Monday, September 1, 2025

Rain and Weather Report:

Rain and Weather Report: ಗುರುವಾರದ ರಾಜ್ಯದ ಮಳೆ- ಹವಾಮಾನ ಮುನ್ಸೂಚನೆ.

ಈ ಲೇಖನದಲ್ಲಿ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮಲೆನಾಡು ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಜಿಲ್ಲೆಗಳ ಮಳೆಯ ಮತ್ತು ಹವಾಮಾನವು ಯಾವ ರೀತಿ ಇದೆ ಎಂಬುದನ್ನು ಸಂಪೂರ್ಣವಗಿ ನೀಡಲಾಗಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ನಿನ್ನೆ ಹಗಲು ಮಳೆ ಪ್ರಮಾಣ ಕಡಿಮೆ ಆಗಿದ್ದು ರಾತ್ರಿ ಸಾಧಾರಣ ಮಳೆಯಾಗಿದೆ. ಘಟ್ಟಪ್ರದೇಶಗಳ ಸಮೀಪದ ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಮಲೆನಾಡು ಸಾಧಾರಣ ಮಳೆ ಉ. ಒಳನಾಡು ಸಾಮಾನ್ಯ ಮಳೆ ಹಾಗೂ ದ. ಒಳನಾಡಿನ ಅಲ್ಲಲ್ಲಿ ತುಂತುರು ಮಳೆಯಾಗಿತ್ತು.

ಕರಾವಳಿ ಜಿಲ್ಲೆಗಳ ಮಳೆ ಮತ್ತು ಹವಮಾನ ಮಾಹಿತಿ:
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಮೋಡ- ಬಿಸಿಲಿನ ವಾತಾವರಣದ ಜೊತೆಗೆ ಆಗಾಗ ಗಾಳಿ ಮಳೆಯಾಗಬಹುದು. ರಾತ್ರಿಯೂ ಒಂದೆರಡು ಮಳೆ ಮುನ್ಸೂಚನೆ ಇದೆ. ನಾಳೆಯಿಂದ ಮಳೆ ನಡುವಿನ ಅಂತರ ಕಡಿಮೆಯಾಗಿ ಮಳೆ ಪ್ರಮಾಣ ಜಾಸ್ತಿಯಾಗುತ್ತಾ ಹೋಗಬಹುದು.

ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!

ಜುಲೈ 13ರಿಂದ 17 ತನಕ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ನಂತರವೂ ಮಳೆ ಮುಂದುವರಿಯಲಿದ್ದು ಸದ್ಯ ಪೂರ್ತಿ ಕಡಿಮೆ ಆಗುವುದಿಲ್ಲ. ಜುಲೈ 20 ತನಕ ಉತ್ತಮ ಬಿಸಿಲು ಬರುವ ಸಾಧ್ಯತೆ ಕಡಿಮಯಾಗುತ್ತಿದೆ.

ಮಲೆನಾಡು ಜಿಲ್ಲೆಗಳಲ್ಲಿ ಮಳೆ ಮತ್ತು ಹವಾಮಾನ ಮಾಹಿತಿ:
ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಆಗಾಗ ಮಳೆ ಮುಂದುವರೆಯಲಿದೆ. ಈ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದ್ದು ಒಳನಾಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪೂರ್ವದ ತಾಲ್ಲೂಕುಗಳಲ್ಲಿ ಕಡಿಮೆ ಮಳೆಯಾಗಬಹುದು.

ದಕ್ಷಿಣ ಒಳನಡು ಜಿಲ್ಲೆಗಳಲ್ಲಿ :
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತು ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ. ಬೆಂಗಳೂರು – ಗ್ರಾಮಾಂತರ ತುಮಕೂರು ಮೈಸೂರು ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ ಇದೆ. ಚಾಮರಾಜನಗರ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮಂಡ್ಯ ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಬಹುದು.

ಉತ್ತರ ಒಳನಾಡು ಜಿಲ್ಲೆಗಳಲ್ಲಿ:
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಕೊಪ್ಪಳ ರಾಯಚೂರು ಕಲ್ಬುರ್ಗಿ ಯಾದಗಿರಿ ಬೀದರ್ ಜಿಲ್ಲೆಗಳ ಅಲ್ಲಲ್ಲಿ 1-3mm ತುಂತುರು ಮಳೆಯಾಗಬಹುದು

ಈಶಾನ್ಯ ಭಾರತದ ಲೋ ಪ್ರೆಷರ್ ಕಳೆದ ಒಂದು ವಾರದಿಂದ ಮುಂದುವರೆಯುತ್ತಿದ್ದು ಮಧ್ಯ ಈಶಾನ್ಯ ಭಾರತದಲ್ಲಿ ಮಳೆಯಾಗುತ್ತಿದೆ. ಮುಂದಿನ 2-3 ದಿನದಲ್ಲಿ ವಾಯುವ್ಯ ಭಾರತದಲ್ಲಿ ಮಳೆ ಆರಂಭವಾಗಬಹುದು. ದಕ್ಷಿಣದಲ್ಲಿ ಕೇರಳದಲ್ಲಿ ಮಳೆಯ ಮುನ್ಸೂಚನೆ ಇರುವ ಕಾರಣ ಕರ್ನಾಟಕದಲ್ಲಿಯೂ ನೈರುತ್ಯ ಮುಂಗಾರು ಸಾಧಾರಣ ಮಳೆ ಮುಂದುವರೆಯಬಹುದು.

ಇದನ್ನೂ ಓದಿ: PM kisan E kyc pending list: ಇಲಾಖೆಯಿಂದ ಕೆವೈಸಿ ಬಾಕಿರುವ ರೈತರ ಪಟ್ಟಿ ಬಿಡುಗಡೆ:

ಮಾಹಿತಿ ಕೃಪೆ:
ರಘುರಾಮ ಕಂಪದಕೋಡಿ

ಇತ್ತೀಚಿನ ಸುದ್ದಿಗಳು

Related Articles