Wednesday, March 12, 2025

Pouthi Khata Abhiyana-ರಾಜ್ಯ ಸರಕಾರದಿಂದ ಪೌತಿ ಖಾತೆ ಅಭಿಯಾನ!

ಕಂದಾಯ ಇಲಾಖೆ ಅಡಿಯಲ್ಲಿ ರಾಜ್ಯ ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ಪೌತಿ ಖಾತೆ ಅಭಿಯಾನವನ್ನು ಪ್ರಾರಂಭ ಮಾಡಿದ್ದು, ಹಕ್ಕುದಾರರ ಹೆಸರಿಗೆ ಕೃಷಿ ಜಮೀನು ನೋಂದಣಿ ಮಾಡುವ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಕಂದಾಯ ಇಲಾಖೆ ‘ಪೌತಿ ಖಾತೆ'(Pouthi Khata) ಅಭಿಯಾನವನ್ನು ಪ್ರಾಂಭಮಾಡಿದ್ದು, ಇದರ ಮೂಲಕ ಮರಣ ಹೊಂದಿದವರ ಹೆಸರಿನಲ್ಲೇ ಉಳಿದಿರುವ ಜಮೀನಿನ ದಾಖಲೆಗಳನ್ನು ಹಕ್ಕುದಾರರ ಹೆಸರಿನಲ್ಲಿ ವರ್ಗಾವಣೆ ಮಾಡುವುದೇ ಇದರ ಉದ್ದೇಶವಾಗಿದೆ. ಈ ಅಭಿಯಾನವು ವಾರಸುದಾರರಿಗೆ ತಮ್ಮ ಹಕ್ಕುಗಳನ್ನು ಸೂಕ್ತವಾಗಿ ದಾಖಲಿಸಿಕೊಳ್ಳಲು ಮತ್ತು ಅವರು ಪಡೆಯುವ ಜಮೀನಿನ ಮಾಲಿಕತ್ವವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡಲಿದೆ.

ಏನಿದು ಪೌತಿ ಖಾತೆ? ಪೌತಿ ಖಾತೆ ಅಭಿಯಾನ ಎಂದರೇನು? ಪೌತಿ ಖಾತೆ ಅಭಿಯಾನವನ್ನು ಹೇಗೆ ಮಾಡಲಾಗುತ್ತದೆ? ಪೌತಿ ಖಾತೆ ಅಭಿಯಾನ ಏಕೆ ಮಾಡಲಾಗುತ್ತದೆ? ಇದರಿಂದ ಅಗುವ ಪ್ರಯೋಜನಗಳೇನು? ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Agriculture machine subsidy-ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.

What is Pouthi Khata-ಪೌತಿ ಖಾತೆ ಎಂದರೇನು?

“ಪೌತಿ ಖಾತೆ” ಎಂದರೆ, ಮೃತ ವ್ಯಕ್ತಿಯ ಹೆಸರಿನಲ್ಲಿ ಉಳಿದಿರುವ ಆಸ್ತಿಯನ್ನು ಅವರ ವಾರಸುದಾರರ ಹೆಸರಿನಲ್ಲಿ ವರ್ಗಾವಣೆ ಮಾಡುವ ಪ್ರಕ್ರಿಯೆ. ಈ ಮೂಲಕ, ಹಕ್ಕುದಾರರು ತಮ್ಮ ಹಕ್ಕುಗಳನ್ನು ಸರಿಯಾಗಿ ದಾಖಲಿಸಿಕೊಳ್ಳಲು ಸಹಾಯಕವಾಗಿದೆ.

What is Pouthi Khata Abhiyana-ಪೌತಿ ಖಾತೆ ಅಭಿಯಾನ ಎಂದರೇನು?

“ಪೌತಿ ಖಾತೆ ಅಭಿಯಾನ” (Potti Khaate Abhiyaana) ಎಂದರೆ, ರಾಜ್ಯ ಸರ್ಕಾರವು ಬಡವರು ಹಾಗೂ ರೈತರಿಗಾಗಿ ನಿಯಮಿತವಾಗಿ ಹಮ್ಮಿಕೊಳ್ಳುವ ಒಂದು ವಿಶೇಷ ಯೋಜನೆ ಇದಾಗಿದೆ. ಇದರಲ್ಲಿ ಸರ್ಕಾರವು ಜನರಿಗೆ ಪೌತಿ ಖಾತೆಗಳೆಂಬ ಅಕೌಂಟುಗಳನ್ನು ತೆರೆದು, ಅವುಗಳನ್ನು ಭದ್ರವಾಗಿ ಉಳಿಸಲು ಹಾಗೂ ಸಾರ್ವಜನಿಕರ ಹಣಕಾಸು ವ್ಯವಸ್ಥೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ.

ಇದು ಬಡವರಿಗೆ ಸರಳವಾಗಿ ಬ್ಯಾಂಕ್ ಸೇವೆಗಳ ಸಹಾಯ ನೀಡಲು, ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಾಗೂ ಹಣಕಾಸು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲು ಸಹಾಯಕವಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಮಾನದಂಡಗಳು!

ಪೌತಿ ಖಾತೆ ಅಭಿಯಾನವನ್ನು ಏಕೆ ಮಾಡುತ್ತಾರೆ?

ಕೃಷಿ ಜಮೀನುಗಳ ಹಕ್ಕುದಾರನು ಮರಣ ಹೊಂದಿದವರ ಹೆಸರಿನಲ್ಲೇ ಇದ್ದು ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಇರುವುದು ಹಾಗೂ ಪ್ರಸ್ತುತ ವಾರಸುದಾರರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

Pouthi Khata Abhiyana-ಪೌತಿ ಖಾತೆ ಅಭಿಯಾನವನ್ನು ಹೇಗೆ ಮಾಡಲಾಗುತ್ತದೆ?

