Thursday, September 19, 2024

PM-Kisan pending reasons-ಕಿಸಾನ್ ಸಮ್ಮಾನ್ ರೂ.2000  ಹಣ ಬಂದಿಲ್ಲವೇ, ಇಲ್ಲಿವೇ ಕಾರಣಗಳು!

ಹೌದು ರೈತರೇ, ಕೇಂದ್ರ ಸರಕಾರದಿಂದ ದಿನಾಂಕ 18 ಜೂನ-2024 ರಂದು ಬಿಡುಗಡೆ ಮಾಡಲಾದ ಹಣವು ಸುಮಾರು ಜನ ರೈತರಿಗೆ ಬರದೆ ಬಾಕಿ ಆಗಿರುತ್ತದೆ. ಅದಕ್ಕೆ ಹಲವಾರು ಕಾರಣಗಳಿಂದ ಬಾರದೆ ಇರಲು ಸಾಧ್ಯತೆಗಳಿವೆ, ಅವು ಯಾವು ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ರೈತ ಭಾಂದವರಿಗೆ ನಮಸ್ಕಾರಗಳು, ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗಲು 2019 ರಿಂದ ರೈತರಿಗೆ ಪಿಎಂ ಕಿಸಾನ ಸಮ್ಮಾನ್ ನಿಧಿ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ರೂ.6000 ಸಾವಿರ ಹಣವನ್ನು ಮೂರು ಕಂತುಗಳಲ್ಲಿ 4 ತಿಂಗಳಿಗೊಮ್ಮೆ ರೂ.2000 ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತದೆ.

ಪಿಎಂಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ದೇಶದ 9.3 ಕೋಟಿ ರೈತರಿಗೆ ಸುಮಾರು 20000 ಸಾವಿರ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. 2019 ರಂದು ಹಾಗೂ ಇಲ್ಲಿಯವರೆಗೂ ಯಾರು ಎಲ್ಲಾ ಪಿಎಂ ಕಿಸಾನ ಯೋಜನೆಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ರೈತರ ಖಾತೆಗೆ ರೂ.2000 ಜಮೆ ಮಾಡಿದ್ದಾರೆ.

ಇದನ್ನೂ ಓದಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ.

ಕೇಂದ್ರ ಸರಕಾರವು ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಪಡೆಯಲು ರೈತರಿಗೆ ಈ ಹಣವು ಸಹಾಯವಾಗಲಿದೆ. ಹಾಗಾಗಿ ರೈತರು ಪಿಎಂ ಕಿಸಾನ್ ಯೋಜನೆಯ ಹಣವನ್ನು ಸದುಪಯೋಗಪಡೆದುಕೊಳ್ಳಬಹುದು. ಇದರಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವು ತುಂಬಾ ಪ್ರಯೋಜನಕಾರಿಯಾಗಿದೆ.

PM-Kisan pending reasons-ಕಿಸಾನ್ ಸಮ್ಮಾನ್ ನಿಧಿ ಹಣ ಬರದೆ ಇರಲು ಕಾರಣಗಳು:

1)E-kyc ಮಾಡಿಸದೆ ಬಾಕಿ ಇರುವ ರೈತರು.

2)ಒಂದೇ ಕುಟುಂಬ ಪರಿಶೀಲನೆಗೆ ಬಾಕಿ ಇರುವವರು.

3)ಕೃಷಿ ಜಮೀನು ವರ್ಗಾವಣೆ ಮತ್ತು ಮಾರಾಟ ಮಾಡಿರುವುದು.

4)RTC ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರುಗಳ ಬದಲಾವಣೆ ಇರುವವರು.

5)ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್(aadhar seeding) ಮಾಡದೆ ಇರುವವರು.

6)village VNO login physical verification ಬಾಕಿ ಇರುವವರು.

7)income tax file ಮಾಡಿರುವವರು.

ಇದನ್ನೂ ಓದಿ: ರೈತರೇ 2023 ರಲ್ಲಿ ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಪಹಣಿ/RTC ಗೆ ದಾಖಲಾದ ಬೆಳೆಯಾವುದು ಎಂದು ತಿಳಿಯಲು ಇಲ್ಲಿದೆ ಮಾಹಿತಿ!

ಈ ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಂದ ಹಾಗೂ ಇದರಲ್ಲಿ ಯಾವುದಾದರು ಒಂದು ಕಾರಣಗಳಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಬರದೆ ಬಾಕಿ ಇರುವ ಸಾದ್ಯತೆಗಳಿವೆ. ಇದನ್ನು ಪರಿಶೀಲನೆ ಮಾಡಲು ನಿಮ್ಮ ಹತ್ತಿರದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಮಾಡಿ ಮಾಹಿತಿ ತಿಳಿದು ಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles