Thursday, September 19, 2024

PM kisan: ಫಲಾನುಭವಿಗಳು 15 ನೇ ಕಂತಿಗೆ ಅರ್ಹರಾಗಲು ಈ ಕೆಲಸ ಮಾಡುವುದು ಕಡ್ಡಾಯ :

ಆತ್ಮೀಯ ರೈತ ಬಾಂದವರೇ ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿ ಮಾಡಿಸಿದ್ದಿರಾ? ಹಾಗಾದರೆ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮ್ಮ ಹತ್ತಿರದವರು ಯಾರಾದರೂ ಈ ಯೋಜನೆಯ ಫಲಾನುಭವಿಗಳು ಆಗಿದ್ದರೆ ಅವರಿಗೂ ಈ ಸಂದೇಶ ಶೇರ್‍ ಮಾಡುವ ಮೂಲಕ ಹದಿನೈದನೇ ಕಂತಿನ ಫಲಾನುಭವಿಗಳಾಗಿ ಮುಂದುವರೆಯಿರಿ.

PM Kisan Scheme: ಪಿಎಂ ಕಿಸಾನ್ ಯೋಜನೆ ಎಂದರೇನು?


ಕೇಂದ್ರ ಸರ್ಕಾರದ ರೈತ ಕಲ್ಯಾಣ ಇಲಾಖೆಯಿಂದ ಜಾರಿಗೆಯಾದ ಯೋಜನೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯು ದೇಶದ ಎಲ್ಲಾ ರೈತ ಕುಟುಂಬಗಳಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚಿಗಾಗಿ ಕೇಂದ್ರ ಸರ್ಕಾರ ನೀಡುವ ಸಹಾಯಧನವಾಗಿದೆ. ಈ ಯೋಜನೆಯಡಿ ಸರ್ಕಾರ ಅರ್ಹ ರೈತ ಫಲಾನುಭವಿಗಳಿಗೆ ವಾರ್ಷಿಕ 6000/- ರೂ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಜಮೆ ಮಾಡುತ್ತದೆ.

ಈ ಯೋಜನೆ 2019 ನೇ ಸಾಲಿನಲ್ಲಿ ಕೇಂದ್ರ ಸಕಾರ ಜಾರಿಗೊಳಿಸಿದೆ.ಇಲ್ಲಿವರೆಗೂ ಸುಮಾರು ಹದಿನಾಲ್ಕು ಕಂತುಗಳ ಹಣ ಬಿಡುಗಡೆಯಾಗಿದೆ. ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಮೊತ್ತಕ್ಕಾಗಿ ಕಾಯುತ್ತಿದ್ದಾರೆ. ಈ ಮೊತ್ತವನ್ನು ಸರ್ಕಾರವು ನವೆಂಬರ್ ಮತ್ತು ಡಿಸೆಂಬರ್ 2023 ರ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಈ ಬಾರಿ ಬಹುತೇಕ ರೈತರಿಗೆ ಪಿಎಂ ಕಿಸಾನ್ ಕಂತು ಲಭ್ಯವಾಗದು ಏಕೆಂದರೆ ಅದಕ್ಕೆ ಹಲವಾರು ಕಾರಣಗಳು ಇವೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಹಲವಾರು ರೈತರಿಗೆ ಒಂದು ಸಣ್ಣ ಸಹಾಯವಾಗಿದೆ. ಯೋಜನೆಯಡಿ ಈಗಾಗಲೇ 14 ಕಂತುಗಳನ್ನು ವಿತರಿಸಲಾಗಿದ್ದು, 15 ನೇ ಕಂತಿನ ನಿರೀಕ್ಷೆಯಿದೆ. ಆದರೆ ಅರ್ಹ ರೈತರು ಈ ಸಹಾಯವನ್ನು ಕಳೆದುಕೊಳ್ಳಬಾರದು ಎಂದಾದರೆ ಕೆಲವು ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ. ಈ ಕಂತು ಯಾಕೆ ಲಭ್ಯವಾಗದು, ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಹಣ ಜಮಾ ಆಗದೇ ಇರಲು ಕಾರಣಗಳು:

E-kyc: ಇಕೆವೈಸಿ ಮಾಡದೇ ಇರುವುದು:

ರೈತರು ನೋಂದಣಿ ಮಾಡಿಸಿಕೊಂಡು E-KYC (ಇಕೆವೈಸಿ) (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಅನ್ನು ಪೂರ್ಣಗೊಳಿಸದ ರೈತರು ಈ ಯೋಜನೆಯಿಂದ ಕೈಬಿಡಲಾಗುವುದು, ನೀವು ಮುಂದಿನ ಕಂತಿನ ಮೊತ್ತವನ್ನು ಪಡೆಯಬೇಕಾದರೆ ಕೂಡಲೇ ಇಕೆವೈಸಿ ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ..


