Friday, January 24, 2025

Ration card correction-ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಲು ಜನವರಿ 31 ರವರೆಗೆ ಅವಕಾಶ ಮುಂದೂಡಲಾಗಿದೆ!

ನಮಸ್ಕಾರ ರೈತರೇ ಭಾಂದವರೆ ಪಡಿತರ ಚೀಟಿ/ರೇಷನ್ ಕಾರ್ಡ ನಲ್ಲಿ ತಪ್ಪಾಗಿ ದಾಖಲಾಗಿರುವ ಮಾಹಿತಿಯನ್ನು ಅಥವಾ ವಿಳಾಸ ಮತ್ತು ಸದಸ್ಯರ ವಿವರವನ್ನು ತಿದ್ದುಪಡಿ(Ration card tiddupadi)/ಬದಲಾವಣೆ ಮಾಡಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 31 ರವರೆಗೆ ಸಾರ್ವಜನಿಕರಿಗೆ ಅವಕಾಶ ಮುಂದೂಡಲಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಪ್ರತಿ ತಿಂಗಳು ಉಚಿತವಾಗಿ ಆಹಾರ ಧಾನ್ಯಗಳಾದ ಅಕ್ಕಿ, ರಾಗಿ,ಬೆಳೆ,ಜೋಳ ಇತರರೆ ಉತ್ಪನ್ನಗಳನ್ನು ನ್ಯಾಯಬೆಲೆ ಅಂಗಡಿಗಳಿಂದ(Ration card correction) ಪಡೆಯಲು ಗ್ರಾಹಕರ ವಿವರವು ರೇಷನ್ ಕಾರ್ಡ/ಪಡಿತರ ಚೀಟಿಯಲ್ಲಿ ಸರಿಯಾಗಿ ದಾಖಲಾಗಿರುವುದು ಕಡ್ಡಾಯವಾಗಿರುತ್ತದೆ. ಆದರೆ ತಪ್ಪಾದ ವಿವರ ಹೊಂದಿರುವ ಸಾರ್ವಜನಿಕರು ತಮ್ಮ ವಿವರವನ್ನು ಸರಿಪಡಿಸಿಕೊಳ್ಳಲು ಇಲಾಖೆಯಿಂದ ಮತ್ತೊಮ್ಮೆಅವಕಾಶ ನೀಡಲಾಗಿದೆ.

ಪಡಿತರ ಚೀಟಿ ತಿದ್ದುಪಡಿಗೆ ಎಲ್ಲಿ ಅರ್ಜಿ(Ration card correction application) ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಎಷ್ಟು ದಿನ ಕಾಲಾವಕಾಶ ನೀಡಲಾಗಿದೆ? ಇತ್ಯಾದಿ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಜಾನುವಾರು, ಕುಕ್ಕಟ ಮತ್ತು ಮ್ಸ್ಯಮೇಳ, ಬೀದರ!

How to apply for ration card correction-ರೇಷನ್ ಕಾರ್ಡ ತಿದ್ದುಪಡಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರವಿರುವ ಗ್ರಾಮ ಒನ್ ಕೇಂದ್ರವನ್ನು ಬೆಳಿಗ್ಗೆ 10-00 ಯಿಂದ ಸಂಜೆ 5-00 ಗಂಟೆಯವರೆಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.ಅರ್ಹ ಅರ್ಜಿದಾರರು ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು 31 ಜನವರಿ 2025 ಕೊನೆಯ ದಿನಾಂಕವಾಗಿರುತ್ತದೆ.

Required Documents for ration card correction application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
(2) ರೇಷನ್ ಕಾರ್ಡ ಪ್ರತಿ
(3) ಖುದ್ದು ರೇಶನ್ ಕಾರ್ಡ ಸದಸ್ಯರು ಹಾಜರು ಇರಬೇಕು
(4) ಮೊಬೈಲ್ ನಂಬರ್

ಇದನ್ನೂ ಓದಿ:2024ರ ಮುಂಗಾರು ಬೆಳೆ ಸಮೀಕ್ಷೆ ವರದಿ ಪಹಣಿಗೆ ದಾಖಲಿಸಲಾಗಿದೆ! ಚೆಕ್ ಮಾಡಿಕೊಳ್ಳಿ.

Ration card tiddupadi application-ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?

(1)ರೇಷನ್ ಕಾರ್ಡಗೆ ಹೊಸ ಸದಸ್ಯರ ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.

(2) ಹೆಸರು ತೆಗೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
(3) ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
(4) ನ್ಯಾಯಬೆಲೆ ಅಂಗಡಿ ಬದಲಾವಣೆಗೂ ಸಹ ಅರ್ಜಿ ಸಲ್ಲಿಸಬಹುದು.
(5) ರೇಷನ್ ಕಾರ್ಡ ಇ-ಕೆವೈಸಿ ಮಾಡಲು ಸಹ ಅವಕಾಶ ನೀಡಲಾಗಿದೆ. (6)ಹೆಸರು ತಿದ್ದುಪಡಿ

ಇತ್ತೀಚಿನ ಸುದ್ದಿಗಳು

Related Articles