ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ವರ್ಷ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್(ಪಡಿತರ ಚೀಟಿ) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದರಂತೆ ಅರ್ಜಿ ಸಲ್ಲಿಸಿ ಪಡೆದುಕೊಂಡ ಕೆಲವರ ರೇಷನ್ ಕಾರ್ಡ್ ಗಳು ನಾನಾ ಕಾರಣಗಳಿಂದ ಸ್ಥಗಿತಗೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ ನಿಮ್ಮ ರೇಷನ್ ಕಾರ್ಡ್ ಚಾಲನೆಯಲ್ಲಿ ಇದೆಯೇ ಎಂದು ತಿಯುವುದು ಹೇಗೆ ಎಂದು ಇಲ್ಲಿದೆ ಮಾಹಿತಿ.
ಇನ್ನೂ ಹಲವಾರು ಬಾರಿ ಜನರು ತಮ್ಮ ತಿಂಗಳ ರೇಷನ್(ತಂಬು ಕೊಡದೆ ಬಾಕಿ) ಪಡೆಯದೆ ಇರುವುದರಿಂದ ಹಲವು ಬಾರಿ ರೇಷನ್ ಕಾರ್ಡ್ ನಷಕ್ರೀಯ ವಾಗುವ ಸಾಧ್ಯತೆಗಳಿರುತ್ತದೆ. ಭಾರತ ದೇಶದಲ್ಲಿ ನಾಗರಿಕರ ಹಸಿವು ನೀಗಿಸಲು ಅತೀ ಅವಶ್ಯಕವಾದ ಆಹಾರ ವಸ್ತುಗಳನ್ನು ಬಡ ರೈತರಿಗೆ ಉಚಿತ/ಕಡಿಮೆ ದರದಲ್ಲಿ ವಿತರಣೆ ಮಾಡಲು ಪ್ರತಿ ರಾಜ್ಯಗಳಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದೆ. ಈ ಇಲಾಖೆಯ ಮೂಲಕ ಪ್ರತಿ ಕುಟುಂಬಕ್ಕೆ ಒಂದು ಗುರುತಿನ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಮಾಡಿಸಬೇಕಾಗುತ್ತದೆ.
ಈ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಮಾಡಿಸಿದ ರೈತರಿಗೆ ತಿಂಗಳಿಗೆ ಉಚಿತ/ಕಡಿಮೆ ದರದಲ್ಲಿ ಅವಶ್ಯಕ ಆಹಾರ ವಸ್ತುಗಳಾದ ಅಕ್ಕಿ, ಬೆಳೆ, ಗೋಧಿ, ಸಕ್ಕರೆ ಇತ್ಯಾದಿ ಆಹಾರ ವಸ್ತುಗಳನ್ನು ಬಡ ರೈತರಿಗೆ ವಿತರಿಸಲಾಗುತ್ತದೆ. ಈ ವಸ್ತುಗಳನ್ನು ಪಡೆಯಲು ಆಹಾರ ಇಲಾಖೆಯಡಿ ಸಾರ್ವಜನಿಕರು ಮುಂಚಿತವಾಗಿ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಪಡೆದುಕೊಂಡಿರಬೇಕು.
running Ration Cards List-ನಿಮ್ಮ ಗ್ರಾಮದಲ್ಲಿ ಚಾಲನೆಯಲ್ಲಿರುವ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೆ? ಎಂದು ಹೀಗೆ ಚೆಕ್ ಮಾಡಿಕೊಳ್ಳಬೇಕು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಮಾರ್ಗ ಸೂಚಿ ಪ್ರಕಾರ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದರಲ್ಲಿ ಅರ್ಹ ಜನರ ಪಡಿತರ ಚೀಟಿಯನ್ನು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ನ್ನು ಪ್ರವೇಶ ಮಾಡಿ ನಿಮ್ಮ ಗ್ರಾಮ/ಹಳ್ಳಿಯ ಚಾಲನೆಯಲ್ಲಿರುವ ರೇಷನ್ ಕಾರ್ಡಗಳ ಪಟ್ಟಿಯನ್ನು ಹೇಗೆ ನೋಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ.
ವಿಧಾನ-1:ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Ration Cards List ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
ವಿಧಾನ-2: ನಂತರ ಅದರಲ್ಲಿ “ಇ ರೇಷನ್ ಕಾರ್ಡ್”(E-ration card) ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3: E-ration card ಕ್ಲಿಕ್ ಮಾಡಿದ ಮೇಲೆ ಅದರಲ್ಲಿ Show village list ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-4: ತದನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್, ಗ್ರಾಮ/ಹಳ್ಳಿ ಆಯ್ಕೆ ಮಾಡಿ “Go” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಚಾಲನೆ ಇರುವ ರೇಷನ್ ಕಾರ್ಡ್ ದಾರರ ಪಟ್ಟಿ ತೋರಿಸುತ್ತದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ/ಇಲ್ಲವಾ ಎಂದು ನೋಡಿಕೊಳ್ಳಬಹುದು.