Thursday, November 21, 2024

Ration card download : ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :

ಆತ್ಮೀಯ ಸ್ನೇಹಿತರೇ ನಿಮ್ಮ ರೇಷನ್ ಕಾರ್ಡ ಕಳೆದುಕೊಂಡಿದ್ದರೆ ಈ ರೀತಿ ಮಾಡಿ ಹೌದು, ರೇಷನ್ ಕಾರ್ಡ ಕಳೆದ ಹೋದರೆ ಅಥವಾ ಮನೆಯಿಂದ ಸರಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ರೇಷನ್ ಕಾರ್ಡ ಮರೆತು ಬಿಟ್ಟು ಹೋಗಿರುವಾಗ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಅನ್ನು ಡೌನ್ಹೋಡ್ ಮಾಡಿಕೊಳ್ಳಬವುದು ಹೇಗೆ?ಎಂದುಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ಹತ್ತಿರದವರಿಗೂ ಹಾಗೂ ಅಪ್ತರಿಗೂ ಕಳುಹಿಸಿ.

ನಮ್ಮ ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಹಿಂದುಳಿದ ವರ್ಗದ ಜನರಿಗೆ ಅಹಾರ ಧಾನ್ಯ ವಿತರಣೆ ಮತ್ತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಪಡಿತರ ಚೀಟಿ/ರೇಷನ್ ಕಾರ್ಡಗಳ ಬಹಳ ಅವಶ್ಯಕ ದಾಖಲೆಗಳಲ್ಲಿ ಇದು ಕೂಡಾ ಒಂದು ಹಾಗಾಗಿ ಈ ಕಾರ್ಡನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಿಸಲಾಗುತ್ತದೆ. ಇಲ್ಲಿಯವರೆಗೆ 1,52,03,471 ಕುಟುಂಬಗಳಿಗೆ ರೇಷನ್ ಕಾರ್ಡ ಅನ್ನು ವಿತರಣೆ ಮಾಡಲಾಗಿರುತ್ತದೆ.

ಅನ್ನಭಾಗ್ಯ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೊಜನೆಗಳಗೆ ಸಂಬಂಧಿಸಿದ ಮಾಹಿತಿ:

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: ( Gruhajhyoti Yojane ) ಗ್ರಾಹಕರು ಸೆಪ್ಟಂಬರ್‍ ತಿಂಗಳ ಉಚಿತ ಬಿಲ್ ಪಡೆಯಲು ‌ಆಗಸ್ಟ ಈ ತಾರೀಖುನೊಳಗೆ ಈ ಕೆಲಸ ಮಾಡಿ:

ಇದನ್ನೂ ಓದಿ: ಗೃಹಲಕ್ಮೀ ಮತ್ತು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಆಹಾರ ಇಲಾಖೆ ಅತೀ ಅವಶ್ಯಕ ಮಾಹಿತಿ ಪ್ರಕಟಣೆ:

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯ ಗೊಂದಲ ಇದೆಯೇ? ಅರ್ಹರು ಯಾರು? ಯಾವಾಗ ಅರ್ಜಿ ಸಲ್ಲಿಕೆ? ಸರ್ಕಾರದ ನಿಯಮಗಳೇನು ? ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ …

How to Download ration card- ಮೊಬೈಲ್ ನಲ್ಲಿ ರೇಷನ್ ಕಾರ್ಡ ಡೌನ್ ಲೋಡ್ ಮಾಡುವ ಪ್ರಕ್ರಿಯೆ:

ಹಂತ 1: ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣದ ಈ https://ahara.kar.nic.in/lpg/ ಲಿಂಕ್ ಮೇಲೆ ಓತ್ತಿ ನಂತರ ಇಲ್ಲಿ ಒಟ್ಟು ಮೂರು ವಿಭಾಗಕ್ಕೆ ಸಂಬಂಧಪಟ್ಟ 3 ಲಿಂಕ್ ಗಳು ಗೋಚರಿಸುತ್ತದೆ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.ನಂತರ