ಇ-ಕೆವೈಸಿ ಶೀಘ್ರ ಮಾಡಿ ನೀವು ಇನ್ನೂ ಇ-ಕೆವೈಸಿ ಮಾಡಿಲ್ಲದಿದ್ದರೆ ಮತ್ತು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಇನ್ನು ವಿಳಂಬ ಮಾಡಬೇಡಿ. ಇ-ಕೆವೈಸಿಯನ್ನು ಶೀಘ್ರವೇ ಮಾಡಿ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪಿಎಂ ಕಿಸಾನ್ ಯೋಜನೆ ವೆಬ್‌ಸೈಟ್ ಅಥವಾ ಹತ್ತಿರದ ಕೃಷಿ ಇಲಾಖೆ, ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ. ನೀವು ಇಕೆವೈಸಿ ಮಾಡದಿದ್ದರೆ ನಿಮಗೆ ಕಂತು ಲಭ್ಯವಾಗದು.

ಇದನ್ನೂ ಓದಿ: ಫಲಾನುಭವಿಗಳಿಗೆ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು ಎಂದು ಸಿಹಿಸುದ್ದಿ ನೀಡಿದ ಇಲಾಖೆ:
ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

E-kyc: ಇಕೆವೈಸಿ ಮಾಡಿಸಲು ಬೇಕಾದ ದಾಖಲೆಗಳು:

ಫಲಾನುಭವಿಗಳ ಆಧಾರ್‍ ಕಾರ್ಡ ಪ್ರತಿ
ಆಧಾರ್‍ ಕಾರ್ಡ ಗೆ ಜೋಡಣೆಯಾದ ಮೊಬೈಲ್ ನಂಬರ್‍
ಒಂದು ವೇಳೆ ಆಧಾರ್‍ ಕಾರ್ಡ ಗೆ ಮೊಬೈಲ್ ನಂಬರ್‍ ಜೋಡಣೆ ಆಗದೇ ಇದ್ದರೆ. Face Authentication for Pradhan Mantri Kisan Samman Nidhi mobile application ಮೂಲಕ E-kyc: ಇಕೆವೈಸಿ ಮಾಡಿಕೊಳ್ಳಬಹುದು. ಮೋಬೈಲ್ ಪ್ಲೆ ಸ್ಟೋರ್‍ ಲಭ್ಯವಿದೆ.

ಭೂಮಿಯ ದಾಖಲೆಗಳ ಪರಿಶೀಲನೆ ಮಾಡಲಾಗುವುದು:

ಈ ಯೋಜನೆತಡಿ ಪ್ರತಿ ಕಂತಿನ ಬಿಡುಗಡೆಯ ಮೊದಲು, ಫಲಾನುಭವಿಗಳ ಪಟ್ಟಿಗಳನ್ನು ಇಲಾಖೆಗಳು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. ಭೂ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಕೆಲವು ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ. ಈ ಪ್ರಕ್ರಿಯೆಯು ಮುಂಬರುವ ಕಂತಿನಲ್ಲಿ ನಡೆದ ಬಳಿಕ, ಫಲಾನುಭವಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಬಹುದು.

ಅರ್ಜಿ ನಮೂನೆಯನ್ನು ಪರಿಶೀಲಿಸಿ ನೀವು ಎಲ್ಲ ಅರ್ಹತಾ ಮಾನದಂಡಗಳನ್ನು ಹೊಂದಿದ್ದರೂ ಕೂಡಾ ನಿಮ್ಮ ಅರ್ಜಿ ನಮೂನೆಯಲ್ಲಿನ ದೋಷಗಳು ನಿಮಗೆ ಪಿಎಂ ಕಿಸಾನ್ ಮೊತ್ತ ಲಭ್ಯವಾಗದಂತೆ ಮಾಡುತ್ತದೆ. ಉದಾಹರಣೆಗೆ ನೋಂದಣಿ ಮಾಡುವ ಸಮಯದಲ್ಲಿ ನೀಡಿದ ದಾಖಲೆಗಳದ ಆಧಾರ್‍ ನಲ್ಲಿ ಲಿಂಗ, ಹೆಸರು, ವಿಳಾಸ , ಮೊಬೈಲ್ ಸಂಖ್ಯೆ ಅಥವಾ ಖಾತೆ ಸಂಖ್ಯೆಗಳಲ್ಲಿನ ತಿದ್ದುಪಡೆ ಮಾಡಿಸಿದ್ದರೆ ಅದನ್ನು ಇಲಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.ಇಲ್ಲವಾದರೆ ಕಂತು ಪ್ರಕ್ರಿಯೆಯನ್ನು ರದ್ದುಪಡಿಸಲಾಗುವುದು.

ಈ ಎಲ್ಲಾ ಪ್ರಕ್ರಿಯೆ ಮಾಡಿಸಿಕೊಂಡರೇ ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತ ಕುಟುಂಬಗಳು ವಾರ್ಷಿಕವಾಗಿ ಆರು ಸಾವಿರ ರೂಪಾಯಿ ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. 2000 ರೂಪಾಯಿಯ ಮೂರು ಕಂತಿನಂತೆ ಈ ಮೊತ್ತ ಲಭ್ಯವಾಗುತ್ತದೆ.

ಇದನ್ನೂ ಓದಿ: ಪಿ ಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸುವ ಮುನ್ನ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಅರ್ಜಿ ಹೀಗೆ ಸಲ್ಲಿಸಿ

ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ Farmer’s Corner ಗೆ ಹೋಗಿ ‘New Farmer Registration’

ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಟಾಕೋಡ್ ಅನ್ನು ಹಾಕಿ

ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ

ಹಂತ 5: YES ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ

ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್ ಔಟ್ ಅನ್ನು ತೆಗೆಯಿರಿ

ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles