Friday, October 18, 2024

PM Kisan Scheme: ನಿಮ್ಮ ಪಿಎಂ ಕಿಸಾನ್ ಯೋಜನೆ ಜಾಲ್ತಿಯಲ್ಲಿ ಇದೆಯೇ Or ರದ್ದಾಗಿದೆಯೇ ಪರೀಕ್ಷಿಸಿಕೊಳ್ಳಿ.

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ರೈತಾಪಿ ವರ್ಗಕ್ಕೆ 4 ತಿಂಗಳಿಗೆ ಒಮ್ಮೆ ಎರಡೂ ಸಾವಿರದಂತೆ ವಾರ್ಷಿಕ 6000 ಸಾವಿರ ರೂಪಾಯಿಗಳ ಸಹಾಯಧನವನ್ನು ಕೃಷಿ ಚಟುವಟಿಕೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ನೀಡುತ್ತಿರುತ್ತದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ 15 ಕಂತುಗಳು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿರುತ್ತದೆ.

ಮುಂದುವರೆದು ..ಕೆಲವೊಂದಿಷ್ಟು ರೈತರಿಗೆ ಈ ಹಿಂದೆ ಬರುತ್ತಿದ್ದ ಹಣ ಈಗ ಬರುತ್ತಿಲ್ಲ, ಹಾಗಾದರೆ ಅದಕ್ಕೆ ಕಾರಣ ಏನು ಎಂಬುದನ್ನು ಆನ್ನೈನ್ ಮೂಲಕ ಹೇಗೆ ಚೆಕ್ ಮಾಡುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಹಂತ:1: ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅಥವಾ Chrome app ನಲ್ಲಿ PMKISAN FRUITS ಅಂತ ಸರ್ಚ್ ಬಾರ್‍ ನಲ್ಲಿ ಟೈಪ್ ಮಾಡಿ.
https://fruitspmk.karnataka.gov.in/

ಹಂತ: 2 :ಆಗ ಬರುವಂತಹ ಆಯ್ಕೆಗಳಲ್ಲಿ GET DETAILS BY AADHAR ಆಯ್ಕೆಯನ್ನು ಆಯ್ಕೆ ಮಾಡಿ. ಅದರ ಮೇಲೆ ಓತ್ತಿ . https://fruitspmk.karnataka.gov.in/MIS Report/GetDetailsByAadhaar.aspx

ಹಂತ: 3: ಇಲ್ಲಿ ನಿಮ್ಮ 12 ಸಂಖ್ಯೆ ಆಧಾರ ನಂಬರ್‍ ಹಾಕಿ.ಅಲ್ಲಿ ದೊರೆಯುವ PMK ID ಪಡೆದುಕೊಂಡು ಅಥವಾ ಕಾಪಿ ಮಾಡಿಕೊಂಡು ಮತ್ತೆ ಮರಳಿ ನೀವು ಪಿಎಂ ಕಿಸಾನ್ ಫೂಟ್ಸ್ ಯೋಜನೆಯ ಹೋಂ ಪೇಜ್ ಗೆ ಹೋಗಬೇಕು.

ಹಂತ: 4: ಆ ಒಂದು ಪೇಜ್ ನಲ್ಲಿ ಕಾಣುವಂತಹ ಸ್ಥಿತಿ ಪರಿಶೀಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಫಿ ಮಾಡಿರುವ PMKID number ನಮೂದಿಸುವ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹಣ ಯಾವ ಕಾರಣಗಳಿಂದಾಗಿ ನಿಂತಿದೆ ಎಂಬುದನ್ನು ಆನ್ನೈನ್ ಮೂಲಕ ನೋಡಬಹುದಾಗಿರುತ್ತದೆ. https://fruitspmk.karnataka.gov.in/.

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

ಕೇಂದ್ರ ಸರಕಾರದ ಹಣ ಪಾವತಿ ಆಗಿರುವುದನ್ನು ತಿಳಿಯಲು
ರೈತರು ತಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಬೇಕು ಅದರಲ್ಲಿ www.pmkisan.gov.in ವೆಬ್ಸೈಟ್ ಓಪನ್ ಮಾಡಿದಾಗ pmkisan.gov.in/beneficiary Status ಅನ್ನು ಆಯ್ಕೆ ಮಾಡಬೇಕು.
ನಂತರ ನಿಮ್ಮ ಮೊಬೈಲ್ ನಂಬರ್ or ರಿಜಿಸ್ಟ್ರೇಷನ್ ನಂಬರ್ ನಮೂದಿಸಬೇಕಾಗಿರುತ್ತದೆ. ವೆಬ್ಸೈಟ್ನ ಡ್ಯಾಶ್ ಬೋರ್ಡ್ ನಲ್ಲಿಯ ಸ್ಥಿತಿಪರಿಶೀಲನೆಯಲ್ಲಿ ಪಡೆಯಬಹುದು .ಅರ್ಹ ಬಲ ಫಲಾನುಭವಿಗಳು:

.
ಅಲ್ಲಿ ಕಾಣಿಸುವ ಕ್ಯಾಪ್ಚರ್ ನಮೂದಿಸಬೇಕು. ನಂತರ benificiary status ಓಪನ್ ಆಗುತ್ತದೆ.
ಅಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಇದನ್ನೂ ಓದಿ: free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹಣ ರದ್ದಾಗಲು ಕಾರಣಗಳು:
ಅನರ್ಹ ಫಲಾನುಭವಿಗಳ ಕಾರಣಗಳು:
ಈ ಅಂಕಣದಲ್ಲಿ Ineligible After Bhoomi verification ಅಂತ ಇರುತ್ತದೆ.
1/02/2019 ರ ನಂತರ ಭೂ ಸ್ವಾಧೀನ(ಕ್ರಯ, ದಾನ,ವಿಭಾಗ, ವಿಭಜನೆ, ಭೂ ಪರಿವರ್ತನೆ ಈ ಕಾರಣ ಇರಬಹುದು)
Income Tax Pay ಕಾರಣ ಇರಬಹುದು.
Eligibility : no ಅಂತ ನಮುದಾಗಿರುತ್ತದೆ.
Adhar Demo Authentication Status: no ಅಂತ ನಮುದಾಗಿರುತ್ತದೆ.
PFMS / Bank status:
Account details is under revalition process with bank
Farmer Record has been rejected by PFMS / BANK
NPCI issue is not active
Land Seeding – No
Ekyc – No
ಈ ಮೇಲೆ ಕಾಣಿಸಿದ ಸೂಚನೆಗಳು ಕಂಡು ಬಂದರೆ ಆ ಫಲಾನುಭವಿಗಳು ಈ ಯೋಜನೆಗೆ ಅನರ್ಹರಾಗಿದ್ದಾರೆ ಎಂಬುದು ತೋರಿಸುತ್ತದೆ.

ಅರ್ಹರಾಗಿದ್ದರೆ ಯಾವ ರೀತಿ ಗೋಚರಿಸುತ್ತದೆ:
Eligibility ಅಂಕಣದಲ್ಲಿ
Adhar Demo Authentication Status,PFMS/Status,Land seeding, ekyc demo ಈ ಎಲ್ಲಾ ಅಂಕಣದಲ್ಲಿ yes ಅಂತ ಇದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ

ಇದನ್ನೂ ಓದಿ: ರೈತರಿಗೆ ಪ್ರತಿ ಕ್ವಿ ಗೆ 3846 ರೂಗೆ ರಾಗಿ ಖರೀದಿಗೆ ನೋಂದಣಿ:

ಇತ್ತೀಚಿನ ಸುದ್ದಿಗಳು

Related Articles