Thursday, November 21, 2024

PMKSY-OI Scheme: ಶೇ. 50 ರ ಸಹಾಯಧನದಲ್ಲಿ PVC Pipe ವಿತರಣೆ:

ಆತ್ಮೀಯ ರೈತ ಭಾಂದವರೇ ಕೃಷಿ ಇಲಾಖೆಯಲ್ಲಿ 2023-24ನೇ ಸಾಲಿನಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಇತರೇ ಉಪಚಾರಗಳು ( PMKSY-OI) ಯೋಜನೆಯಡಿ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು.

ಈ ಯೋಜನೆಯಡಿ ರೈತರಿಗೆ ವಿವಿಧ ಘಟಕಗಳಡಿ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಯಾವ ಯಾವ ಘಟಕಗಳಿಗೆ ಸಹಾಯಧನ ಇರುತ್ತದೆ.ಮತ್ತು ಬೇಕಾದ ದಾಖಲೆಗಳೇನು? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೃಷಿ ಇಲಾಖೆಯ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ 2023-24 ನೇ ಯೋಜನೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಈ ಕೆಳಗೆ ನೀಡಿರುವ ಘಟಕಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಬರ ಪರಿಹಾರ ಹೇಕ್ಟರ್‍ ಎಷ್ಟು ? ಜಮಾ ಆಗಲು ರೈತರು ಏನು ಮಾಡಬೇಕು?

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಇತರೇ ಉಪಚಾರಗಳು ( PMKSY-OI) ಯೋಜನೆಯಡಿ ಕೃಷಿ ಇಲಾಖೆವತಿಯಿಂದ ನೀರು ಹಾಯಿಸುವ ಪಿವಿಸಿ (PVC Pipe) (ಬಿಳಿ ಪೈಪ್) ಲಭ್ಯವಿದ್ದು, ಶೇಕಡ 50% ರ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ( DBT) ಮೂಲಕ ಸಂದಾಯ ಮಾಡಲಾಗುವುದು

PVC Pipe (ಬಿಳಿ ಪೈಪ್) ಸಹಾಯಧನದಲ್ಲಿ ಪಡೆಯಲು ದಾಖಲೆಗಳು:
ಫಲಾನುಭವಿಗಳ ಆಧಾರ ಕಾರ್ಡ
ರೆಕಾರ್ಡ RTC
20 ರೂ ಬಾಂಡ್
ನೀರಾವರಿ ಪ್ರಮಾಣ ಪತ್ರ
ಹಿಡುವಳಿ ಪತ್ರ
ಪೋಟೋ

ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:

Diesel pumpset subsidy scheme- ಘಟಕವಾರು ಸಹಾಯಧನ ವಿವರ ಹೀಗಿದೆ:

ಹೊಸದಾಗಿ ಕೊಳವೆ ಬಾವಿಯನ್ನು ಕೊರೆಸುವವರಿಗೆ ರೂ.25000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಡೀಸೆಲ್ ಮತ್ತು ವಿದ್ಯುತ್‌ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.15000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಸೌರ/ಗಾಳಿ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.50000/- ಪ್ರೋತ್ಸಾಹ ಧನ, ನೀಡಲಾಗುವುದು.

ಪೈಪ್ ಅಳವಡಿಕೆ ಪ್ರತೀ ಹೆಕ್ಟೇರ್ ಗೆ ರೂ.10000/-ಪ್ರೋತ್ಸಾಹ ಧನ ನೀಡಲಾಗುವುದು.

ನಿಷ್ಕ್ರಿಯಗೊಂಡ ಕೊಳವೆ ಬಾವಿಗಳ ಮನಶ್ವೇತನಕ್ಕೆ ರೂ.5000/- ಪ್ರೋತ್ಸಾಹ ಧನ ನೀಡಲಾಗುವುದು.

How can apply- ಯಾರೆಲ್ಲ ಈ ಯೋಜನೆಯಡಿ ಸಹಾಯಧನ ಪಡೆಯಬವುದು?

ಈ ಯೋಜನೆಯಡಿ ಫಲಾನುಭವಿಯಾಗಲು ಕನಿಷ್ಟ 1 ಎಕರೆ ಹಾಗೂ ಗರಿಷ್ಟ 1 ಹೆಕ್ಟೇರ್ ವಿಸ್ತೀರ್ಣ ಹೊಂದಿರಬೇಕು.

ಜಂಟಿ ಪಹಣಿ ಹೊಂದಿದ್ದಲ್ಲಿ ಇತರರಿಂದ ರೂ.20 ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ ಪಡೆಯುದು.

ಪಂಚಾಯತ್ ಅಧ್ಯಕ್ಷರಿಂದ ಶೀಫಾರಸ್ಸು ಪತ್ರ

required documents for diesel pumpset scheme- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

ಜಮೀನಿನ ರೆಕಾರ್ಡ
ಅರ್ಜಿದಾರರ ಆಧಾರ್‍ ಕಾರ್ಡ
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
ಅರ್ಜಿ ನಮೂನೆ
ಅಧಿಕಾರಿಗಳು ಕೇಳುವ ಇತರೆ ದಾಖಲೆಗಳು

ಇದನ್ನೂ ಓದಿ: Agriculture equipment subsidy:ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

ವಿಶೇಷ ಸೂಚನೆ : ಈ ಯೋಜನೆಯ ಇರುವ ಜಿಲ್ಲೆಗಳಿಗೆ ಮಾತ್ರ ಈ ಮಾಹಿತಿ ಅನ್ವಹಿಸುತ್ತದೆ. ಮತ್ತು ಅನುದಾನದ ಅನುಗುಣವಾಗಿ ಅನುಷ್ಠಾನ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ : ನಿಮ್ಮ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles