:ನಂತರ ಅದರಲ್ಲಿ ಇ-ರೇಷನ್ ಕಾರ್ಡ(E-ration card) ನಲ್ಲಿ show cancelled/suspended list ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3:ಅದಾದಮೇಲೆ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಬೇಕು ನಂತರ go ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ತಾಲೂಕಿನಲ್ಲಿ ಆ ತಿಂಗಳಿನಲ್ಲಿ
ರದ್ದಾದ ಎಲ್ಲಾ ರೇಷನ್ ಕಾರ್ಡ ದಾರರ ಪಟ್ಟಿ ಬರುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ ಉಂಟೆ ಚೆಕ್ ಮಾಡಿಕೊಳ್ಳಿ.
ಇದರ ಹೆಚ್ಚಿನ ಮಾಹಿತಿಗೆ ಕಂದಾಯ ಇಲಾಖೆ ಅಥವಾ ತಾಲೂಕು ಆಹಾರ ನಿರೀಕ್ಷಕರ (food inspecter) ಕಛೇರಿಯನ್ನು ಭೇಟಿ ಮಾಡಿ ವಿಚಾರಿಸಿ.