Sunday, October 6, 2024

Rain forecast-ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಆಗಮನ ಎಂದು ಹವಮಾನ ಇಲಾಖೆ ತಿಳಿಸಿದೆ. ಮಳೆಯ ಮಾಹಿತಿ ತಿಳಿಯಲು ಈ APP ಬಳಸಿ.

ಕರ್ನಾಟಕ ರಾಜ್ಯಕ್ಕೆ ಕಳೆದ ವರ್ಷ 2023 ರ ಮುಂಗಾರು ಮಳೆಯ ಕೊರತೆ ಉಂಟಾಗಿ ಬರಗಾಲ ಎದುರಾಗಿತ್ತು. ಮಳೆಯಿಲ್ಲದೆ ಕುಡಿಯುವ ನೀರಿಗು ಬರ ಎದುರಾಗಿತ್ತು. ಈ ಬಾರಿ ಭಾರತೀಯ ಹವಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.

ಈ ಬಾರಿ ಮುಂಗಾರು ಮಳೆ ಉತ್ತಮವಾಗಲಿದ್ದು, ಹೆಚ್ಚಿನ ಮಳೆ ಬೀಳುವ ಮುನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆ ನೀಡಿದೆ. ಈ ಬಾರಿ ಮಳೆಗಾಲದಲ್ಲಿ ಶೇ. 106 ರಷ್ಟು ಮಳೆ ಬರಲಿದೆ ಎಂದು ಐ ಎಂ ಡಿ ಮುನ್ಸೂಚನೆ ನೀಡಿದ್ದು, ಅನ್ನದಾತರ( ರೈತರ) ಮುಖದಲ್ಲಿ ಸಂತಸ ಮೂಡಿದೆ.

2024ರ ನೈರುತ್ಯ ಮಾನ್ಸೂನ್‌ ಅವಧಿಯಲ್ಲಿ ( ಜೂನ್‌ ನಿಂದ ಸಪ್ಟಂಬರ್)‌ ಇಡೀ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಸುರಿಯಲಿದೆ. ಈ ಬಾರಿಯ ಮಳೆ ರೈತರಿಗೆ ವರದಾನವಾಗಿ ಹೆಚ್ಚು ಮಳೆಯಿಂದಾಗಿ ರೈತರಿಗೆಬಿತ್ತನೆ ಮಾಡಲು ಅನುಕೂಲವಾಗಲಿದೆ.

ಭಾರತೀಯ ಕೃಷಿಯು “ಮುಂಗಾರು ಜೊತೆಗಿನ ಜೂಜು” ಎಂದು ಮೊದಲಿನಿಂದಲೂ ಹೇಳಲಾಗಿದೆ. ಏಕೆಂದರೆ ಆರ್ಥೀಕತೆಯು ಮುಖ್ಯವಅಗಿ ಕೃಷಿಉ ಮೇಲೆ ಅವಲಂಬಿತವಾಗಿದೆ. ಮತ್ತು ಭಾರತೀಯ ರೈತರ ಜೀವನೋಪಾಯವು ಹೆಚ್ಚಾಗಿ ಮಾನ್ಸೂನ್‌ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ: ಕೃಷಿ ಸಾಲ ಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷದವರೆಗೆ ಸಹಾಯಧನ ಪಡೆದುಕೊಳ್ಳಬಹುದು!

ಹವಮಾನ ಬದಲಾವಣೆಯು ಮಾನವನ ಪಾಲಿಗೆ ಗಂಭೀರ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಮಳೆಬರದೇ ರೈತರಿಗೆ ಕಷ್ಟಗಳು ಎದುರಾಗುತ್ತಿವೆ. ಇದರಿಂದ ರೈತರು ಕೃಷಿಯಲ್ಲಿ ನಷ್ಟ ಹಾಗೂ ಅತೀಯಾದ ಮಳೆ ಬಂದಾಗ ಹಾನಿಯನ್ನು ಅನುಭವಿಸುತ್ತಿದ್ದಾರೆ.

