Thursday, September 19, 2024

Raita vidya nidhi-2024 ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸಂಭಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟಣೆ: ಕೃಷಿ ಇಲಾಖೆ .

2023-24 ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ(raita vidya nidhi application) ಕಾರ್ಯಕ್ರಮ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೋಷಕರ ಆದಾಯವು ರೂ. 2.50 ಲಕ್ಷ ಮೀರಿರಬಾರದು ಎಂಬ ಷರತ್ತನ್ನು ವಿಧಿಸಿರುವುದರಿಂದ,ಸಾಮಾನ್ಯ ವರ್ಗದಡಿ ಬರುವ ರೈತರ ಮಕ್ಕಳು ತಮ್ಮ ಪೋಷಕರ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್‌ಎಸ್‌ಪಿ) ರವರಿಗೆ 29 ಫೆಬ್ರವರಿ 2024 ರೊಳಗೆ ಸಲ್ಲಿಸಬೇಕೆಂದು ಕೃಷಿ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ನಿಯಮಗಳು ಹೀಗಿವೆ:

ಹೊಸ ಆದೇಶದ್ವಯ ಯಾವುದೇ ವಿದ್ಯಾರ್ಥಿ ವೇತನ ಪಡೆದರೂ ರೈತ ವಿದ್ಯಾನಿಧಿಗೆ ಅರ್ಹರು.

ರೈತರ ಮಕ್ಕಳು ಮತ್ತು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು ಈ ಯೋಜನೆಯಡಿ ವಿಧ್ಯಾರ್ಥಿ ವೇತನ ಪಡೆಯಬಹುದು.

ಕುಟುಂಬದ ಎಲ್ಲಾ ಮಕ್ಕಳು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿಧ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಸದರಿ ಉದ್ದೇಶಕ್ಕೆ ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಾಹಿಸುತ್ತಿರುವ “ಕುಟುಂಬ”(Kutumba-https://kutumba.karnataka.gov.in/kn/Index) ತಂತ್ರಾಶದಲ್ಲಿ ದಾಖಲಾಗಿರುವ ಸದಸ್ಯರು.

Raita vidya nidhi- ರೈತ ವಿಧ್ಯಾ ನಿಧಿ ಯೋಜನೆಯಡಿ ವಿಧ್ಯಾರ್ಥಿ ವೇತನ ಪಡೆಯುವುದು ಹೇಗೆ?

ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಮತ್ತು ಶಾಲೆ ತೊರೆಯುವುದನ್ನು ತಡೆಗಟ್ಟಲು “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯಡಿ ಸುಮಾರು 17 ಲಕ್ಷಕ್ಕೂ ಅಧಿಕ ರೈತರ ಮಕ್ಕಳಿಗೆ ವಾರ್ಷಿಕ ರೂ 2,000 ದಿಂದ ರೂ 11,000 ದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಈ ಯೋಜನೆಯಡಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯುವುದು ಹೇಗೆ? ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ? ಯಾರೆಲ್ಲ ಅರ್ಜಿ ಸಲ್ಲಿಸಬವುದು ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

“ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿದ್ಯಾರ್ಥಿವೇತನದ ವಿವರ:

ವಿದ್ಯಾರ್ಥಿವೇತನಕ್ಕೆ 8,9,10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ರೂ 2,000. ನೀಡಲಾಗುವುದು.

ಪಿಯುಸಿ/ಐಟಿಐ/ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ 2,500 ವಿದ್ಯಾರ್ಥಿನಿಯರಿಗೆ ರೂ 3,000. ನೀಡಲಾಗುವುದು.

ಬಿ.ಎ/ಬಿ.ಎಸ್.ಸಿ/ಬಿ.ಕಾಂ ಇನ್ನತರೆ ಪದವಿ ವಿದ್ಯಾರ್ಥಿಗಳಿಗೆ ರೂ 5,000 ವಿದ್ಯಾರ್ಥಿನಿಯರಿಗೆ ರೂ 5,500. ನೀಡಲಾಗುವುದು.

ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ಬಿ.ಫಾರ್ಮ್/ನರ್ಸಿಂಗ್ ಇನ್ನಿತರೆ ವೃತಿಪರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 7,500 ವಿದ್ಯಾರ್ಥಿನಿಯರಿಗೆ ರೂ 8,000. ನೀಡಲಾಗುವುದು.

