Thursday, November 21, 2024

PM-surya ghar yojana-ಪಿಎಮ್ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಲ್ಲಿ ಅವಕಾಶ!

ಕೇಂದ್ರ ಸರಕಾರವು ದೇಶದಲ್ಲಿ ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಫಲಕಗಳನ್ನು (surya ghar yojana) ಅಳವಡಿಸುವ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ (surya ghar yojana) ಯಾರೆಲ್ಲ ಅರ್ಜಿ ಸಲ್ಲಿಸಿ  ಪ್ರಯೋಜನವನ್ನು ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏವೆಲ್ಲ  ಬೇಕಾಗುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ.

ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ. ನಿರ್ವಹಣೆ ವೆಚ್ಚ ಕೂಡಾ ತೀರಾ ಕಡಿಮೆ. ಈ ಯೋಜನೆಯೂ 2 ಕಿಲೋ ವ್ಯಾಟ್ ಸಾಮರ್ಥ್ಯದವರೆಗಿನ ಸೌರ ಘಟಕದ ವೆಚ್ಚ 60% ಮತ್ತು 2 ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ 40% ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ:ಈ ಇಲಾಖೆಗಳಿಂದ ಜನರಿಗೆ ವಿವಿಧ ಯೋಜನೆಯಡಿ ಹಣ ಬರುವ ಯೋಜನೆಗಳಿವೆ! ಅದರ ಮಾಹಿತಿ ತಿಳಿಯಿರಿ.

PM surya ghar subsidy details-ಪಿಎಂ ಸೂರ್ಯಘರ್ ಯೋಜನೆಯ ಸಬ್ಸಿಡಿ ಮೊತ್ತ ಎಷ್ಟು?

1)1ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ನೀಡಲಾಗುತ್ತದೆ.

2)2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನೀಡಲಾಗುತ್ತದೆ.

3)3ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ಸಬ್ಸಿಡಿ ನೀಡಲಾಗುತ್ತದೆ.

How can apply for pm surya ghar-ಪಿಎಂ ಸೂರ್ಯಘರ್ ಯೋಜನೆ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1)ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು.

2)ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಚಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರಬೇಕು.

3)ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.

4)ಮನೆಯವರು ಸೋಲಾರ್ ಪ್ಯಾನೆಲ್ ಗಳಿಗೆ ಬೇರೆ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು.

ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿಕೊಳ್ಲಲು ಇನ್ನೂ ಅವಕಾಶವಿದೆ! ತಪ್ಪದೇ ಮಾಡಿಕೊಳ್ಳಿ ಇಲ್ಲಿದೆ ಅದರ ಮಾಹಿತಿ.

How can apply for pm surya ghar-ಎಲ್ಲಿ ಅರ್ಜಿ ಸಲ್ಲಿಸಬೇಕು ನಿಮಗೆ ಗೊತ್ತೆ?

ನಿಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ, ಕರ್ನಾಟಕ ಒನ್, ಸೇವಾ ಕೇಂದ್ರ ಸೈಬರ್ ಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಎಸ್ಕಾಂ(KEB) ಕಛೇರಿಯನ್ನು ಭೇಟಿ ಮಾಡಿ ವಿಚಾರಿಸಿ.

pm surya ghar-ಅಧಿಕೃತ ವೆಬ್ಸೈಟ್:Click here…

ಇತ್ತೀಚಿನ ಸುದ್ದಿಗಳು

Related Articles