ಬೆಳೆ ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಹವಮಾನವು ಪ್ರಮುಖ ಪಾತ್ರವಹಿಸುತ್ತದೆ. ಎಲ್ಲಾ ಇತರ ಭೌತಿಕ ಅಂಶಗಳು, ಒಳಹರಿವು ಮತ್ತು ಕೃಷಿ ಪದ್ಧತಿಗಳನ್ನು ಕುಶಲತೆಯಿಂದ ನಿರ್ವಹಿಸಬಹುದು, ಆದರೆ ಹವಮಾನದ ವ್ಯತ್ಯಾಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹವಮಾನಕ್ಕೆ ತಕ್ಕಂತೆ ಕೃಷಿ, ಕೃಷಿ ಚಟುವಟಿಕೆಗಳು ಬದಲಾಗಬೇಕಾಗಿದೆ.

ಹವಮಾನ ಮಾಹಿತಿಯನ್ನು ಒದಗಿಸುವುದರ ಮೂಲಕ ಬೆಳೆಗಳ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ಬಹಳಷ್ಟು ಮಟ್ಟಿಗೆ ತಗ್ಗಿಸಬಹುದು. ಹೀಗಾಗಿ ಕೃಷಿ ಕಾರ್ಯಾಚರಣೆಗಳಲ್ಲಿನ ಅಪಾಯವನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಹವಮಾನ ಮುನ್ಸೂಚನೆಯು ಪ್ರಮುಖ ಪಾತ್ರವಹಿಸುತ್ತದೆ.

ಇದನ್ನೂ ಓದಿ: ಉತ್ತಮ ಹಸುಗಳ ಆಯ್ಕೆಯಲ್ಲಿ ಗಮನಿಸಬೇಕಾದ ಅಂಶಗಳು ಮತ್ತು ಶುದ್ಧ ಹಾಲನ್ನು ಉತ್ಪಾದಿಸುವ ವಿಧಾನ.

ಮಳೆ ಮಾಹಿತಿ ತಿಳಿಯಲು ಮೇಘದೂತ(MEGHDOOT)APP ಬಳಸಿ:

1)ಮೊದಲು ಮೋಬೈಲ್‌ ನಲ್ಲಿ ಪ್ಲೇ ಸ್ಟೋರ್‌ ಗೆ ಹೋಗಿ MEGHDOOT TYPE ಮಾಡಿ.

2)APP ಬಂದ ಮೇಲೆ INSTALL ಮಾಡಿಕೊಳ್ಳಿ.

3) INSTALL ಮಾಡಿಕೊಂಡ ನಂತರ ಮುಖ ಪುಟ ತೆರೆದು ಕೊಳ್ಳುತ್ತದೆ.

4)ಹೆಸರು ನಮೂದು ಮಾಡಬೇಕು.

5)ಮೊಬೈಲ್‌ ನಂಬರ್‌ ಹಾಕಬೇಕು.

6)ಭಾಷೆ ಆಯ್ಕೆ ಮಾಡಿಕೊಳ್ಳಬೇಕು.

7)ಲಿಂಗ ಆಯ್ಕೆ ಮಾಡಬೇಕು.

8)ರಾಜ್ಯ ಆಯ್ಕೆ ಮಅಡಬೇಕು.

9)ಗ್ರಾಮ ಆಯ್ಕೆ ಮಾಡಬೇಕು.

10)ಪಂಚಾಯತ ಆಯ್ಕೆ ಮಾಡಬೇಕು.

11)ನಂತರ Terms AND Conditions ಗೆ tik ಮಾಡಿ  rigister ಕೊಡಬೇಕು.

ಮಳೆ ಮಾಹಿತಿಯ ಮೇಘದೂತ APP ಲಿಂಕ್ ಗೆ ಇಲ್ಲಿಕ್ಲಿಕ್ ಮಾಡಿ

ಇತ್ತೀಚಿನ ಸುದ್ದಿಗಳು

Related Articles