Wednesday, March 12, 2025

Post office jobs-ಅಂಚೆ ಇಲಾಖೆಯ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಖಾಲಿ ಎಸ್.ಎಸ್,ಎಲ್.ಸಿ ಪಾಸ್ ಆಗಿದ್ದರೇ ಸಾಕು.

ಭಾರತೀಯ ಅಂಚೆ ಇಲಾಖೆವತಿಯಿಂದ ನಿರುದ್ಯೋಗಿ ಯುವಕ/ಯುವತಿಯರಿಗೆ ಭರ್ಜರಿ ಸಿಹಿ ಸುದ್ಧಿಯನ್ನು ಕೇಂದ್ರ ಸರಕಾರ ನೀಡಿದ್ದು ಏನೆಂದರೆ ಅಂಚೆ ಇಲಾಖೆಯಲ್ಲಿ(Post office jobs) ಖಾಲಿಯಿರುವ 21,413 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಅಂಚೆ ಇಲಾಖೆಯಿಂದ (Post office jobs-2025) ಅರ್ಜಿ ಆಹ್ವಾನಿಸಿರುವ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆಗಳೇನು? ಯಾವೆಲ್ಲ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ನಿಮ್ಮ ಜಿಲ್ಲೆಯಲ್ಲಿ ಎಲ್ಲಿ ಹುದ್ದೆಗಳು ಖಾಲಿ ಇವೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಇದನ್ನೂ ಓದಿ:ಕೃಷಿ ಇಲಾಖೆಯ ಯೋಜನೆಯ ಸೌಲಭ್ಯಗಳು ಮತ್ತು ಮಾನದಂಡಗಳು!

ಅಂಚೆ ಇಲಾಖೆಯಲ್ಲಿ ಕೆಳಹಂತದ ಗ್ರಾಮ ಮಟ್ಟದ ಹುದ್ದೆಗಳಾದ POSTMAN ಹುದ್ದೆಗಳನ್ನು ತುಂಬಲು ಕೇಂದ್ರ ಸರಕಾರವು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಈ ಹುದ್ದೆಯು ಅಂಚೆ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಒಂದಾಗಿದೆ.

Eligibility postman job-ಅರ್ಜಿ ಸಲ್ಲಿಸಲು ಮಾನದಂಡಗಳು?

1)ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.

2)ಅರ್ಜಿದಾರರು 10ನೇ ತರಗತಿ ಉತ್ತೀರ್ಣನಾಗಿರಬೇಕು.

3)ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

4)ಅರ್ಜಿದಾರರು ದ್ವಿಚಕ್ರ ವಾಹನ ಓಡಿಸಲು ಬರುವವರಾಗಿರಬೇಕು.

5)ಅರ್ಜಿದಾರರು 18 ರಿಂದ 40 ವರ್ಷದ ಒಳಗಿನವರಾಗಬೇಕು.

Post office jobs-ಯಾವೆಲ್ಲ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ.

1)ಶಾಖಾ ಪೋಸ್ಟ್ ಮಾಸ್ಟರ್(branch postmaster)

2)ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್(assistant branch postmaster)

3)ಡಾಕ್ ಸೇವಕ(dak sevaka)

Application last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಅರ್ಜಿ ಸಲ್ಲಿಕೆ ಪ್ರಾರಂಭ-10 ಫೆಬ್ರುವರಿ 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-03 ಮಾರ್ಚ್ 2025

Apply documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

1)ಅರ್ಜಿದಾರರ ಆಧಾರ್ ಪ್ರತಿ

2)10ನೇ ತರಗತಿ ಅಂಕ ಪಟ್ಟಿ

3)2ಫೋಟೋ

4)ಮೊಬೈಲ್ ನಂಬರ್

ಇದನ್ನೂ ಓದಿ:ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕಂಪ್ಯುಟರ್ ಸೈಬರ್ ಅಥವಾ ಗ್ರಾಮ ಒನ್ ಮತ್ತು ನಾಗರಿಕ ಸೇವಾ ಸಿಂಧು ಸೈಬರ್ ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಂಚೆ ಇಲಾಖೆಯ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ. click here…

ಇತ್ತೀಚಿನ ಸುದ್ದಿಗಳು

Related Articles