Thursday, November 21, 2024

ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ:

ಆತ್ಮೀಯ ಪಿ.ಎಂ.ಕಿಸಾನ್ ಫಲಾನುಭವಿಗಳೇ ನಿಮಗೆ ಈ ಯೋಜನೆಯಡಿ ಹಲವಾರು ಸಮಸ್ಯೆಗಳು ಇದ್ದರೂ ಸರಿಯಾದ ಮಾಹಿತಿ ದೊರೆತ್ತಿರುವುದಿಲ್ಲ. ದೊರೆತರು ಆ ಕಾರಣ ಅಲ್ಲವೋ ಅನ್ನೋ ಅನುಮಾನ ಈ ಅನುಮಾನವನ್ನು ಸರಿಪಡಿಸಲು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇವೆ.

1.2019 ರಲ್ಲಿ ಹಣ ಜಮಾ ಆಗಿದೆ ಇವಾಗ ಸಂದಾಯವಾಗುತ್ತಿಲ್ಲ?
2.ಫಲಾನುಭವಿಗಳ ಸ್ಟೇಟಸ್ (beneficiary status )ಪರಿಶೀಲಿಸಿದಾಗ UTR No,ಜಮಾ ಆಗಿರುವುದು ಕಾಣುತ್ತದೆ.ಆದರೆ ಖಾತೆಗೆ ಜಮಾ ಆಗಿರುವುದಿಲ್ಲ?
3.ಸರ್ಕಾರ ಪರಿಶೀಲನೆ ಮಾಡುವಾಗ ಅನುಸರಿಸುವ ಕ್ರಮಗಳೇನು?

ಇದನ್ನೂ ಓದಿ: E-Kyc ಆಗದವರ ಲಸ್ಟ್ ಬಿಡುಗಡೆ! ಆಧಾರ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ! ಇಲ್ಲವಾದರೆ ಈ ಕಂತಿನ ಹಣ ನಿಮಗೆ ಸಿಗಲ್ಲ!

1.2019 ರಲ್ಲಿ ಹಣ ಜಮಾ ಆಗಿದೆ, ಇವಾಗ ಸಂದಾಯವಾಗುತ್ತಿಲ್ಲ?


ಪಿ ಎಂ ಕಿಸಾನ್ ಯೋಜನೆ ಪ್ರಾರಂಭವಾದ ವರ್ಷ 2019, ಈ ಯೋಜನೆಯ ಫಲಾನುಭವಿಗಳಿಗೆ 2019 ರಲ್ಲಿ ಒಂದು ವರ್ಷ ಹಣ ಜಮಾ ಆಗಿರುತ್ತದೆ ಅಥವಾ 2-3 ಕಂತು ಜಮಾ ಆಗಿ ಸದ್ಯ ನಿಲ್ಲಿಸಿದ್ದಾರೆ. ಕಾರಣ ಏನ್ನಿರಬಹುದು.

2019 ರಲ್ಲಿ ನೋಂದಣಿ ಮಾಡಲು ಫಲಾನುಭವಿಗಳು ನೀಡಿರುವ ದಾಖಲೆಗಳಾದ ಆಧಾರ ಕಾರ್ಡ, ಬ್ಯಾಂಕ್ ಪಾಸ್, ಜಮೀನಿನ ಪಹಣಿ (ರೆಕಾರ್ಡ) ನಲ್ಲಿ ಯಾವುದಾದರೂ ಬದಲಾವಣೆ ಆಗಿರುತ್ತದೆ. ಉದಾ: ಆಧಾರ ಕಾರ್ಡ ನಲ್ಲಿ ಹೆಸರು ಬದಲಾವಣೆ, ಮೊಬೈಲ್ ನಂಬರ್‍, ಪೋಟೋ,ವಿಳಾಸ ಬದಲಾವಣೆ ಆಗಿದ್ದರೆ, ಅದನ್ನು farmer registation ನಲ್ಲಿ ಬದಲಾವಣೆಗೆ ಅವಕಾಶವಿರುತ್ತದೆ.
1.ಬ್ಯಾಂಕ್ ಪಾಸಬುಕ್ ಖಾತೆಯ ಆಧಾರ ಜೋಡಣೆ ,ಪಾನ್ ಕಾರ್ಡ ಜೋಡಣೆ, ಆಧಾರ್‍ seeding,ಮತ್ತು NPCI Active ಇರದ ಕಾರಣ ಹಣ ತಡೆಹಿಡಿಯಲಾಗಿರುತ್ತದೆ. ಬ್ಯಾಂಕ್ ಗೆ ಭೇಟಿ ನೀಡಿ ಬದಲಾವಣೆ ಮಡಿಸಬಹುದು.
2.ರೆಕಾರ್ಡನಲ್ಲಿ 1/02/2019 ರ ನಂತರ ನಿಮ್ಮ ಜಮೀನಿನ ಪಹಣಿಯಲ್ಲಿ ಬದಲಾವಣೆ ಹೊಂದಿದ್ದರೆ ಉದಾ:2019 ರ ಇಚೆಗೆ ಕ್ರಯ, ವಿಭಾಗ, ದಾನ ಮತ್ತು ಹಕ್ಕು ಬದಲಾವಣೆ ಮಾಡಿಸಿದ್ದರೆ. ಅಂತಹ ರೈತರಿಗೆ ಹಣ ಜಮಾ ಆಗುವುದಿಲ್ಲ.

