Thursday, November 21, 2024

PM KISAN Status-ಜೂನ್‌ 18 ರಂದು ಬಿಡುಗಡೆಯಾದ 17ನೇ ಕಂತಿನ  ಪಿ ಎಂ ಕಿಸಾನ್‌ ಹಣ ನಿಮಗೆ ಬಂತೆ! ಚೆಕ್‌ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ.

ಕೇಂದ್ರ ಸರಕಾರವು ಇದೇ ತಿಂಗಳು ಜೂನ್‌ 18 ರಂದು ದೇಶದ 9.3 ಕೋಟಿ ಜನ ರೈತರಿಗೆ ಕಿಸಾನ ಸಮ್ಮಾನ್‌ ನಿಧಿ ಯೋಜನೆಯಡಿ ರೂ.2000 ಹಣವನ್ನು ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗಿದೆ. ಈ ಹಣವು ಯಾರಿಗೆಲ್ಲ ಜಮೆ ಯಾಗಿದೆ ಹಾಗೂ ಯಾವ ಖಾತೆಗೆ ಜಮೆಯಾಗಿದೆ ಎಂದು ನೋಡಲು ಈ ಲೇಖನದಲ್ಲಿ ತಿಳಿಸಲಾಗುವುದು.

ಕೇಂದ್ರ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾದ ಕಿಸಾನ ಸಮ್ಮಾನ ನಿಧಿ ಯೋಜನೆಯನ್ನು ರೈತರ ಕಷ್ಠ ಸಮಯದಲ್ಲಿ ಬೀಜ ಗೊಬ್ಬರಗಳ ಖರೀದಿಸಲು ಹಾಗೂ ಕೃಷಿ ಸಲಕರಣೆಗಳನ್ನು ಖರೀದಿಸಲು ವರ್ಷಕ್ಕೆ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ರೂ.2000 ಹಣವನ್ನು ರೈತರ ಖಾತೆಗೆ ಹಾಕಲಾಗುತ್ತಿದೆ. ಈ ಹಣವು ನಿಮಗೆ ಜಮೆ ಯಾಗಿದೇ ಇಲ್ಲವೇ ಎಂದು ತಿಳಿಯಲು ಇಲ್ಲಿದೆ ಮಾಹಿತಿ.

ಪಿ ಎಂ ಕಿಸಾನ್‌ ಯೋಜನೆಯ 17ನೇ ಕಂತಿನ ಹಣವನ್ನು ದೇಶದ 9.3 ಕೋಟಿ ರೈತರಿಗೆ ಮೊನ್ನೆ ಜೂನ್‌ 18 ರಂದು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಹಣ ವರ್ಗಾವಣೆ ಪ್ರಕ್ರಿಯವು ಸುಮಾರು 10 ದಿನಗಳ ವರೆಗೆ ನಡೆಯಲಿದೆ. ಆದ್ದರಿಂದ ರೈತರು ನಿಮ್ಮ ಹಣ ಬಂದಿಲ್ಲ ಎಂದು ಕೂಡಲೇ ನೀವು ಇಲಾಖೆಗಳಿಗೆ ಭೇಟಿ ಮಾಡದೆ 10-15 ದಿನಗಳು ಕಳೆದು ನಂತರ ಹಣ ಬರದೇ ಇದ್ದಲ್ಲಿ ಇಲಾಖೆಗಳಿಗೆ ಚೆಕ್‌ ಮಾಡಲು ಹೋಗಬಹುದು. ಅಥವಾ ಈ ಕೆಳಗೆ ನೀಡಿರುವ ಮಾಹಿತಿ ಪ್ರಕಾರ ನಿಮ್ಮ ಮೊಬೈಲ್‌ ನಲ್ಲಿ ಹಣ ಜಮೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಪಹಣಿ/ RTC ಗೆ ಆಧಾರ್ ಲಿಂಕ್ ಆಂದೋಲನ! ಮನೆಯಲ್ಲೇ ಕುಳಿತು ಲಿಂಕ್ ಮಾಡಲು ಇಲ್ಲಿದೆ ಮಾಹಿತಿ.

ಹಣ ಜಮೆ ಕುರಿತು ತಿಳಿದುಕೊಳ್ಳುವ ವಿಧಾನ:

ರೈತರಿಗೆ ಪಿ ಎಂ ಕಿಸಾನ ಯೋಜನೆಯ ಹಣವು ಯಾವ ಬ್ಯಾಂಕ್‌ ಗೆ ಜಮೆಯಾಗಿದೆ ಯಾವ ದಿನಾಂಕ ಜಮೆಯಾಗಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ. ಕೆಲವು ಜನಕ್ಕೆ ಹಣ ಜಮೆಯಾಗಿದ್ದರು ಅದು ಅವರ ಗಮನಕ್ಕೆ ಬರದೆ ಸುಮ್ಮನೆ ಇಲಾಖೆಗಳಿಗೆ ಬೇಟಿ ಮಾಡುತ್ತಾರೆ.

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕನ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಮೇಲೆ ಕ್ಲಿಕ್ ಮಾಡಿ.

ವಿಧಾನ-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆದುಕೊಳ್ಳಬೇಕು.

ಇದನ್ನೂ ಓದಿ: PM micro food processing scheme-ಕಿರು ಆಹಾರ ಸಂಸ್ಕರಣೆ ಯೋಜನೆಯಡಿ ಕಿರು ಉದ್ಯಮ ಸ್ಥಾಪನೆಗೆ 15 ಲಕ್ಷದವರೆಗೂ ಸಹಾಯಧನ!

ವಿಧಾನ-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಕಂತಿನ ಹಣದ ವಿವರ ಇರುತ್ತದೆ. ಒಂದು ವೇಳೆ ನಿಮಗೆ ಹಣ ಇನ್ನೂ ಜಮೆಯಾಗಿಲ್ಲವಾದರೆ ಹತ್ತಿರದ ಕೃಷಿ ಇಲಾಖೆಗೆ ಭೆಟಿ ಮಾಡಿ ವಿಚಾರಿಸಿ.

ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ನೋಡಲು ಇಲ್ಲಿದೆ ಲಿಂಕ್ CLICK HERE…

ಇತ್ತೀಚಿನ ಸುದ್ದಿಗಳು

Related Articles