1) BENGALURU(URBAN/RURAL/CITY) districts only):- ಈ ಜಿಲ್ಲೆಗೆ ಸಂಬಂಧಿಸಿದವರೂ ಈ ಲಿಂಕ್ ಮೇಲೆ ಓತ್ತಿ ರೇಷನ್ ಕಾರ್ಡ ಡೌನ್ ಲೋಡ್ ಮಾಡಿಕೊಳ್ಳಿ.
https://ahara.kar.nic.in/status1/

2) Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only:- ಈ ಜಿಲ್ಲೆಗೆ ಸಂಬಂಧಿಸಿದವರೂ ಈ ಲಿಂಕ್ ಮೇಲೆ ಓತ್ತಿ ರೇಷನ್ ಕಾರ್ಡ ಡೌನ್ ಲೋಡ್ ಮಾಡಿಕೊಳ್ಳಿ.https://ahara.kar.nic.in/status3/

3) Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only:- https://ahara.kar.nic.in/status2/ ಈ ಜಿಲ್ಲೆಗೆ ಸಂಬಂಧಿಸಿದವರೂ ಈ ಲಿಂಕ್ ಮೇಲೆ ಓತ್ತಿ ರೇಷನ್ ಕಾರ್ಡ ಡೌನ್ ಲೋಡ್ ಮಾಡಿಕೊಳ್ಳಿ.

ಹಂತ -2: ಈ ಪುಟದಲ್ಲಿ “ಪಡಿತರ ಚೀಟಿ ವಿವರ/Status of ration card” ಆಯ್ಕೆಯ ಮೇಲೆ ಓತ್ತಿ select verification type: ಗೋಚರಿಸುವ ಆಯ್ಕೆಯ ಮೇಲೆ ಓತ್ತಿ ನಂತರ
“With OTP ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ ನಂಬರ್ ನಮೂದಿಸಿ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ಬಳಿಕ “Member’s Names / ಸದಸ್ಯರು ಹೆಸರು” ಎಂದು ಹೊಸ ಆಯ್ಕೆ ಗೋಚರಿಸುತ್ತದೆ ಇಲ್ಲಿ ಸದಸ್ಯರ ಹೆಸರನ್ನು ಆಯ್ಕೆ ಮಾಡಿಕೊಂಡು “GO” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಯ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಮತ್ತೆ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ -3: ಈ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡನ ಸಂಪೂರ್ಣ ವಿವರ ತೋರಿಸುತ್ತದೆ ಒಟ್ಟು ಎಷ್ಟು ಜನ ಸದಸ್ಯರಿದಿರಿ? ಅವರ ಹೆಸರು ಇ-ಕೆವೈಸಿ ಸ್ಥಿತಿ ಇತ್ಯಾದಿ ಮಾಹಿತಿ ಗೋಚರಿಸುತ್ತದೆ. ಇದೆ ಪುಟದಲ್ಲಿ ಬಲ ಭಾಗದ ಕೆಳಗೆ ಕಾಣುವ “View RC Details /ಪ.ಚೀಟಿ ವೀಕ್ಷಣೆ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ Duplicate Copy Download ಮಾಡಿಕೊಳ್ಳಬಹುದಾಗಿರುತ್ತದೆ.

ವಿಶೇಷ ಸೂಚನೆ: ಈ ರೇಷನ್ ಕಾರ್ಡ ಕೇವಲ ಮಾಹಿತಿಗಾಗಿ ಉಪಯೋಗಿಸಬವುದಾಗಿದ್ದು ಇದು ಅಧಿಕೃತವಲ್ಲಅಧಿಕೃತ ರೇಷನ್ ಕಾರ್ಡ ಅನ್ನು ನಿಮ್ಮ ತಾಲ್ಲೂಕಿನ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡೆಯಬೇಕು,
ಈ ಜಾಲತಾಣದ ಕಾರ್ಯನಿರ್ವಹಣೆ ಸಮಯ: ಬೆಳಿಗ್ಗೆ 8-00 ರಿಂದ ರಾತ್ರಿ 8-00 ರವರೆಗೆ ಮಾತ್ರ ಒಪನ್ ಆಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles