Thursday, November 21, 2024

PM vishwakarma scheme-ಕೇಂದ್ರ ಸರಕಾರದಿಂದ 15 ಸಾವಿರ ಮೌಲ್ಯದ ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ!

PM vishwakarma scheme free tool kit:ಕೇಂದ್ರ ಸರಕಾರವು 15000 ಸಾವಿರ ರೂಪಾಯಿ ಮೌಲ್ಯದ ುಚಿತ ಟೂಲ್ ಕಿಟ್/ಹೊಲಿಗೆ ಯಂತ್ರ ನೀಡಲು ಅರ್ಹಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು ಎಂದು ಇಲ್ಲಿದೆ ಮಾಹಿತಿ.

ಕೇಂದ್ರ ಸರಕಾರವು ವಿಶ್ವಕರ್ಮ ಜಯಂತಿಯ ಸ್ಮರಣಾರ್ಥವಾಗಿ ಸಣ್ಣ ಉದ್ಯೋಗಿಗಳು ಮತ್ತು ನುರಿತ ಕುಶಲ ಕರ್ಮಿಗಳಿಗೆ ಉಚಿತ ತರಬೇತಿಗೆ, ಕೌಶಲ್ಯ ಆಧಾರಿತ ವಿಷಯಗಳ ಕುರಿತು ಸಲಹೆ ಮತ್ತು ಆಧುನಿಕ ತಂತ್ರಜ್ಞಾನಗಳ(modern technology) ಜ್ಞಾನದ ಜೊತೆಗೆ ನಗದು ಬೆಂಬಲವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದೆ.

ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಮತ್ತು ನಗರ ಪ್ರದೇಶ ಭಾಗದಲ್ಲಿರುವ ಬೇರೆ ಬೇರೆ ವರ್ಗದ ಒಟ್ಟು 18 ವಿಧದ ಕುಶಲ ಕರ್ಮಿಗಳಿಗೆ ರಾಜ್ಯದಲ್ಲಿರುವ ವಿವಿಧ ಕೌಶಲ್ಯ ತರಬೇತಿ ಕೇಂದ್ರಗಳ ಮುಖಾಂತರ ತರಬೇತಿಯನ್ನು ನೀಡಿ ಅದರ ಜೊತೆಗೆ 15000 ಸಾವಿರ ರೂಪಾಯಿ ಮೌಲ್ಯದ ಉಚಿತ ಟೂಲ್ ಕಿಟ್ ಹಾಗೂ ಅವರ ವೃತ್ತಿ ಕೌಶಲ್ಯದ ಕಿಟ್ ಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: PM micro food processing scheme-ಕಿರು ಆಹಾರ ಸಂಸ್ಕರಣೆ ಯೋಜನೆಯಡಿ ಕಿರು ಉದ್ಯಮ ಸ್ಥಾಪನೆಗೆ 15 ಲಕ್ಷದವರೆಗೂ ಸಹಾಯಧನ!

ಉಚಿತ ಟೂಲ್ ಕಿಟ ಅಥವಾ ಹೊಲಿಗೆ ಯಂತ್ರ ಪಡೆಯಲು ಏನು ಮಾಡಬೇಕು?

ಫಲಾನುಭವಿಗಳು ಯಾರು ಎಂದು ತಿಳಿಯಲು ಕೆಳಗೆ ನೀಡಿರುವ ಅರ್ಹತೆಗಳನ್ನು ನೋಡಿಕೊಂಡು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರೋ ಅಥವಾ ಅನರ್ಹರೋ ಎಂದು ತಿಳಿಯಬಹುದು. ನೀವು ಅರ್ಹರಿದ್ದರೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸದ ನಂತರ ಸಂಬಂಧಿಸಿದ ಇಲಾಖೆಯು ಪರಿಶೀಲನೆ ನಡೆಸಿ ಅನುಮೋದನೆ ನೀಡುತ್ತದೆ.

ಅರ್ಜಿ ಸಲ್ಲಿಸುವ ಅರ್ಹತೆಗಳು:

1)ಅರ್ಜಿ ಸಲ್ಲಿಸುವ ಫಲಾನುಭವಿ ಸರಕಾರಿ ನೌಕರನಾಗಿರಬಾರದು.

2)18 ವರ್ಷ ಮೇಲ್ಪಟ್ಟರಬೇಕು

3)ಈಯೋಜನೆಗೆ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಅವಕಾಶ.

4)ಅರ್ಜಿ ಸಲ್ಲಿಕೆ ಸಮಯದಲ್ಲಿ ಅಭ್ಯರ್ಥಿ ಕಳೆದ 5 ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ರೀತಿಯ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆದಿರಬಾರದು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಪಹಣಿ/ RTC ಗೆ ಆಧಾರ್ ಲಿಂಕ್ ಆಂದೋಲನ! ಮನೆಯಲ್ಲೇ ಕುಳಿತು ಲಿಂಕ್ ಮಾಡಲು ಇಲ್ಲಿದೆ ಮಾಹಿತಿ.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:

1)ಅರ್ಜಿದಾರನ ಆಧಾರ್ ಕಾರ್ಡ್

2)ರೇಷನ್ ಕಾರ್ಡ್

3)ಬ್ಯಾಂಕ್ ಪಾಸ್ ಬುಕ್

4)ಗ್ರಾಮ ಪಂಚಾಯತನಿಂದ ಪಡೆದ ಸ್ವ-ಉದ್ಯೋಗ ಪ್ರಮಾಣ ಪತ್ರ

5)ಅರ್ಜಿದಾರನ ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿಶ್ವ ಕರ್ಮಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮದಲ್ಲಿ ಅಥವಾ ನಿಮಗೆ ಹತ್ತಿರ ಇರುವ ಗ್ರಾಮ ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಸುದ್ದಿಗಳು

Related Articles