Thursday, November 21, 2024

PM SURYA GHAR YOJANE- ಪಿಎಂ ಸೂರ್ಯಘರ್‌ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ! ಉಚಿತ ಸೋಲಾರ್‌ ಅಳವಡಿಕೆಗೆ ಆನ್ಲೈನ್‌ ಅರ್ಜಿ ಆಹ್ವಾನ.

ಕರೆಂಟ್‌ ಬಳಕೆದಾರರನ್ನು ವಿದ್ಯುತ್‌ ನಲ್ಲಿ ಸ್ವಾವಲಂಬಿಯಾಗಿಸುವ ಕೇಂದ್ರದ ಮಹತ್ವಾಕಾಂಕ್ಷಿ “ಪ್ರಧಾನ ಮಂತ್ರಿ ಉಚಿತ ವಿದ್ಯುತ್‌ ಸೂರ್ಯಘರ್‌ ಯೋಜನೆಗೆ” ಸಾರ್ವಜನಿಕರಿಂದ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಳೆದ ಫೆಬ್ರುವರಿಯಲ್ಲಿ ಚಾಲನೆ ನೀಡಲಾದ ಸೂರ್ಯಘರ್‌ ಯೋಜನೆಯಡಿ ಕೇಂದ್ರ ಸರಕಾರವು ಗೃಹಬಳಕೆದಾರರಿಗೆ 3 ಕಿ.ವ್ಯಾ ಸಾಮರ್ಥ್ಯದವರೆಗೆ ಮನೆಯ ತಾರಸಿಯಲ್ಲಿ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಿಕೊಳ್ಳಲು ಕನಿಷ್ಠ 30 ಸಾವಿರದಿಂದ ಗರಿಷ್ಠ 78 ಸಾವಿರದವರೆಗೆ ಸಬ್ಸಿಡಿ ನೀಡುತ್ತದೆ. ಜತೆಗೆ ಮಾಸಿಕ 300 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುತ್ತದೆ.

ಈ ಯೋಜನೆಯ ಲಾಭಗಳು:

1)ಅರ್ಜಿಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ತಮ್ಮ ಸ್ವಂತ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ಕಡಿಮೆ ಬಡ್ಡಿದರದ ಸಾಲವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ:ನಿಮ್ಮದು ಇನ್ನೂ ಮುಂಗಾರು ಬೆಳೆ ಸಮೀಕ್ಷೆಆಗಿಲ್ಲವೇ ಹಾಗಿದ್ದರೇ ನಿಮಗೆ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ. ಈ ಕೂಡಲೇ ಬೆಳೆ ಸಮೀಕ್ಷೆ ಮಾಡಿಕೊಳ್ಳಿ ಇಲ್ಲಿದೆ ಅದರ ಮಾಹಿತಿ.

2)ಫಲಾನುಭವಿಗಳ ಮನೆ ಮೇಲ್ಚಾವಣಿಯ ಮೇಲೆ ಗರಿಷ್ಠ 10 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಬೇಕಾಗಿರುವ ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಸರಕಾರವು ಸೌಲಭ್ಯ ಒದಗಿಸಲಿದೆ.

3)ಮೊದಲ 3ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಶೇ.40 ಮತ್ತು ನಂತರದ ವಿದ್ಯುತ್‌ ಉತ್ಪಾದನೆಗೆ ಶೇ.20 ರಷ್ಟು ಸಬ್ಸಿಡಿಯನ್ನು ಸರಕಾರವು ಒದಗಿಸಲಿದೆ.

4)ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್‌ ಬಿಲ್‌ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್‌ ವರೆಗಿನ ಉಚಿತ್‌ ವಿದ್ಯುತ್‌ ಸಿಗಲಿದೆ.

5)ಐದು ವರ್ಷಗಳ ನಿರ್ವಹಣಾ ಗ್ಯಾರಂಟಿಯನ್ನು(maintenance) ಕೂಡ ನೀಡಲಾಗುತ್ತದೆ. ಒಂದು ವೇಳೆ ಅಗತ್ಯತೆಗಿಂತ ಹೆಚ್ಚುವರಿ ವಿದ್ಯುತ್‌ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದು.

ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು:

1)ಅರ್ಜಿ ಸಲ್ಲಿಸುವರಿಗೆ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕನಾಗಿರಬೇಕು.

2)ಕುಟುಂಬದ ವರಮಾನ ವಾರ್ಷಿಕ 1.5 ಲಕ್ಷಕ್ಕಿಂತ ಮೇಲಿರಬಾರದು.

3)ಅರ್ಜಿದಾರನ ಕುಟುಂಬದ ಸದಸ್ಯರು ಸರ್ಕಾರಿ ನೌಕರನಾಗಿರಬಾರದು.

4)ಅರ್ಜಿ ಸಲ್ಲಿಕೆದಾರನಿಗೆ ಸ್ವಂತ ಮನೆ ಹೊಂದಿರಬೇಕು.

5)ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1)ಅರ್ಜಿದಾರನ ಆಧಾರ್‌ ಕಾರ್ಡ್‌

2)ರೇ಼ಷನ್‌ ಕಾರ್ಡ್‌ (ಕುಟುಂಬ ಪಡಿತರ ಚೀಟಿ)

3)Voter ID

4)PAN CARD

5)2 PHOTOS

6)BANK PASS BOOK

7)ಕಳೆದ 6 ತಿಂಗಳ ವಿದ್ಯುತ್‌ ಬಿಲ್‌

8)ಆದಾಯ ಪ್ರಮಾಣ ಪತ್ರ

9)ವಿಳಾಸ ದೃಡೀಕರಣ ಪತ್ರ

10)ಮನೆಗೆ ಸಂಬಂದಿಸಿದ ದಾಖಲೆಗಳು

ಇದನ್ನೂ ಓದಿ:ನಿಮ್ಮ ಮಕ್ಕಳು ಉಚಿತ ಹಾಗೂ ಒಳ್ಳೆ ಗುಣಮಟ್ಟದ ಶಿಕ್ಷಣ ಪಡೆಯಬೇಕೆ? ಜವಾಹರ ನವೋದಯ 2025-26ನೇ ಸಾಲಿನ ಆನ್ಲೈನ್‌ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸುವ ಕುರಿತು ಮತ್ತು ಎಲ್ಲಿ ಸಲ್ಲಿಸಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸುವರು ಇಲ್ಲಿ ನೀಡಲಾದ Click here… ಲಿಂಕ್‌ ಬಳಸಿ ಪೋರ್ಟಲ್‌ ಪ್ರವೇಶ ಮಾಡಬೇಕು.

1)PM-SURYA GHAR-MUTF BIJLI YOJANA NATIONAL PORTAL ತೆರೆದುಕೊಳ್ಳುತ್ತದೆ. ಹೋಂ ಪೇಜ್ ನಲ್ಲಿ ಕಾಣುವ APPLY FOR ROOFTOP ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಿರಿ.

2)ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿಮಾಡಿ, ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿ.

3)ಅರ್ಜಿ ಸಲ್ಲಿಕೆಯ ಬಳಿಕ ವಿದ್ಯುತ್‌ ಸರಬರಾಜು ಕಂಪನಿಯಿಂದ ಅನುಮೋದನೆ ಬಂದ ನಂತರ ಗ್ರಾಹಕರಿಂದ ಪ್ಲಾಂಟ್‌ ಪಡೆದು ಅಳವಡಿಸಿಕೊಳ್ಳಬೇಕು.

4)ಸೇವಾ ಸಿಂಧು ಸೈಬರ್‌ ಗಳಲ್ಲಿ ಅರ್ಜಿ ಸಲ್ಲಿಸಬಹುದು.

ಇದರ ಇನ್ನೂ ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಎಸ್ಕಾಂ ಕಛೇರಿಗಳಿಗೆ ಭೇಟಿ ಮಾಡಿ ವಿಚಾರಿಸಿ.(ಪ್ಲಾಂಟ್‌ ಅಳವಡಿಕೆ ಕುರಿತು)

ಇತ್ತೀಚಿನ ಸುದ್ದಿಗಳು

Related Articles