Saturday, October 5, 2024

PM-Surya Ghar-Muft Bijli Yojana-ಮನೆ ಮನೆಗೂ ಉಚಿತ ಸೋಲಾರ್‌ ವಿದ್ಯುತ್‌ ಅಳವಡಿಕೆಗೆ ಅರ್ಜಿಸಲ್ಲಿಸಲು ಅವಕಾಶ. ಇಲ್ಲಿದೆ ಲಿಂಕ್.‌

ಕೇಂದ್ರ ಸರಕಾರವು ಬಡವರ ಮೇಲಿನ ವಿದ್ಯುತ್‌ ಬಿಲ್‌ ಹೊರೆ ಕಡಿಮೆ ಮಾಡಲು ಹಾಗೂ ಸೋಲಾರ್‌ ವಿದ್ಯುತ್‌ ಬಳಕೆಗೆ ಉತ್ತೇಜನ ನೀಡಲು ಸುಮಾರು 75000 ಕೋಟಿಗೂ ಅಧಿಕ ಹಣವನ್ನು ವೆಚ್ಚಮಾಡಿ ಕೇಂದ್ರ ಸರಕಾರವು ʼಪ್ರಧಾನ ಮಂತ್ರಿ ಸೂರ್ಯಘರ್‌ ಉಚಿತ ವಿದ್ಯುತ್‌ ಯೋಜನೆʼ ಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗೆ ಎಲ್ಲಿ ಅರ್ಜಿಸಲ್ಲಿಸಬೇಕು ಹಾಗೂ ಯಾರು ಅರ್ಜಿ ಸಲ್ಲಿಸಲು ಅರ್ಹರು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ಒಂದು ಯೋಜನೆಯನ್ನು ಕೇಂದ್ರ ಸರಕಾರವು ಕಳೆದ ಫೆಬ್ರುವರಿ 13.2024 ರಂದು ಜಾರಿಗೆ ತಂದಿರುತ್ತದೆ. ಈ ಯೋಜನೆಯು ಭಾರತದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ದೇಶದ ಜನರ ವಿದ್ಯುತ್‌ ಬಿಲ್‌ನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. 2024-25ನೇ ಸಾಲಿನಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು 10 ಸಾವಿರ ಕೋಟಿ ರೂಪಾಯಿಯ ಹಣವನ್ನು ಮೀಸಲಿಡಲಾಗಿದೆ.

ಈ ಯೋಜನೆಯ ಲಾಭಗಳು:

1)ಅರ್ಜಿಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ತಮ್ಮ ಸ್ವಂತ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ಕಡಿಮೆ ಬಡ್ಡಿದರದ ಸಾಲವನ್ನು ನೀಡಲಾಗುತ್ತಿದೆ.

2)ಫಲಾನುಭವಿಗಳ ಮನೆ ಮೇಲ್ಚಾವಣಿಯ ಮೇಲೆ ಗರಿಷ್ಠ 10 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಬೇಕಾಗಿರುವ ಸೌರಫಲಕಗಳನ್ನು ಅಳವಡಿಸಿಕೊಳ್ಳಲು ಸರಕಾರವು ಸೌಲಭ್ಯ ಒದಗಿಸಲಿದೆ.

ಇದನ್ನೂ ಓದಿ: ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು ಆ್ಯಪ್ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೆ ಮಾಡಿಕೊಳ್ಳಿ.

3)ಮೊದಲ 3ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಶೇ.40 ಮತ್ತು ನಂತರದ ವಿದ್ಯುತ್‌ ಉತ್ಪಾದನೆಗೆ ಶೇ.20 ರಷ್ಟು ಸಬ್ಸಿಡಿಯನ್ನು ಸರಕಾರವು ಒದಗಿಸಲಿದೆ.

4)ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್‌ ಬಿಲ್‌ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್‌ ವರೆಗಿನ ಉಚಿತ್‌ ವಿದ್ಯುತ್‌ ಸಿಗಲಿದೆ.

5)ಐದು ವರ್ಷಗಳ ನಿರ್ವಹಣಾ ಗ್ಯಾರಂಟಿಯನ್ನು(maintenance) ಕೂಡ ನೀಡಲಾಗುತ್ತದೆ. ಒಂದು ವೇಳೆ ಅಗತ್ಯತೆಗಿಂತ ಹೆಚ್ಚುವರಿ ವಿದ್ಯುತ್‌ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಇಕೆವೈಸಿ(Ekyc)ಆಗದೆ ಇರುವ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಉಂಟೇ, ಚೆಕ್ ಮಾಡಿಕೊಳ್ಳಿ.

ಈ ಯೋಜನೆಗೆ ಯಾರೆಲ್ಲ ಅರ್ಜಿ ಹಾಕಬಹುದು:

1)ಅರ್ಜಿ ಸಲ್ಲಿಸುವರಿಗೆ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕನಾಗಿರಬೇಕು.

2)ಕುಟುಂಬದ ವರಮಾನ ವಾರ್ಷಿಕ 1.5 ಲಕ್ಷಕ್ಕಿಂತ ಮೇಲಿರಬಾರದು.

3)ಅರ್ಜಿದಾರನ ಕುಟುಂಬದ ಸದಸ್ಯರು ಸರ್ಕಾರಿ ನೌಕರನಾಗಿರಬಾರದು.

4)ಅರ್ಜಿ ಸಲ್ಲಿಕೆದಾರನಿಗೆ ಸ್ವಂತ ಮನೆ ಹೊಂದಿರಬೇಕು.

5)ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:

1)ಅರ್ಜಿದಾರನ ಆಧಾರ್‌ ಕಾರ್ಡ್‌

2)ರೇ಼ಷನ್‌ ಕಾರ್ಡ್‌ (ಕುಟುಂಬ ಪಡಿತರ ಚೀಟಿ)

3)Voter ID

4)PAN CARD

5)2 PHOTOS

6)BANK PASS BOOK

7)ಕಳೆದ 6 ತಿಂಗಳ ವಿದ್ಯುತ್‌ ಬಿಲ್‌

8)ಆದಾಯ ಪ್ರಮಾಣ ಪತ್ರ

9)ವಿಳಾಸ ದೃಡೀಕರಣ ಪತ್ರ

10)ಮನೆಗೆ ಸಂಬಂದಿಸಿದ ದಾಖಲೆಗಳು

ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು?

ಈ ಯೋಜನೆಗೆ ಅರ್ಜಿ ಸಲ್ಲಿಸುವರು ಇಲ್ಲಿ ನೀಡಲಾದ Click here… ಲಿಂಕ್‌ ಬಳಸಿ ಪೋರ್ಟಲ್‌ ಪ್ರವೇಶ ಮಾಡಬೇಕು.

1)PM-SURYA GHAR-MUTF BIJLI YOJANA NATIONAL PORTAL ತೆರೆದುಕೊಳ್ಳುತ್ತದೆ. ಹೋಂ ಪೇಜ್ ನಲ್ಲಿ ಕಾಣುವ APPLY FOR ROOFTOP ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಿರಿ.

2)ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿಮಾಡಿ, ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿ.

3)ಅರ್ಜಿ ಸಲ್ಲಿಕೆಯ ಬಳಿಕ ವಿದ್ಯುತ್‌ ಸರಬರಾಜು ಕಂಪನಿಯಿಂದ ಅನುಮೋದನೆ ಬಂದ ನಂತರ ಗ್ರಾಹಕರಿಂದ ಪ್ಲಾಂಟ್‌ ಪಡೆದು ಅಳವಡಿಸಿಕೊಳ್ಳಬೇಕು.

4)ಸೇವಾ ಸಿಂಧು ಸೈಬರ್‌ ಗಳಲ್ಲಿ ಅರ್ಜಿ ಸಲ್ಲಿಸಬಹುದು.

ಇದರ ಇನ್ನೂ ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಎಸ್ಕಾಂ ಕಛೇರಿಗಳಿಗೆ ಭೇಟಿ ಮಾಡಿ ವಿಚಾರಿಸಿ.(ಪ್ಲಾಂಟ್‌ ಅಳವಡಿಕೆ ಕುರಿತು)

ಇತ್ತೀಚಿನ ಸುದ್ದಿಗಳು

Related Articles