3.ನೋಂದಣಿಯಾದ ಸರ್ವೆ, ನಂಬರನಲ್ಲಿ ಸ್ವಲ್ಪ ಭಾಗ ಮಾರಾಟ ಮಾಡಿ ಇನ್ನೂ ಸ್ವಲ್ಪ ಭಾಗ ನಿಮ್ಮ ಹೆಸರಿಗೆ ಇದ್ದು ಸರ್ವೆ, ನಂಬರ್‍ ಅಥವಾ ಹಿಸ್ಸಾ ಬದಲಾವಣೆ ಆಗಿದ್ದರೆ,ಹಣ ಜಮಾ ಆಗುವುದಿಲ್ಲ.

2.ಫಲಾನುಭವಿಗಳ ಸ್ಟೇಟಸ್ (beneficiary status )ಪರಿಶೀಲಿಸಿದಾಗ UTR No,ಜಮಾ ಆಗಿರುವುದು ಕಾಣುತ್ತದೆ.ಆದರೆ ಖಾತೆಗೆ ಜಮಾ ಆಗಿರುವುದಿಲ್ಲ?
ಕಾರಣ

ನೋಂದಣಿಯಾದ ದಾಖಲೆಗಳು ಬದಲಾವಣೆ ಆಗಿರುವುದಕ್ಕೆ ಈ ರೀತಿ ಕಾಣಿಸುತ್ತದೆ.
1.ಬ್ಯಾಂಕ್ ನಲ್ಲಿ NPCI active ಆಗಿರದ ಕಾರಣ.
2.ಮುಖ್ಯವಾಗಿ ನೋಂದಣಿ ತಂತ್ರಾಂಶಗಳಾದ Fruits PM Kisan ನಲ್ಲಿ ನೋಂದಣಿಯಾಗಿ farmer registation (fruits) ಜಮೀನಿನ ಮಾಹಿತಿ ನೋಂದಣಿಯಾಗಿರದಿದ್ದರೆ ಈ ರೀತಿ ಸಮಸ್ಯೆ ಕಾಣಬಹುದು.
3.XML ರಚನೆಯಾಗದಿದ್ದರೆ ಈ ರೀತಿ ಕಾಣುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ 13ನೇ ಕಂತಿನ ಹಣ, ಯಾವಾಗ ಜಮಾ, ಯಾರಿಗೆ, ಯಾರಿಗೆಲ್ಲಾ ಇಲ್ಲ,ಯಾಕೆ, ತಿಳಿಯಿರಿ.

3.ಸರ್ಕಾರ ಪರಿಶೀಲನೆ ಮಾಡುವಾಗ ಅನುಸರಿಸುವ ಕ್ರಮಗಳೇನು?

1.ಮೇಲೆ ಕಾಣಿಸಿದ ಎಲ್ಲಾ ಮಾಹಿತಿಯ ಆಧಾರವನ್ನು Bhoomi ಸಾಫ್ಟವೇರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪರಿಶೀಲನೆಯನ್ನು ಸರ್ಕಾರ ಈ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡತ್ತದೆ.

2.1/02/2019 ರ ನಂತರ ಭೂ ಸ್ವಾಧಿನ ಆದ ಜಮೀನುಗಳು ( ಕಾಲಂ ನಂಬರ್‍ 10 ರಲ್ಲಿ ಪೌತಿ ಅಂತ ಇದ್ದರೆ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಒಂದು ವೇಳೆ 1/02/2019 ರ ನಂತರ ಕ್ರಯ, ದಾನ, ವಿಭಾಗ,ಈ ರೀತಿ ಇದ್ದರೆ ಅಂತಹ ಫಲಾನುಭವಿಗಳ ಅರ್ಜಿಯನ್ನು ಅನರ್ಹಗೊಳಿಸುತ್ತಾರೆ.

3.ಹಣ ಪಡೆಯುವ ಫಲಾನುಭವಿಗಳು ಮಾತ್ರ PM-Kisan E -KYC ಮಾಡಿಸಬೇಕಾಗುತ್ತದೆ.

4.ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇರುತ್ತದೆ.(ಒಂದು ರೇಷನ್ ಕಾರ್ಡ ಹೊಂದಿದ ಒಂದು ಕುಟುಂಬ)

ಇದನ್ನೂ ಓದಿ: ಅಡಿಕೆ ಬೆಳೆಯಲ್ಲಿ ಸುಳಿ ತಿಗಣೆ ಮತ್ತು ನುಸಿ ಬಾಧೆಯ ಲಕ್ಷಣ ಮತ್ತು ಹತೋಟಿ ಕ್ರಮಗಳು ಸಂಪೂರ್ಣ ಮಾಹಿತಿ:
ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಿರಿ.

ಇತ್ತೀಚಿನ ಸುದ್ದಿಗಳು

Related Articles