ರೈತ ಬಾಂಧವರೇ ಮುಂಗಾರು/ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಬೀಜ ಖರೀದಿಸಿ ಬಿತ್ತನೆ ಗೆ ಉಪಯೋಗ ಮಾಡುವ ಸಂದರ್ಭಗಳಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬೇಕೆಂದು ಕೋರಿವೆ.
1. ಭೂಮಿ ಮತ್ತು ಹವಾಮಾನಕ್ಕನುಗುಣವಾಗಿ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆಗೆ ಬಳಸುವುದುದು.
2.ಬಿತ್ತನೆಗೆ ಶಿಫಾರಸ್ಸು ಮಾಡಿರುವ ಹಂಗಾಮು, ಮೊಳಕೆ, ಪ್ರಮಾಣ, ಬಿತ್ತನೆಯಕಾಲಾವಧಿ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
3. ಆಯ್ಕೆ ಮಾಡಿದ ತಳಿಯ ಬಿತ್ತನೆ ಬೀಜ ಪ್ರಮಾಣಿಕರಿಸಿದೆಯೇ? ಅಥವಾ ನಿಜಬೀಜವೇ ಎಂಬುವುದನ್ನು ಖಾತರಿ ಪಡಿಸಿಕೊಳ್ಳುವುದು.
4. ಬಿತ್ತನೆ ಬೀಜಕ್ಕೆ ಗುರುತಿನ ಚೀಟಿ ಕಡ್ಡಾಯವಾಗಿ ಹಾಕಿರುವ್ಚ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
5. ಮುದ್ರಿತ ಬಿಲ್ಲನ್ನು (ರಶೀದಿ) ಕಡ್ಡಾಯವಾಗಿ ಪಡೆಯುವುದು. ಬಿಲ್ಲಿನಲ್ಲಿ ಹೆಸರು, ರೈತರ ಸ್ಥಳ, ಬೆಳೆ/ಗಳಿ ಪ್ರಮಾಣದರ ಸ್ಪಷ್ಟವಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳುವುದು.
6. ಅವಧಿ ಮೀರಿರುವ ಅಥವಾ ಬಿತ್ತನೆ ಬೀಜಕ್ಕೆ ಹಾನಿ (Damage)ಆಗಿದ್ದರೆ ಖರೀದಿಸಬಾರದು.
7. ಬಿತ್ತನೆ ಬೀಜ ಖರೀದಿಸಿದ ನಂತರ ಬಿತ್ತುವ ಮುನ್ನ ಎಚ್ಚರಿಕೆಯಿಂದ ದಾಸ್ತಾನೀಕರೀಸಿ ಸಕಾಲದಲ್ಲಿ ಬಿತ್ತನೆಗೆ ಬಳಸಬಹುದು.
8. ಶಿಫಾರಸ್ಸು ಮಾಡಿರುವ ಪ್ರಮಾಣದಲ್ಲಿ ಪ್ರತಿ ಎಕರೆಗೆ ಬಿತ್ತನೆ ಬೀಜವನ್ನು ಬಳಸುವುದು ಹಾಗೂ ಹದ ನೋಡಿ ಬಿತ್ತನೆಮಾಡುವುದು.
9. ಬಿತ್ತನೆ ಮುಂಚೆ ಶಿಫಾರಸ್ಸು ಮಾಡಿರುವ ಬೀಜೋಪಚಾರವನ್ನು ಮಾಡಬೇಕು.
10. ಬಿತ್ತಿದ ನಂತರ 7ರಿಂದ 10 ದಿನದೊಳಗಾಗಿ ಸರಿಯಾಗಿ ಮೊಳಕೆ ಬಾರದಿದ್ದಲ್ಲಿ ತಕ್ಷಣವೇ ಲಿಖಿತವಾಗಿ ದೂರನ್ನು ರೈತಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ನೀಡಿ ಸ್ಥಳ ಪರೀಕ್ಷೆ ಮಾಡಿಸಬಹುದು.
11. ಖರೀದಿಸಿದ ಬೀಜದ ಬಿಲ್ಲನ್ನು ಹಾಗೂ ಚೀಲವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಅವಶ್ಯಕ.
12. ಬೆಳೆಯುವ ಹಂತದಲ್ಲಿ ಬೀಜದ ದೋಷಕಂಡು ಬಂದುಹೂ / ಕಾಯಿ/ತೆನೆಬಾರದೇ ಹೋದರೆ ತಕ್ಷಣ ರೈತರು ರೈತಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ದೂರು ಕೊಡುವುದು.
13. ಬೀಜ ವಿಫಲತೆಯಿಂದ ಬೆಳೆ ನಷ್ಟವಾದಲ್ಲಿ ಮೇಲೆ ತಿಳಿಸಿರುವ ದಾಖಲೆಗಳೊಂದಿಗೆ ಇಲಾಖೆಯ ಸಹಾಯ ಪಡೆದ ಗ್ರಾಹಕರ ವೇದಿಕೆಯಲ್ಲಿ ಪರಿಹಾರಕ್ಕಾಗಿ ಮನವಿಸಲ್ಲಿಸುವುದು.
14. ಬಿತ್ತನೆ ಬೀಜದ ಪೂರೈಕೆಹೆ ಹಾಗೂ ಹೆಚ್ಚಿನ ತಾಂತ್ರಿಕ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರನ್ನು ಸಂಪರ್ಕಿಸುವುದು.
ವಿಶೇಷ ಸೂಚನೆಗಳು :
• ಉತ್ತಮ ಪರಿಣಾಮಕ್ಕಾಗಿ ಹೆಚ್ಚಿನ ರಾಸಾಯಿನಿಕ ಸಾರಜನಕ ಗೊಬ್ಬರಗಳನ್ನು ಬಳಸುವುದು ಸರಿಯಲ್ಲ.
• ಸಿಂಪರಣೆ ಮಾಡುವ ಮುಂಚೆ ಹೊಲದಲ್ಲಿನ ನೀರನ್ನು ಹೊರಹಾಕಬೇಕು.
• ಪ್ರತಿ ಎಕರೆಗೆ ಸುಮಾರು 200-250 ಲೀಟರ್ಸಿಂಪರಣಾ ದ್ರಾವಣವನ್ನು ಉಪಯೋಗೊಸಬೇಕು.
• ಮೂರು ಗಂಟೆಯೊಳಗೆ ಮಳೆ ಬಂದ ರೆಸಿಂಪರಣೆಯನ್ನು ಮತ್ತೆ ಮಾಡಬೇಕು.