Wednesday, March 12, 2025

PM-sooryaghar yojana-PM ಸೂರ್ಯಘರ್ ವಿದ್ಯುತ್ ಯೋಜನೆಗೆ ಆನ್ಲೈನ್ ಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

ಕೇಂದ್ರ ಸರಕಾರವು ದೇಶದ ಮನೆಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ಘಟಕಗಳನ್ನು (surya ghar yojana) ಅಳವಡಿಸುವ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ ನೈಸರ್ಗಿಕ ಬೆಳಗಿನ ಉಪಯೋಗ ಬಳಕೆ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ (surya ghar yojana) ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವೆಲ್ಲ  ಬೇಕಾಗುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ.

ಕೇಂದ್ರ ಸರಕಾರದ ಪಿಎಂ ಸೂರ್ಯಘರ್ ಮುಪ್ತಬಿಜ್ಲಿ ಯೋಜನೆಯು ಕಳೆದ ಫೆಬ್ರುವರಿ 13 ರಂದು ಒಂದು ವರ್ಷವನ್ನು ಪೂರೈಸಿದ್ದು, ಅದರ ಬೇಡಿಕೆ ಏರಿಕೆ ಆಗಿರುವ ಕಾರಣ ಈ ಯೋಜನೆಯನ್ನು ಈ ವರ್ಷವು ಕೇಂದ್ರ ಸರ್ಕಾರವು ಮುಂದುವರಿಸಲಿದ್ದು, ಈ ಯೋಜನೆಯ ಆಸಕ್ತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:ರೈತರ ಮಕ್ಕಳಿಗೆ ಉಚಿತ ತೋಟಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ. ನಿರ್ವಹಣೆ ವೆಚ್ಚ ಕೂಡಾ ತೀರಾ ಕಡಿಮೆ. ಈ ಯೋಜನೆಯೂ 2 ಕಿಲೋ ವ್ಯಾಟ್ ಸಾಮರ್ಥ್ಯದವರೆಗಿನ ಸೌರ ಘಟಕದ ವೆಚ್ಚ 60% ಮತ್ತು 2 ರಿಂದ 3 ಕಿಲೋ ವ್ಯಾಟ್ ಸಾಮರ್ಥ್ಯತದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ 40% ಸಹಾಯಧನ ನೀಡಲಾಗುತ್ತದೆ.

PM surya ghar subsidy details-ಪಿಎಂ ಸೂರ್ಯಘರ್ ಯೋಜನೆಯ ಸಬ್ಸಿಡಿ ಮೊತ್ತ ಎಷ್ಟು?

1)1ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ನೀಡಲಾಗುತ್ತದೆ.

2)2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನೀಡಲಾಗುತ್ತದೆ.

3)3ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ಸಬ್ಸಿಡಿ ನೀಡಲಾಗುತ್ತದೆ.

How can apply for pm surya ghar-ಪಿಎಂ ಸೂರ್ಯಘರ್ ಯೋಜನೆ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1)ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು.

2)ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಚಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರಬೇಕು.

3)ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.

ಇದನ್ನೂ ಓದಿ: ಕಿಸಾನ್ ಯೋಜನೆಯ 19ನೇ ಕಂತು ಬಿಡುಗಡೆ ನಿಮಗೆ ಬಂತಾ ತಿಳಿದುಕೊಳ್ಳಿ!

4)ಮನೆಯವರು ಸೋಲಾರ್ ಪ್ಯಾನೆಲ್ ಗಳಿಗೆ ಬೇರೆ ಯಾವುದೇ ಸಬ್ಸಿಡಿಯನ್ನು ಪಡೆದಿರಬಾರದು.

How can apply for pm surya ghar-ಎಲ್ಲಿ ಅರ್ಜಿ ಸಲ್ಲಿಸಬೇಕು ನಿಮಗೆ ಗೊತ್ತೆ?

ನಿಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ, ಕರ್ನಾಟಕ ಒನ್, ಸೇವಾ ಕೇಂದ್ರ ಸೈಬರ್ ಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಸೂಚನೆ: ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಎಸ್ಕಾಂ(KEB) ಕಛೇರಿಯನ್ನು ಭೇಟಿ ಮಾಡಿ ವಿಚಾರಿಸಿ.

Online application link here… pm surya ghar muft bijli

ಇತ್ತೀಚಿನ ಸುದ್ದಿಗಳು

Related Articles