ಎಂ.ಬಿಬಿ.ಎಸ್/ಬಿ.ಇ/ಬಿ.ಟೆಕ್/ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 10,000 ವಿದ್ಯಾರ್ಥಿನಿಯರಿಗೆ ರೂ 11,000. ನೀಡಲಾಗುವುದು.

ಇದನ್ನೂ ಓದಿ: PMKSY-OI Scheme: PVC Pipe ಮತ್ತು Diesel pumpset – ಶೇ. 50 ರ ಸಹಾಯಧನದಲ್ಲಿ ವಿತರಣೆ:

Raita vidya nidhi application-ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ತಮ್ಮ ತಂದೆ/ತಾಯಿ ಅಥವಾ ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರು ಪ್ರೂಟ್ಸ್(Fruits-https://fruits.karnataka.gov.in/) ತಂತ್ರಾಂಶದಲ್ಲಿ ನೊಂದಣಿಯಾಗಿ FID ಸಂಖ್ಯೆಯನ್ನು ಹೊಂದಿರಬೇಕು ಜೊತೆಗೆ ಪಡಿತರ ಚೀಟಿ ವಿತರಿಸುವ ಕುಟುಂಬ ರ್ಪೋಟಲ್(Kutumba-https://kutumba.karnataka.gov.in/kn/Index) ನಲ್ಲಿ ನೊಂದಣಿಕೊಂಡು ರಾಜ್ಯ ವಿದ್ಯಾರ್ಥಿ ವೇತನ(SSP Portal- https://ssp.postmatric.karnataka.gov.in/) ತಂತ್ರಾಂಶದಲ್ಲಿ ವಿದ್ಯಾರ್ಥಿಗಳು ನೊಂದಣಿಯಾಗಿರಬೇಕು.

ಭೂರಹಿತ ಕೃಷಿ ಕಾರ್ಮಿಕರು ತಂದೆ ಅಥವಾ ತಾಯಿ ಪ್ರೂಟ್ಸ್(Fruits-https://fruits.karnataka.gov.in/) ತಂತ್ರಾಂಶದಲ್ಲಿ ನೊಂದಣಿಯಾಗಿರಬೇಕು ಮತ್ತು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರಬೇಕು.

ಈ ಯೋಜನೆಯಡಿ ವಿಧ್ಯಾರ್ಥಿ ವೇತನ ಪಡೆಯಲು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ರಾಜ್ಯ ವಿದ್ಯಾರ್ಥಿ ವೇತನ(SSP Portal) ತಂತ್ರಾಂಶ ಹಾಗೂ ಕೃಷಿ ಇಲಾಖೆಯಲ್ಲಿ ರೈತರು ನೋಂದಾವಣೆಯಾಗಿರುವ ಪ್ರೂಟ್ಸ್(Fruits) ತಂತ್ರಾಂಶ ಮತ್ತು ಪಡಿತರ ಚೀಟಿ ವಿತರಿಸುವ ಕುಟುಂಬ ರ್ಪೋಟಲ್ ಈ ಮೂರು ತಂತ್ರಾಂಶಗಳ ದತ್ತಾಂಶದ ಸಂಗ್ರಹಿಸಿ ಅರ್ಹ ಪಲಾನುಭಾವಿಗಳಿಗೆ ನೇರವಾಗಿ ತಮ್ಮ ಖಾತೆಗೆ ಹಣ ವರ್ಗವಾಣೆ ಮಾಡಲಾಗುತ್ತದೆ.

ಇದನ್ನೂ ಓದಿ: Horticulture Crop Parihara: ತೋಟಗಾರಿಕೆ ಬೆಳೆಗಳಿಗೆ ಹಾಗೂ ವಿವಿಧ ಬೆಳೆಗಳಿಗೆ ಪರಿಹಾರದ ವಿವರ:

ಇನ್ನು ಹೆಚ್ಚಿನ ಮಾಹಿತಿ ಅವಶ್ಯಕವಿದಲ್ಲಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ. ಸಹಾಯವಾಣಿ ಸಂಖ್ಯೆ: 1800 425 3553 ಅಥವಾ 1902 ಗೆ ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles