ರೈತರ ಮಕ್ಕಳು ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸಲು ಮಾನ್ಯ ಮುಖ್ಯ ಮಂತ್ರಿಗಳು “ಮುಖ್ಯ ಮಂತ್ರಿ ರೈತ ವಿದ್ಯಾ ನಿಧಿ” ಕಾರ್ಯಕ್ರಮವನ್ನು ಘೋಷಣೆ ಮಾಡಿರುತ್ತಾರೆ. ಈ ಕಾರ್ಯಕ್ರಮದಡಿ 8,9 ಮತ್ತು ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್.ಎಸ್.ಎಲ್.ಸಿ. 10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಗಿರುವ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾ ನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುತ್ತಾರೆ. ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benifit Transfer-DBT)ಪದ್ದತಿಯಮೂಲಕ ವರ್ಗಾಯಿಸಲಾಗುವುದು.
ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಕರ್ನಾಟಕ ಓನ್ ತೆರೆಯಲು ಅವಕಾಶ? ಯಾವ ಜಿಲ್ಲೆ? ಅರ್ಹತೆ ಏನು? ಎಷ್ಟು ಕೇಂದ್ರ ತೆರೆಯಲು ಅವಕಾಶ?
2022-23ನೇ ಶೈಕ್ಷಣಿಕ ಸಾಲಿನಿಂದ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಲಾಗಿದೆ.
“ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಕಾರ್ಯಕ್ರಮದಡಿ ನೀಡಲಾಗುವ ವಿದ್ಯಾರ್ಥಿ ವೇತನ ವಿವರ:
ಯೋಜನೆಯಡಿ ನೀಡಲಾಗುವ ವಾರ್ಷಿಕ ಶಿಷ್ಯವೇತನ
ಕ್ರ.ಸಂ ಕೋರ್ಸಗಳು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು
1.ಪ್ರೌಢಶಾಲಾ ವಿದ್ಯಾರ್ಥಿನಿಯರು – ಇಲ್ಲ ರೂ.2,000/-
2.ಪಿ.ಯು.ಸಿ./ಐ.ಟಿ.ಐ /ಡಿಪ್ಲೋಮಾ – ರೂ.2,500/ ರೂ.3,000/-
3.ಬಿ.ಎ/ಬಿ.ಎಸ್.ಸಿ./ಬಿ.ಕಾಂ ಇನ್ನಿತರೆ ಪದವಿ ಕೋರ್ಸಗಳು – ರೂ.5,000/- ರೂ.5,500/-
4.ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ಬಿ.ಫಾರ್ಮ/ನರ್ಸಿಂಗ್ – ರೂ.7,500/- ರೂ.8,000/-
ಇನ್ನಿತರೆ ವೃತ್ತಿಪರ ಕೋರ್ಸಗಳು
5.ಎಂ.ಬಿ.ಬಿ.ಎಸ್./ಬಿ.ಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ -ರೂ.10,000/- ರೂ.11,000/-
ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ
ವಿ.ಸೂ.: ಪುನರಾವರ್ತಿತ ವಿದ್ಯಾರ್ಥಿಗಳು(Repeaters) ಅರ್ಹರಾಗಿರುವುದಿಲ್ಲ.
ಕ್ರ.ಸಂ | ರೈತರ ಮಕ್ಕಳ ವಿದ್ಯಾರ್ಥಿವೇತನ | ಭೂರಹಿತ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ |
1 | ತಂದೆ/ತಾಯಿ/ಕುಟುಂಬ ಸದಸ್ಯರು 1.ತಂದೆ ಅಥವಾ ತಾಯಿ Fruits (Farmer Registration and Fruits (Farmer Registration and Unified Beneficiary Information System)ತಂತ್ರಾಂಶದಲ್ಲಿ Unified Beneficiary Information ನೋಂದಣಿಯಾಗಿರಬೇಕು(WithLand) System)ತಂತ್ರಾಂಶದಲ್ಲಿ | ತಂದೆ ಅಥವಾ ತಾಯಿ Fruits (Farmer Registration and Fruits (Farmer Registration and Unified Beneficiary Information System)ತಂತ್ರಾಂಶದಲ್ಲಿ Unified Beneficiary Information ನೋಂದಣಿಯಾಗಿರಬೇಕು(WithoutLand) |
2 | 2.ಕುಟುಂಬದ ಗುರುತಿನ ಸಂಖ್ಯೆ ಹೊಂದಿರಬೇಕು | 2. ಕುಟುಂಬದ ಗುರುತಿನ ಸಂಖ್ಯೆ ಹೊಂದಿರಬೇಕು. ತಂದೆ ಅಥವಾ ತಾಯಿ MGNREGA ಕಾರ್ಡ ಹೊಂದಿರಬೇಕು. |
“ಎಲ್ಲಾ ರೈತ ಮಕ್ಕಳ ಹಾಗು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳುರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ವಿನಂತಿಸಿದೆ.
(https://ssp.postmatric.karnataka.gov.in)
ಹೆಚ್ಚಿನ ಮಾಹಿತಿಗಾಗಿ ರೈತ ಸಹಾಯವಾಣಿ 1800 425 3553 ಅಥವಾ ಸಹಾಯವಾಣಿ 1902ಗೆ ಕರೆಮಾಡಿ