ಪೌತಿ ಖಾತೆ ಅಭಿಯಾನವನ್ನು ಆರಂಭಿಸಲು ಇದಕ್ಕಾಗಿಯೇ ಪ್ರತೇಕ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು, ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಮನೆ ಮನೆಗೆ ಭೇಟಿ ಮಾಡಿ ಜಮೀನಿನ ವಾರಸುದಾರರ ನಿಖರ ಮಾಹಿತಿಯನ್ನು ಸಂಗ್ರಹಣೆ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಕುಟುಂಬದ ವಂಶವೃಕ್ಷವನ್ನು ಆಧಾರವಾಗಿ ಬಳಕೆ ಮಾಡಿಕೊಂಡು ಆಧಾರ್ ಕಾರ್ಡ ವಿವರ ದಾಖಲಿಸಿ OTP ದಾಖಲಿಸಿ ಇನ್ನಿತರೆ ಅರ್ಜಿ ವಿಲೇವಾರಿ ಕಾರ್ಯಗಳನ್ನು ನಡೆಸಿ ಖಾತೆ ವರ್ಗಾವಣೆ ಪಕ್ರಿಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣ ಶೇ.80% ಸಹಾಯಧನ ಕೃಷಿ ಭಾಗ್ಯ ಯೋಜನೆ!

ಒಂದೊಮ್ಮೆ ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಹೊಂದಾಣಿಕೆ ಬಾರದೇ ಪೌತಿ ಖಾತೆಗೆ ಒಪ್ಪಿಗೆ ಸೂಚನೆ ನೀಡದೇ ಇದ್ದಲ್ಲಿ ಕೋರ್ಟಗೆ ಹೋಗಬಹುದು.

Pouthi Khata benefits-ಪೌತಿ ಖಾತೆ ಅಭಿಯಾನದಿಂದ ರೈತರಿಗೆ ಆಗುವ ಪ್ರಯೋಜನಗಳು:

ಪೌತಿ ಖಾತೆ ಅಭಿಯಾನದಲ್ಲಿ ರೈತರು ತಮ್ಮ ಕೃಷಿ ಜಮೀನಿನ ಖಾತೆಗಳನ್ನು ಪ್ರಸ್ತುತ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದರಿಂದ ಅರ್ಜಿ ಸಲ್ಲಿಸಲು ನಗರ ಅಥವಾ ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ತಾಲ್ಲೂಕು ಅಪೀಸುಗಳಿಗೆ ಅಲೆದಾಟ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು.

ಇದಲ್ಲದೇ ಪೌತಿ ಖಾತೆ ಮಾಡಿಸಿಕೊಳ್ಳುವ ಸಮಯದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ.

Pouthi Khata Details-ಖಾತೆ ವರ್ಗಾವಣೆಗೆ ಸಂಬಂಧಪಟ್ಟಂತೆ ಅಂಕಿ-ಅಂಶ ಹೀಗಿದೆ:

1) ರಾಜ್ಯದಲ್ಲಿರುವ ಒಟ್ಟು ಜಮೀನುಗಳು- 4.11 ಕೋಟಿ

2) ಆಧಾರ್ ಮೂಲಕ ಇ-ಕೆವೈಸಿ ಮಾಡಿಕೊಂಡವರು- 3.5 ಕೋಟಿ

3) ಮರಣ ಹೊಂದಿದವರ ಹೆಸರಿನಲ್ಲಿರುವ ಖಾತೆಗಳು- 51.13 ಲಕ್ಷ

4) ಕೃಷಿಯೇತರ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಖಾತೆಗಳು- 70 ಲಕ್ಷ

Nadakacheri-ನೆಮ್ಮದಿ ಕೇಂದ್ರ/ನಾಡಕಚೇರಿಯಲ್ಲಿಯು ಅರ್ಜಿ ಸಲ್ಲಿಸಲು ಅವಕಾಶ:

ಪೌತಿ ಖಾತೆಯನ್ನು ಮಾಡಿಸಿಕೊಳ್ಳಲು ಅರ್ಜಿದಾರರು ಈ ಅಭಿಯಾನವನ್ನು ಹೊರತುಪಡಿಸಿ ತಮ್ಮ ತಮ್ಮ ಹೋಬಳಿಯ ನಾಡಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆಧಾರ್ ಕಾರ್ಡ ಪ್ರತಿ, ಪೋಟೋ, ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಜೊತೆಗೆ bhoomi ತಂತ್ರಾಂಶದಲ್ಲಿ ನಮೂನೆ-1 ರಲ್ಲಿ ಅರ್ಜಿಯನ್ನು ದಾಖಲಿಸಬೇಕು.

ಮರಣ ಪ್ರಮಾಣ ಪತ್ರ ಲಭ್ಯವಿಲ್ಲದೇ ಇದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪತ್ರವನ್ನು ಪಡೆದು ತಾಲ್ಲೂಕು ಅಪೀಸ್ ನಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದುಕೊಂದು ಇಲಾಖೆ ಅಧಿಕಾರಿಗಳಿಂದ ಸ್ಥಳ ಮಹಜರ್ ಮಾಡಿಸಿಕೊಂಡು ವಾರಸುದಾರರಿಂದ ಅಫಿಡವಿಟ್ ಪಡೆದು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles