Saturday, July 19, 2025

ಅತಿಯಾದ ಯೂರಿಯಾ ಬಳಕೆ ಮಾಡುವುದರಿಂದ ಇಷ್ಟೆಲ್ಲಾ ಹಾನಿ ಆಗುತ್ತಾ!!

ಹೊಲ-ಗದ್ದೆಗಳಿಗೆ ಯೂರಿಯಾ ಅತೀ ಹೆಚ್ಚು ಬಳಕೆ ಮಾಡುತ್ತಿರಾ? ಆಗಿದ್ದರೆ ಈ ಮಾಹಿತಿ ನೋಡಿ!!
ಏನೇಲ್ಲಾ ಆರೋಗ್ಯದ ಮೇಲೆ ಪೆರಿಣಾಮ ಬೀರುತ್ತವೆ?ಮಣ್ಣಿನ ಆರೋಗ್ಯದ ಮೇಲೆ ಏನ ಪರಿಣಾಮ ಬೀರುತ್ತವೆ? ಸಂಪೂರ್ಣ ಮಾಹಿತಿ ತಿಳಿಯಿರಿ.

ಆತ್ಮೀಯ ರೈತ ಬಾಂದವರೇ ಈ ಲೇಖನದಲ್ಲಿ ಯೂರಿಯಾ ಬಳಕೆಯಿಂದ ಮನುಷ್ಯರ ಆರೋಗ್ಯದ ಮೇಲೆ ಆಗುವ ಪರಿಣಾಮ ಮತ್ತು ಪರಿಸರದ ಮೇಲೆ ಆಗುವ ಪರಿಣಾಮ ಹಾಗೂ ಪರಿಸರದ ವ್ಯವಸಾಯದಲ್ಲಿ ಯೂರಿಯಾದ ಅತಿರೇಕವಾದ ಬಳಕೆ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತದೆ ಯೂರಿಯಾ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಮೂಲವಾದರೂ ಅದನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಮಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು ಹೆಚ್ಚಾಗಿ ಬಳಕೆ ಮಾಡಿದರೆ, ಇಳುವರಿ ಕಡಿಮೆಯಾಗಬಹುದು, ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು. ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳಿಗೆ ವಿಷಕಾರಿಯಾದ ಪರಿಣಾಮವಾಗಬಹುದು. ಬೆಳೆಗಳು ಹೆಚ್ಚು ಕೀಟ/ರೋಗಕ್ಕೆ ತುತ್ತಾಗುತ್ತವೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.

ಇದನ್ನೂ ಓದಿ: Good News: ಹೊಲ,ಗದ್ದೆಗೆ ಹೋಗುವ ಕಾಲುದಾರಿ ,ಬಂಡಿದಾರಿ, ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ:

ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು :

ಯೂರಿಯಾ ಹೆಚ್ಚಾಗಿ ಬಳಸಿದಾಗ, ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ವಾಂತಿ ಮುಂತಾದವು ಸಂಭವಿಸಬಹುದು. ಆಹಾರದಲ್ಲಿ ನೈಟ್ರೇಟಗಳು ಹೆಚ್ಚಾಗಿದ್ದರೆ, ಅವು ನೈಟ್ರೋಸಾಮೈನ್ಗಳಾಗಿ ಪರಿವರ್ತಿತನೆಯಾಗಿ ಕ್ಯಾನ್ಸರ್ ಕಾರಣವಾಗಬಹುದು. ಶಿಶುಗಳಲ್ಲಿ “ಬ್ಲೂ ಬೇಬಿ ಸಿಂಡ್ರೋಮ್”(Blue Baby Syndrome) ಎಂಬ ಸಮಸ್ಯೆ ಆಗಬಹುದು. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿದಮೆ ಮಾಡುತ್ತದೆ. ಯೂರಿಯಾ ಭೂಮಿಯಿಂದ ನೆಲದ ನೀರಿಗೆ ಅಥವಾ ನದಿ-ಕೆರೆಗಳಿಗೆ ಸೇರಿದರೆ, ಕುಡಿಯುವ ನೀರಿನಲ್ಲಿ ನೈಟ್ರೇಟ್ ಮಟ್ಟ ಹೆಚ್ಚಾಗಬಹುದು. ಇದು ಮಾನವ ಆರೋಗ್ಯಕ್ಕೆ ತುಂಬಾ ಹಾನಿಕಾರಕ,

Soil health: ಮಣ್ಣಿನ ಆರೋಗ್ಯ:
ನಿರಂತರ ಹಾಗೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ pH ಅನ್ನು ಕಡಿಮೆಮಾಡಿ ಅದನ್ನು ಆಮ್ಮಿಯವಾಗಿಸುತ್ತದೆ. ಆಮ್ಮಿಯ ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆಗಳು ತೊಂದರೆಗೆ ಒಳಗಾಗುತ್ತದೆ. ಇದರಿಂದ ಒಟ್ಟು ಮಣ್ಣಿನ ಆರೋಗ್ಯ, ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ

Impact on the Environment: ಪರಿಸರದ ಮೇಲೆ ಪರಿಣಾಮ:
ಯೂರಿಯಾ ಭೂಮಿಯ ಅಂತರ್ಜಲಕ್ಕೆ ಹೋಗಿ ಕುಡಿಯುವ ನೀರಿನ ಮೂಲಗಳನ್ನು ಮಾಲಿನ್ಯಗೊಳಿಸಬಹುದು ಹಾಗೂ ನದಿ-ಕೆರೆಗಳಿಗೆ ಹೋಗಿ ಯೂಟ್ರಿಫಿಕೇಶನ್ (ಪೋಷಕಾಂಶಗಳ ಅತಿ ಹೆಚ್ಚಿನ ಸಂಗ್ರಹ) ಉಂಟುಮಾಡಬಹುದು. ನೈಟ್ರಸ್ ಆಕ್ಸೆಡ್ನಂತೆ ಶಕ್ತಿಶಾಲಿ ಹಸಿರುಮನೆ ಅನಿಲ ಪರಿವರ್ತನೆಯಾಗಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಅತಿಯಾದ ಸಾರಜನಕ ಬಳಕೆ ಸಸ್ಯಗಳನ್ನು ಕೆಲವು ಕೀಟಗಳು ಮತ್ತು ರೋಗಗಳಿಗೆ ಹೆಚ್ಚು ಪೂರಕವಾಗುತ್ತವೆ.

Recommendations: ಶಿಫಾರಸುಗಳು:
ರೈತರು ಯೂರಿಯಾ ಬಳಕೆಯಲ್ಲಿ ಎಚ್ಚರಿಕೆಯಿಂದ ನಡೆದು, ಶಿಫಾರಸು ಮಾಡಲಾದ ಪ್ರಮಾಣವನ್ನು ಅನುಸರಿಸಬೇಕು ಮತ್ತು ಮಣ್ಣಿನ ಪರೀಕ್ಷೆ ಮೂಲಕ ನಿರ್ದಿಷ್ಟ ಪೋಷಕಾಂಶ ಆಗತ್ಯಗಳನ್ನು ತಿಳಿದುಕೊಳ್ಳಬೇಕು.

Balanced fertilizer use:ಸಮತೋಲನದ ರಸಗೊಬ್ಬರ ಬಳಕೆ :
ರಸಗೊಬ್ಬರ ಬಳಕೆಯಲ್ಲಿ ಸಮತೋಲನ ತಾಳುವುದು ಅತ್ಯಂತ ಅಗತ್ಯ. ಸಾರಜನಕದ ಜೊತೆಗೆ ಫಾಸ್ಪರಸ್ ಮತ್ತು ಪೊಟ್ಯಾಸಿಯಂ ಮುಂತಾದ ಮುಖ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರಬೇಕು. ಹೆಚ್ಚು ಹಸಿರೆಲೆ ಗೊಬ್ಬರ/ಎರೆಹು ಗೊಬ್ಬರ/ಸಾವಯವ ಗೊಬ್ಬರ/ ಸಾವಯವ ದ್ರವ್ಯಗಳು ಮತ್ತು ಜೈವಿಕ ಗೊಬ್ಬರಗಳಂತಹ ಪರ್ಯಾಯ ಸಾರಜನಕ ಮೂಲಗಳನ್ನು ಬಳಸುವುದರಿಂದ ಯೂರಿಯಾ ಮೇಲೆ ಅವಲಂಬನೆಯು ಕಡಿಮೆಯಾಗುತ್ತದೆ ಮತ್ತು ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ.

Uses of nano Urea: ನ್ಯಾನೋ ಯೂರಿಯಾ ಬಳಕೆ:
ನ್ಯಾನೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ. ಇದನ್ನು ಇಪ್ಕೋ (IFFCO) ಕಂಪನಿಯು ಅಭಿವೃದ್ಧಿಪಡಿಸಿದೆ. ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೋ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ 50% ಕಡಿಮೆ ಮಾಡಬಹುದು.

ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ

nano Urea Benefits: ಲಾಭಗಳು:
ರಾಸಾಯನಿಕ ಬಳಕೆ ಕಡಿಮೆಯಾಗುತ್ತದೆ.
ಉತ್ಪಾದನೆ ಹೆಚ್ಚಾಗುತ್ತದೆ.
ಮಣ್ಣಿನ ಆರೋಗ್ಯ ಸುಧಾರಣೆಯಾಗುತ್ತದೆ.
ಖರ್ಚು ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles