ಆತ್ಮೀಯ ರೈತ ಬಾಂದವರೇ ಮುಂಗಾರು ಹಂಗಾಮು ಪ್ರಾರಂಭವಾಗಿದೆ.ಕೃಷಿ ಚಟುವಟಿಕೆಗಳು ಗರಿಗದರಿವೆ, ಬಿತ್ತನೆ ಕಾರ್ಯ ಪ್ರಾರಂಭವಾಗಿ ಇನ್ನೂ ಕೆಲವು ಕಡೆ ಮಳೆ ಬೇಕಾಗಿದೆ, ಭತ್ತ, ಮೆಕ್ಕೆಜೋಳ, ಸೋಯಾಬೀನ್, ಬೆಳ್ಳುಳ್ಳಿ, ಈರುಳ್ಳಿ, ಹೀಗೆ ರಾಜ್ಯದ ಹಲವು ಜಿಲ್ಲೆಯಲ್ಲಿ ಬೇರೆ ಬೇರೆ ಬೆಳೆಗಳನ್ನು ಬಿತ್ತನೆ ಮಾಡಿರುತ್ತಾರೆ. ಮಳೆ ಯಾವಾಗ ಅಗುತ್ತೆ ಅಗಲ್ಲ ಅಂತ ನಿಖರ ಮಾಹಿತಿ ರೈತರಿಗೆ ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ಈ ಮಳೆಯ ಮೂನ್ಸೂಚನೆ ನೋಡಿಕೊಂಡೆ ರೈತರು ಮುಂದಿನ ಕೃಷಿ ಕಾರ್ಯ ಪ್ರಾರಂಬಿಸುವುದಕ್ಕೆ ತುಂಬನೇ ಉಪಯೋಗ ಅಗುವುದು. ಆದ್ದರಿಂದ ಪ್ರತಿ ದಿನ ಈ ನಮ್ಮ ಕೃಷಿ ಮಾಹಿತಿ ಲೇಖನದಲ್ಲಿ ರಾಜ್ಯದ ಹವಮಾನ ಮತ್ತು ಮಳೆ ಮುನ್ಸೂಚೆನೆ ನೀಡುತ್ತಿರುವೆ, ಈ ಮಾಹಿತಿಯನ್ನು ಓದಿ ಇತರೆ ರೈತ ಬಾಂದವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.
Coastal Rain and weather Forecast:ಕರಾವಳಿ ಜಿಲ್ಲೆಗಳ ಮಳೆಯ ಮುನ್ಸೂಚೆನೆ:
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬಿಡುವಿನ ಸಮಯ ಸ್ವಲ್ಪ ಜಾಸ್ತಿ ಇರಬಹುದು. ಕಾಸರಗೋಡು ಒಂದೆರಡು ಮಳೆ ಜಾಸ್ತಿ ಇರುವ ಮುನ್ಸೂಚೆನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಕರಾವಳಿ ತೀರ ಭಾಗಗಳಲ್ಲಿ ಮಧ್ಯಾಹ್ನ ನಂತರ ಅಥವಾ ಸಂಜೆಯಿಂದ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ.
ಈಗಿನಂತೆ 15ರ ತನಕ ಬಿಟ್ಟು ಬಿಟ್ಟು ಮಳೆ ಮುಂದುವರಿಯುವ ಲಕ್ಷಣಗಳಿವೆ. ಜುಲೈ 14ರಿಂದ ಮಳೆಯ ಮಧ್ಯ ಬಿಡುವು ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿವೆ. 16ರಿಂದ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ.
Malnad Rain and Weather Forecast: ಮಲೆನಾಡು ಜಿಲ್ಲೆಗಳ ಮಳೆಯ ಮುನ್ಸೂಚೆನೆ :
ಕೊಡಗು, ಹಾಸನ ಜಿಲ್ಲೆಗಳಲ್ಲಿ ದಿನದಲ್ಲಿ 2 ಅಥವಾ 3 ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಜುಲೈ 15ರ ತನಕ ಇದೇ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. ಜುಲೈ 16ರಿಂದ ಮಳೆ ಹೆಚ್ಚಾಗುವ ಸೂಚನೆಗಳಿವೆ.
North Interior Rain and Weather Forecast: ಉತ್ತರ ಒಳನಾಡು ಜಿಲ್ಲೆಗಳ ಮಳೆಯ ಮುನ್ಸೂಚೆನೆ :
ಉತ್ತರ ಒಳನಾಡಿನ ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ.
Southern Interior Rain and Weather Forecast: ದಕ್ಷಿಣ ಒಳನಾಡು ಜಿಲ್ಲೆಗಳ ಮಳೆಯ ಮುನ್ಸೂಚೆನೆ :
ಈಗಿನಂತೆ ಜುಲೈ 13ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸಾಧ್ಯತೆ ಕಡಿಮೆಯಾಗಲಿದ್ದು, ಜುಲೈ 16ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಈಗಿನ ದಕ್ಷಿಣ ಒಳನಾಡು ಭಾಗಗಳಲ್ಲಿ ಬೀಳುತ್ತಿರುವ ಮಳೆಯು ತಮಿಳುನಾಡು ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವದಿಂದ ಇರಬಹುದು.
(ನಿನ್ನೆ ಇದೇ ರೀತಿ ಅಸಹಜ ಚಲನೆಯ ಕಾರಣದಿಂದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗಿದ್ದರಬಹುದು.)
ಮಾಹಿತಿ…
ಸಾಯಿಶೇಖರ್ ಕರಿಕಳ