Friday, September 20, 2024

250 ಬಗೆಯ ಅಧಿಕ ಉದ್ದಿಮೆಗಳನ್ನು ಪ್ರಾರಂಭಿಸಲು ಗರಿಷ್ಠ 50 ಲಕ್ಷಗಳವರೆಗೆ ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

2022-23 ನೇ ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಠಿಸಲು (PMEGP)ಕಾರ್ಯಕ್ರಮದಡಿಯಲ್ಲಿ ಉತ್ಪಾದನ/ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.


ಸ್ವ ಉದ್ಯೋಗ ಮಾಡಿಕೊಳ್ಳವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35% ವರೆಗೆ ಸಹಾಯಧನವನ್ನು ನೀಡಲಾಗುವುದು. ಈ ವರ್ಷದಲ್ಲಿ ಹಸು,ಕುರಿ, ಮೇಕೆ,ಎಮ್ಮೆ,ಕೋಳಿ,ಬಾತುಕೋಳಿ, ಟರ್ಕಿಕೋಳಿ,ಮೀನು ಸಾಕಣಿಕೆ, ಹಾಗೂ ಹೋಟೆಲ್ ಮತ್ತು ಇತರೆ 250ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲಕ್ಕೆ ಸಹಾಯಧನ ಪಡೆಯಬಹುದು.

ಇದನ್ನೂ ಓದಿ: 90% ಸಹಾಯಧನದಲ್ಲಿ ಹನಿ ನೀರಾವರಿ ಅಳವಡಿಸಲು ಇಲಾಖೆಯಿಂದ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಈ ಸೌಲಭ್ಯವನ್ನು ಪಡೆಯಲು ಆನ್ ಲೈನ್ ಮೂಲಕ www.kviconline.gov.in(pmegp online application)ರಲ್ಲಿ ಅರ್ಜಿ ಸಲ್ಲಿಸುವಾಗ AGENCY CODE KVIB ಎಂದು ಅರ್ಜಿಯಲ್ಲಿ ಸೇರಿಸಿ ಅದರ ಎರಡು ಪ್ರತಿಯನ್ನು ದಾಖಲಾತಿಗಳೊಂದಿಗೆ ಕಛೇರಿಗೆ ಸಲ್ಲಿಸಬೇಕಾಗಿರುತ್ತೆ.ಕಛೇರಿಗೆ ಭೇಟಿ ನೀಡಿದಲ್ಲಿ ಉಚಿತವಾಗಿ ಆನ ಲೈನ್ ಅರ್ಜಿ ಹಾಕಲಾಗುವುದು.ಹೆಚ್ಚಿನ ವಿವರಗಳಿಗೆ ಎಚ್. ಆರ್‍. ರಾಮಕೃಷ್ಣ. ಪ್ರಭಾರ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ದೂ. ಸಂ. 08272-225946,9480825630.ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಛೇರಿ ಖಾದಿ ಮಂಡಳಿಯ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಎಚ್. ಆರ್‍. ರಾಮಕೃಷ್ಣ ಅವರು ತಿಳಿಸಿರುತ್ತಾರೆ. ಬೇರೇ ಜಿಲ್ಲೆಯವರು
ನಿಮ್ಮ ಜಿಲ್ಲೆಗೆ ಸಂಬಂದಿಸಿದ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರರಿಗೆ ಇಲಾಖೆಯಿಂದ ಏನೆಲ್ಲಾ ಸೌಲಭ್ಯ75ಗಳವೆ ತಿಳಿಯೋಣ??

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (PMEGP):


ಕೇಂದ್ರ ಸರ್ಕಾರವು 15 ಆಗಷ್ಟ 2008 ರಲ್ಲಿ ದೇಶದ ಎಲ್ಲಾ ವರ್ಗದ ನಿರುದ್ಯೋಗ ಯುವಕ, ಯುವತಿಯರಿಗೆ ಸ್ವ -ಉದ್ಯೋಗ ಪ್ರಾರಂಭಿಸುವ ಉದ್ದೇಶದಿಂದ ಆರ್ಥಿಕ ನೆರವು ನೀಡವುದಕ್ಕಾಗಿ ಪ್ರಧಾನ ಮಂತ್ರಿಗಳ ಉದ್ಯೋಗ
ಸೃಷ್ಠಿಕರಣ(ಸೃಜನ) ಯೋಜನೆ (PMEGP)ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಸ್ವ ಉದ್ಯೋಗ ಮಾಡಿಕೊಳ್ಳವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35% ವರೆಗೆ ಸಹಾಯಧನವನ್ನು ನೀಡಲಾಗುವುದು. ಈ ವರ್ಷದಲ್ಲಿ ಹಸು , ಕುರಿ, ಮೇಕೆ, ಎಮ್ಮೆ, ಕೋಳಿ, ಬಾತುಕೋಳಿ, ಟರ್ಕಿಕೋಳಿ, ಮೀನು ಸಾಕಣಿಕೆ, ಹಾಗೂ ಹೋಟೆಲ್ ಮತ್ತು ಇತರೆ 250ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲಕ್ಕೆ ಸಹಾಯಧನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಜಿಲ್ಲಾ ಕಛೇರಿ ಖಾದಿ ಮಂಡಳಿಯ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles