Wednesday, February 5, 2025

ಪೋಡಿ ಎಂದರೇನು? ಜಮೀನಿನ ಪೋಡಿ ಹೇಗೆ ಮಾಡಿಸುವುದು? ಪೋಡಿಯಿಂದಾಗುವ ಉಪಯೋಗಗಳೇನು?

ಒಬ್ಬರಿಗಿಂತ ಹೆಚ್ಚು ಜನರ ಹೆಸರು ಒಂದೇ ಸರ್ವೆ ನಂಬರ್‍ ನಲ್ಲಿ ಇದ್ದರೆ ಅದನ್ನು ಸಾಮೂಹಿಕ ಭೂ ಮಾಲೀಕರು ಎಂದು ಕರೆಯುತ್ತಾರೆ. ಒಂದು ಸರ್ವೆ ನಂಬರ್‍ ಎರಡಕ್ಕಿಂತ ಹೆಚ್ಚು
ಜನರ ಹೆಸರಿದ್ದರೆ ಅದನ್ನು ವಿಭಜನೆ ಮಾಡಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಆರ್‍.ಟಿ.ಸಿ ಮಾಡುವುದನ್ನು ಪೋಡಿ ಎನ್ನುವರು.

ಪೋಡಿಯಲ್ಲಿ ನಾಲ್ಕು ವಿಧಗಳಿವೆ :

1.ತತ್ಕಾಲ್ ಪೋಡಿ
2.ದರ್ಖಾಸ್ ಪೋಡಿ
3.ಅಲಿನೇಷನ್ ಪೋಡಿ
4.ಮುಟೇಷನ್ ಪೋಡಿ
ಈ ನಾಲ್ಕರಲ್ಲಿ ಇಲ್ಲಿ ತತ್ಕಾಲ್ ಪೋಡಿ ಬಗ್ಗೆ ವಿವರಿಸಲಾಗಿದೆ.


ಪೋಡಿ ಏಕೆ ಮಾಡಿಸಬೇಕು?


ಒಂದು ಸರ್ವೆನಂಬರ್‍‌ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್‍ ಇರುತ್ತದೆ. ಅದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತದೆ. ಮುಂದೆ ಸರ್ಕಾರದಿಂದ ಸೌಲಭ್ಯವೂ ಸಿಗುವುದಿಲ್ಲ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್‍ ನೀಡಲಾಗುವುದು. ಇದರೊಂದಿಗೆ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲಿಕತ್ವದ ಪಹಣಿ ಮಾಡಲಾಗುವುದು.
ಉದಾಹರಣೆಗೆ : ಒಂದು ಸರ್ವೆ ನಂಬರ್‌ನಲ್ಲಿ ಐದು ಹಿಸ್ಸಾಗಳಿವೆ ಎಂದಿಟ್ಟುಕೊಳ್ಳೋಣ. ಆದರೆ ಪ್ರತ್ಯೇಕ ಪಹಣಿ ಇರುವುದಿಲ್ಲ. ಒಂದು ಪಹಣಿಯಲ್ಲಿ ಎಲ್ಲರ ಹೆಸರು ಇರುತ್ತದೆ. ಸರ್ವೆ ನಂಬರ್‌ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತತ್ಕಾಲಿಕ ಪೋಡಿ ಮಾಡಿಸಬಹುದು.

ಇದನ್ನೂ ಓದಿ: ಹೊಲದ ಹದ್ದು ಬಸ್ತು, ಮಾಡುವ ವಿಧಾನ ಎಲ್ಲಿ ಅರ್ಜಿ ಸಲ್ಲಿಸುವುದು ಎಲ್ಲಿ? ಅದರ ಉಪಯೋಗ ಏನು?


ಪೋಡಿ ಮಾಡಿಸುವುದಕ್ಕಾಗಿ ಬೇಕಾಗುವ ದಾಖಲೆಗಳು ಯಾವುವು?


ಪೋಡಿ ಮಾಡಿಸುವ ಜಮೀನಿನ ಪಹಣಿ ಹಾಗೂ ಆಧಾರ್‍ ಕಾರ್ಡ ಬೇಕು. ಇನ್ನೂ ದಾಖಲೆಗಳು ಬೇಕಾಗಬಹುದು. ನಾಡಕಚೇರಿ ಅಥವಾ ತಹಸೀಲ್ದಾರರ ಕಚೇರಿಗೆ ಸಂಪರ್ಕಿಸಬಹುದು. ಪಹಣಿ ಪ್ರತ್ಯೇಕ ಮಾಡಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾವಣೆಯಾಗುವುದಿಲ್ಲ. ಬೋಂಡ್ರಿ ಫಿಕ್ಸ್ ಮಾಡಿ ಪಹಣಿ ಪ್ರತ್ಯೇಕವಾಗಿ ಮಾಡಲಾಗುವುದು.


ಪೋಡಿ ಮಾಡುವುದರಿಂದ ಆಗುವ ಪ್ರಯೋಜನ:

ರೈತರ ನೋಂದಣಿ ಮಾಡಿಸಲು ಅನುಕೂಲವಾಗಿ ರೈತರಿಗೆ ಬೆಳೆ ಹಾನಿ , ಬೆಂಬಲ ಬೆಲೆ ಯೋಜನೆಯಡಿ ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗುತ್ತದೆ.
ಏಕ ಮಾಲಿಕತ್ವವಿದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲಿಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅಕ್ರಮ ಆಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.
ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಈ ಒಂದು ಪೋಡಿ ಕ್ರಿಯೆ ಬಹಳ ಉಪಯುಕ್ತವಾಗಿದೆ. ಈ ಒಂದು ಪೋಡಿ ಕ್ರಿಯೆಯನ್ನು ಮಾಡಿಸುವದರಿಂದ ಆರ್‌.ಟಿ.ಸಿ(ಪಹಣಿ)ಜಾಗದ ನಕ್ಷೆ ನೀಡಲಾಗುವುದು.
ಸಾಮೂಹಕ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕವಾಗಿ ಜಮೀನಿನ ಪಹಣಿ ಮತ್ತು ನಕಾಶೆ ನೀಡಲಾಗುವುದು.

ರೈತ ಬಾಂದವರೇ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ನಿಮ್ಮ ಊರಿನ ನಾಡ ಕಛೇರಿ ಕೇಂದ್ರ ಅಥವಾ ಕಂದಾಯ ಇಲಾಖೆ ಯನ್ನು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles