Friday, November 22, 2024

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‍ ಕಾರ್ಡ ಲಿಂಕ್ ಆಗಿದೆಯೋ? ಇಲವೋ ? ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ.

ಆತ್ಮೀಯ ಸ್ನೇಹಿತರೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‍ ಲಿಂಕ್ ಅಂದರೆ ಆಧಾರ್‍ ಜೋಡಣೆ ಬಹಳ ಮುಖ್ಯ. ಸರ್ಕಾರ ಯಾವುದೇ ಪ್ರಯೊಜನ, ಜೊತೆಗೆ ಸಹಾಯಧನ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್‍ ಕಾರ್ಡ ಜೋಡಣೆ ಬಹಳ ಅವಶ್ಯಕವಾಗಿರುತ್ತದೆ. ಬನ್ನಿ ಗೆಳೆಯರೇ ಆಗಿದ್ದರೆ ಜೋಡಣೆ ಆಗಿದೆಯೋ ? ಇಲ್ಲವೋ? ಅಂತ ಪರಿಶೀಲನೆ ಮಾಡೋಣವೇ?

ಇದನ್ನೂ ಓದಿ: ಆಧಾರ್‍ ಕಾರ್ಡನಲ್ಲಿ ಪೋಟೋ ಬದಲಾವಣೆ ಮಾಡಬೇಕೇ ? ಹಾಗಿದ್ದರೆ ಮಾಡುವುದು ಹೇಗೇ ?

ಮೊದಲು ನಿಮ್ಮ ಮೊಬೈಲ್ ನಲ್ಲಿ chrome ಗೆ ಭೇಟಿ ನೀಡಿ.

ಅಲ್ಲಿUIDAI ವೆಬ್ ಪೇಜ್ ಗೆ ಹೋಗಿ www.uidai.gov.in ನಲ್ಲಿ https://resident.uidai.gov.in/bank-mapper ಅಂತ ಟೈಪ್ ಮಾಡಬೇಕಾಗಿರುತ್ತೆ.

ನಿಮ್ಮ ಆಧಾರ್‍ ಕಾರ್ಡ ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಎಂಬ ಲಿಂಕ್ ಕೆಳಗೆ Enter your 12 digit Aadhaar number (1234/1234/1234)ಈ ರೀತಿ ಟೈಪ್ ಮಾಡಿ.

ಜೊತೆಗೆ ಭದ್ರತಾ ಕೋಡ್ ಅನ್ನು ನಮೂದಿಸಬೇಕು.

ಈಗ ನಿಮ್ಮ ನೋಂದಾಣಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

ಇದನ್ನೂ ಓದಿ: ಅಂಚೆ ಕಛೇರಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಸೂಚನೆ -ಪೋಸ್ಟ್ ಮಾಸ್ಟರ್‍ ಜನರಲ್

UIDAI ವೆಬ್ಸೈಟ್ನನಲ್ಲಿ ಈ OTP ನಮೂದಿಸಿ ಬೇಕಾಗಿರುತ್ತೆ.

ಮುಂದೆ ನಿಮ್ಮ ಮೊಬೈಲ್ ನಲ್ಲಿ ಲಾಗಿನ್ ಆಯ್ಕೆ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

ಲಾಗಿನ್ ಆದ ನಂತರ, ಆಧಾರ್‍ ಗೆ ಜೋಡಣೆ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿ ದೊರೆಯುತ್ತದೆ.

ಇತ್ತೀಚಿನ ಸುದ್ದಿಗಳು

Related Articles